ಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧ

ನವದೆಹಲಿ, ಸೆಪ್ಟೆಂಬರ್ 22: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ನೀಡಿದ ಸ್ಫೋಟಕ ಮಾಹಿತಿಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದರು.

'ಮೊಟ್ಟ ಮೊದಲ ಬಾರಿಗೆ ಫ್ರೆಂಚ್ ಮಾಜಿ ಅಧ್ಯಕ್ಷರೊಬ್ಬರು ನಮ್ಮ ಪ್ರಧಾನಿಯನ್ನು 'ಕಳ್ಳ' ಎಂದು ಕರೆದಿದ್ದಾರೆ' ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.

ರಫೇಲ್ ಯುದ್ಧ ವಿಮಾನ ಬಿಡಿಭಾಗಗಳ ತಯಾರಿಕೆಗೆ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಹೆಸರನ್ನೇ ಸೂಚಿಸುವಂತೆ ಭಾರತ ಸರ್ಕಾರವೇ ಫ್ರಾನ್ಸ್ ಸರ್ಕಾರಕ್ಕೆ ಕೋರಿತ್ತು ಎಂಬ ಒಲಾಂಡ್ ಹೇಳಿಕೆಯ ನಂತರ ಎನ್ ಡಿಎ ಸರ್ಕಾರದ ವಿರುದ್ಧ ಹೂಡಲು ತನ್ನ ಭತ್ತಳಿಕೆಯಲ್ಲಿ ಕಾಂಗ್ರೆಸ್ ಸಾಕಷ್ಟು ಬಾಣಗಳನ್ನು ಸಿದ್ಧಪಡಿಸಿಕೊಂಡಿದೆ.

ಶುಕ್ರವಾರವೂ ಈ ಕುರಿತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಇಂದು ಸುದ್ದಿಗೋಷ್ಟಿಯನ್ನೇ ನಡೆಸಿ, ರಫೇಲ್ ಡೀಲ್ ಕುರಿತ ಸಂಪೂರ್ಣ ಮಾಹಿತಿಗೆ ಪಟ್ಟು ಹಿಡಿದಿದ್ದಾರೆ.

ರಾಹುಲ್ ಗಾಂಧಿ ಅವರ ಸುದ್ದಿಗೋಷ್ಠಿಯ ಮುಖ್ಯಾಂಶ ಇಲ್ಲಿದೆ.

ಸತ್ಯವೋ, ಸುಳ್ಳೋ ? ನೀವೇ ಹೇಳಿ!

ಸತ್ಯವೋ, ಸುಳ್ಳೋ ? ನೀವೇ ಹೇಳಿ!

"ಮೊಟ್ಟ ಮೊದಲ ಬಾರಿಗೆ ಫ್ರೆಂಚ್ ಮಾಜಿ ಅಧ್ಯಕ್ಷರೊಬ್ಬರು ಭಾರತದ ಪ್ರಧಾನಿಯನ್ನು ಕಳ್ಳ ಎಂದು ಕರೆದಿದ್ದಾರೆ! ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಹೆಸರನ್ನೇ ರಫೇಲ್ ಯುದ್ಧ ವಿಮಾನ ಬಿಡಿಭಾಗಗಳ ತಯಾರಿಕೆಗೆ ಸರ್ಕಾರವೇ ಸೂಚಿಸಲು ಹೇಳಿತ್ತು ಎಂಬ ಆರೋಪ ಸತ್ಯವೋ, ಸುಳ್ಳೋ ಎಂಬುದನ್ನು ಸ್ವತಃ ಪ್ರಧಾನಿ ನರೇಂದ್ರ ಮೊದಿಯವರೇ ಸ್ಪಷ್ಟಪಡಿಸಬೇಕು" ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು

ಮೋದಿ ದೋಷಿ ಎಂಬುದು ನಮಗೆ ಗೊತ್ತು!

ಮೋದಿ ದೋಷಿ ಎಂಬುದು ನಮಗೆ ಗೊತ್ತು!

"ರಫೇಲ್ ಡಿಲ್ ವಿಷಯದಲ್ಲಿ ಮೋದಿ ದೋಷಿ ಮತ್ತು ಭ್ರಷ್ಟ ಎಂಬುದು ನಮಗೆ ಗೊತ್ತು. ದೇಶದ ಚೌಕಿದಾರ, ಕಳ್ಳನಾಗಿದ್ದಾರೆ ಎಂಬುದು ಇಂದು ದೇಶದ ಜನರಿಗೇ ಗೊತ್ತಾಗಿದೆ. ಈ ಕುರಿತು ಮೌನ ಮುರಿದು ಮಾತನಾಡಿ"- ರಾಹುಲ್ ಗಾಂಧಿ

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಮನೋಹರ್ ಪರಿಕ್ಕರ್ ಮೀನು ಮಾರುತ್ತಿದ್ದರೇ?

ಮನೋಹರ್ ಪರಿಕ್ಕರ್ ಮೀನು ಮಾರುತ್ತಿದ್ದರೇ?

"ರಫೇಲ್ ಡೀಲ್ ಗೆ ಸಂಬಂಧಿಸಿದ ಒಪ್ಪಂದದಲ್ಲಿ ಯಾವಾಗ ಬದಲಾವಣೆಯಾಯಿತು ಎಂಬುದು ನಮಗೆ ಗೊತ್ತಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳುತ್ತಾರೆ. ಅವರಿಗೆ ಗೊತ್ತಿಲ್ಲ ಅಂದರೇನು? ಆಗ ಅವರೇನು ಗೋವಾ ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದರೇ?"- ರಾಹುಲ್ ಗಾಂಧಿ

ಸೇನೆ ಮೇಲೆ ಸರ್ಜಿಕಲ್ ಸ್ಟ್ರೈಕ್

"ಪ್ರಧಾನಿ ಮತ್ತು ಅನಿಲ್ ಅಂಬಾನಿ ಇಬ್ಬರೂ ಸೇರಿ ಭಾರತೀಯ ರಕ್ಷಣಾ ದಳದ ಮೇಲೆ 130 ಕೋಟಿ ರೂ. ಮೌಲ್ಯದ ಸರ್ಜಿಕಲ್ ಸ್ಟ್ರೈಕ್ ಅನ್ನು ನೆರವೇರಿಸಿದ್ದಾರೆ. ಮೋದಿಯವರೇ, ನೀವು ನಮ್ಮ ಹುತಾತ್ಮ ಸೈನಿಕರಿಗೆ ಅಗೌರವ ನೀಡಿದ್ದೀರಿ. ನೀವು ಭಾರತೀ ಆತ್ಮಗಳಿಗೆ ವಂಚನೆ ಮಾಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು" ಎಂದು ಈ ಮೊದಲು ರಾಹುಲ್ ಗಾಂಧಿ ಟ್ವೀಟ್ ಸಹ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+