ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ಧ ಹೋರಾಡುವ ತಾಕತ್ತಿಲ್ಲ ಎಂದು ಒಪ್ಪಿಕೊಂಡ ರಾಹುಲ್ ಗಾಂಧಿ!

|
Google Oneindia Kannada News

Recommended Video

ಬಿಜೆಪಿ ಎದುರಿಸುವ ತಾಕತ್ತು ಇಲ್ಲ ಎಂದು ಒಪ್ಪಿಕೊಂಡ ರಾಹುಲ್..!?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಯನಾಡಿನಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮಗೆ ಬಿಜೆಪಿ ವಿರುದ್ಧ ಸ್ಪರ್ಧಿಸುವ ಸಾಮರ್ಥ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಸಿಪಿಐ ನಾಯಕಿ ಬೃಂದಾ ಕಾರಟ್ ವಿಶ್ಲೇಷಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವೆಬ್ ಸೈಟ್ ವೊಂದರಲ್ಲಿ ಅವರು ಬರೆದ ಅಂಕಣದಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ದುರ್ಬಲಗೊಂಡಿದೆ. ಅವರ ನಾಯಕತ್ವದ ಅಸ್ತಿತ್ವವನ್ನು ಉತ್ತರ ಮತ್ತು ದಕ್ಷಿಣದಲ್ಲಿ ಉಳಿಸುವ ಸಲುವಾಗಿ ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ.

ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಎನ್ಡಿಎ ಅಭ್ಯರ್ಥಿ ಘೋಷಣೆ ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಎನ್ಡಿಎ ಅಭ್ಯರ್ಥಿ ಘೋಷಣೆ

ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದು ಎಡಪಕ್ಷದ ಮುಖಂಡರಲ್ಲಿ ಭಾರೀ ಬೇಸರವನ್ನುಂಟು ಮಾಡಿದೆ. ಎಡಪಕ್ಷ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುತ್ತಿರುವ ರಾಹುಲ್ ಗಾಂಧಿ ಅವರ ಈ ನಡೆಯ ಬಗ್ಗೆ ಬೃಂದಾ ಕಾರಟ್ ಅವರು ವ್ಯಕ್ತಪಡಿಸಿದ ಅಭಿಪ್ರಾಯದ ಸಾರಾಂಶ ಇಲ್ಲಿದೆ.

ಕರ್ನಾಟಕದಲ್ಲಿ ಸ್ಪರ್ಧಿಸಬಹುದಿತ್ತಲ್ಲ!

ಕರ್ನಾಟಕದಲ್ಲಿ ಸ್ಪರ್ಧಿಸಬಹುದಿತ್ತಲ್ಲ!

ರಾಹುಲ್ ಗಾಂಧಿ ಅವರಿಗೆ ದಕ್ಷಿಣ ಭಾರತದಿಂದಲೂ ಸ್ಪರ್ಧಿಸುವ ಆಸೆ ಇದ್ದರೆ, ಕೇರಳವೇ ಏಕೆ ಬೇಕಿತ್ತು? ಪಕ್ಕದ ಕರ್ನಾಟಕದಿಂದ ಸ್ಪರ್ಧಿಸಬಹುದಿತ್ತಲ್ಲ?! ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವೇ ಅಸ್ತಿತ್ವದಲ್ಲಿದೆ. ಹೀಗಿರುವಾಗ ಕರ್ನಾಟಕದ ಯಾವುದಾದರೂ ಕ್ಷೇತ್ರ ಆಯ್ದುಕೊಳ್ಳುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಭಯವಾಗಿದ್ದೇಕೆ? ಬಿಜೆಪಿಯನ್ನು ಎದುರಿಸುವ ಧೈರ್ಯ ಅವರಿಗಿಲ್ಲವೇ?- ಬೃಂದಾ ಕಾರಟ್

ವಯನಾಡಲ್ಲಿ ರಾಹುಲ್ ಗಾಂಧಿ ಗೆದ್ದರೂ ಅದು ಕಾಂಗ್ರೆಸ್ ಗೇ ಮಾರಕ! ವಯನಾಡಲ್ಲಿ ರಾಹುಲ್ ಗಾಂಧಿ ಗೆದ್ದರೂ ಅದು ಕಾಂಗ್ರೆಸ್ ಗೇ ಮಾರಕ!

