ನವಭಾರತಕ್ಕೆ ಸ್ವಾಗತ... ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್!

Recommended Video

      ರಾಹುಲ್‌ ವ್ಯಂಗ್ಯಭರಿತ ಟ್ವೀಟ್ | Oneindia Kannada

      ನವದೆಹಲಿ, ಆಗಸ್ಟ್ 29: ನಿಷೇಧಿತ ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಶಂಕೆ ಮತ್ತು ಮೋದಿ ಹತ್ಯೆಗೆ ಯತ್ನಿಸಿದ ಆರೋಪದೊಂದಿಗೆ ಹಲವು ವಿಚಾರವಾದಿಗಳನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಲವಾಗಿ ಖಂಡಿಸಿದ್ದಾರೆ.

      'ನವ ಭಾರತಕ್ಕೆ ಸ್ವಾಗತ' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾತದಲ್ಲಿ ಕೇವಲ ಆರೆಸ್ಸೆಸ್ ಎಂಬ ಎನ್ ಜಿಒಕ್ಕೆ ಮಾತ್ರ ಜಾಗವಿದೆ. ಉಳಿದೆಲ್ಲ ಎನ್ ಜಿಒಗಳನ್ನು ಮುಚ್ಚಿ, ವಿಚಾರವಾದಿಗಳನ್ನು ಜೈಲಿಗೆ ತಳ್ಳಿ, ದೂರು ನೀಡುವವರಿಗೆ ಗುಂಡಿಡಿ... ನವ ಭಾರತಕ್ಕೆ ಸ್ವಾಗತ' ಎಂದು ಅವರು ಹೇಳಿದ್ದಾರೆ.

      ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ಎಂಬಲ್ಲಿ ಕಳೆದ ವರ್ಷ ನಡೆದ ಗಲಭೆಯಲ್ಲೂ ವಿಚಾರವಾದಿಗಳ ಕೈವಾಡವಿದೆ ಎಂದು ಅವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಸೇರಿದ್ದಾರೆ.

      Rahul Ganadhi blames condems central government for arresting social activists

      ಕಾರ್ಯಕರ್ತರ ಬಂಧನಕ್ಕೆ ಇಡೀ ದೇಶದಾದ್ಯಂತ ವಿರೋಧ ವ್ಯಕ್ತವಾಗಿದ್ದು, ಎನ್ ಡಿಎ ಸರ್ಕಾರ ತುರ್ತುಪರಿಸ್ಥಿತಿ ಹೇರುತ್ತಿದೆ ಎಂದು ಹಲವರು ದೂರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+