ಕಾಂಗ್ರೆಸ್ ಗೆ ಬಿಜೆಪಿಗಿಂತ ಎಡಪಕ್ಷವೇ ವಿರೋಧಿಯೇ?

ಕಾಂಗ್ರೆಸ್ ಗೆ ಬಿಜೆಪಿಗಿಂತ ಎಡಪಕ್ಷವೇ ವಿರೋಧಿಯೇ?

ಕೇರಳದಲ್ಲಿ ಬಿಜೆಪಿ ಹೆಚ್ಚು ಅಸ್ತಿತ್ವದಲ್ಲಿಲ್ಲ ಎಂಬುದು ಕಾಂಗ್ರೆಸ್ ಗೂ ಗೊತ್ತು. ಹೀಗಿರುವಾಗ ಕೇರಳದಲ್ಲಿ ಸ್ಪರ್ಧೆಗೆ ನಿಂತಿರುವುದನ್ನು ನೋಡಿದರೆ, ಕಾಂಗ್ರೆಸ್ ಗೆ ಬಿಜೆಪಿಗಿಂತ ಹೆಚ್ಚು ಎಡಪಕ್ಷಗಳನ್ನೇ ಸೋಲಿಸುವ ಇರಾದೆ ಇದ್ದಂತೆ ಕಾಣುತ್ತದೆ. ಅಥವಾ ಬಿಜೆಪಿಯೊಂದಿಗೆ ಹೋರಾಡುವ ಸಾಮರ್ಥ್ಯವಿಲ್ಲದೆ, ಹೇಗೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧೆಗೆ ನಿಂತಿದ್ದಾರೆ! -ಬೃಂದಾ ಕಾರಟ್

ವಯನಾಡಲ್ಲಿ ರಾಹುಲ್ ಸೋಲಿಗೆ ಪಣತೊಟ್ಟ ಎಡಪಕ್ಷ, ರೋಚಕತೆಯತ್ತ ಕಣ ವಯನಾಡಲ್ಲಿ ರಾಹುಲ್ ಸೋಲಿಗೆ ಪಣತೊಟ್ಟ ಎಡಪಕ್ಷ, ರೋಚಕತೆಯತ್ತ ಕಣ

ರಾಹುಲ್ ಗಾಂಧಿ ನೀಡುತ್ತಿರುವ ಸಂದೇಶವೇನು?

ರಾಹುಲ್ ಗಾಂಧಿ ನೀಡುತ್ತಿರುವ ಸಂದೇಶವೇನು?

ಅಷ್ಟಕ್ಕೂ ರಾಹುಲ್ ಗಾಂಧಿ ನೀಡುತ್ತಿರುವ ಸಂದೇಶವೇನು? ಕಳೆದ ಐದು ವರ್ಷಗಳಿಂದ ಮೋದಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ದೇಶದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು, ಜನರ ಹಕ್ಕುಗಳನ್ನು ಕಸಿದಿದ್ದು, ಪ್ರಜಾಪ್ರಭುತ್ವಕ್ಕೆ ಸವಾಲೆಸೆದಿದ್ದು ಈ ಎಲ್ಲದರ ವಿರುದ್ಧ ಒಂದಾಗಿ ಮತ ಕೇಳುವ ಕೆಲಸವನ್ನು ರಾಹುಲ್ ಗಾಂಧಿ ಮಾಡಬೇಕಿತ್ತು. ಅದರೆ ರಾಹುಲ್ ಗಾಂಧಿ ಮಾಡಿದ್ದೇನು? ಯಾರ ವಿರುದ್ಧ ಹೋರಾಡಬೇಕಿತ್ತೋ, ಅವರ ಅಸ್ತಿತ್ವವೇ ಇಲ್ಲದ ಕಡೆಯಲ್ಲಿ ಸ್ಪರ್ಧೆಗಿಳಿದು, ಯಾವ ಸಂದೇಶ ಕೊಡುತ್ತಿದ್ದಾರೋ!- ಬೃಂದಾ ಕಾರಟ್

ಅರ್ಥವಾಗದ ನಡೆ

ಅರ್ಥವಾಗದ ನಡೆ

ಈ ಬಾರಿಯ ಚುನಾವನೆಯಲ್ಲಿ ಕಾಂಗ್ರೆಸ್ ಗೆ ಬಿಜೆಪಿಯನ್ನು ಸೋಲಿಸುವ ಅಗತ್ಯವಿದ್ದಂತೆ ಕಾಣುತ್ತಿಲ್ಲ. ಏಕಾಂಗಿಯಾಗಿ ಹೋರಾಡಿ ಬಿಜೆಪಿಯನ್ನು ಸೋಲಿಸುವುದಕ್ಕೆ ತನಗೆ ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ಸಿಗೂ ಗೊತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಒಲ್ಲೆ ಎಂದ ಕಾಂಗ್ರೆಸ್, ಅತ್ತ ದೆಹಲಿಯಲ್ಲೂ ಎಎಪಿಯೇ ಮೈತ್ರಿಗೆ ಮಂದೆ ಬಂದರೂ ಒಪ್ಪಲಿಲ್ಲ. ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ಪ್ರಯತ್ನಿಸಿದ್ದರೆ ಎಸ್ಪಿ-ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದಿತ್ತು. ಖಾಂಗ್ರೆಸ್ ಉದ್ದೇಶ ಬಿಜೆಪಿಯನ್ನು ಸೋಲಿಸುವುದೇ ಆಗಿದ್ದರೆ ಈ ಎಲ್ಲವನ್ನೂ ಅದು ಮಾಡಿರುತ್ತಿತ್ತು. ಆದರೆ ಅದರ ಉದ್ದೇಶ ಅರ್ಥವಾಗುತ್ತಿಲ್ಲ-ಬೃಂದಾ ಕಾರಟ್

ಉತ್ತಮ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ!

ಉತ್ತಮ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ!

ದೇಶದಲ್ಲಿ ಮೋದಿ ಆಡಳಿತದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿರಲಿಲ್ಲ. ರೈತರು ಮತ್ತು ಕಾರ್ಮಿಕ ವರ್ಗಕ್ಕೆ ಮೋದಿ ಸರ್ಕಾರದ ಬಗ್ಗೆ ಬೇಸರವಿದೆ. ಜಿಎಸ್ಟಿ, ಅಪನಗದೀಕರಣಗಳ ಬಗ್ಗೆ ವಿರೋಧವಿದೆ. ಈ ಎಲ್ಲ ವಿಷಯಗಳನ್ನೂ ಇಟ್ಟುಕೊಂಡು ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಹೋರಾಡಬೇಕು. ಆದರೆ ಕಾಂಗ್ರೆಸ್ ತನ್ನ ಕೈಯ್ಯಾರೆ ಇಂಥ ಉತ್ತಮ ಅವಕಾಶವನ್ನು ಕಳೆದುಕೊಳ್ಳುತ್ತಿದೆ ಎಂಬುದು ವಿಷಾದನೀಯ- ಬೃಂದಾ ಕಾರಟ್

English summary
CPI(M) leader Brinda Karat in one of her columns in a website writes, 'Rahul Gandhi and Congress don't have guts to fight BJP, so he is contesting from Wayanad, where left parties are dominant,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X