• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಮೂಹಿಕ ಅತ್ಯಾಚಾರ: ಯೋಗಿ ಸರ್ಕಾರದಲ್ಲೇ ಏನೋ ತಪ್ಪಿದೆ ಎಂದ ಪ್ರಿಯಾಂಕಾ ಗಾಂಧಿ

|

ನವದೆಹಲಿ, ಜನವರಿ 06: ಉತ್ತರ ಪ್ರದೇಶದಲ್ಲಿ ದೆಹಲಿ ಮಾದರಿಯ ಸಾಮೂಹಿ ಅತ್ಯಾಚಾರ ಮತ್ತು ಕೊಲೆ ನಡೆದಿದ್ದು, ಸರ್ಕಾರದಲ್ಲೇ ಏನೋ ದೋಷವಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮಹಿಳಾ ಭದ್ರತೆಯ ವಿಷಯದಲ್ಲಿ ಉತ್ತರ ಪ್ರದೇಶ ಆಡಳಿತದ ಉದ್ದೇಶಗಳಲ್ಲಿ ಏನೋ ದೋಷವಿದೆ. ಉತ್ತರ ಪ್ರದೇಶ ಸರ್ಕಾರವು ಹತ್ರಾಸ್‌ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿಲ್ಲ.

ಬದಲಿಗೆ ಅಧಿಕಾರಿಗಳನ್ನು ರಕ್ಷಿಸಿ, ಸಂತ್ರಸ್ತರ ಧ್ವನಿಯನ್ನು ನಿಗ್ರಹಿಸಿತ್ತು. ಇದೀಗ ಬದನೌ ಜಿಲ್ಲೆಯಲ್ಲೂ ಪೊಲೀಸ್‌ ಅಧಿಕಾರಿಗಳು, ಸಂತ್ರಸ್ತರ ಕುಟುಂಬದವರ ಮನವಿಗೆ ಕಿವಿಗೊಡಲಿಲ್ಲ.

ಅಷ್ಟೇ ಅಲ್ಲದೆ ಘಟನಾ ಸ್ಥಳವನ್ನು ಪರಿಶೀಲಿಸದೆ ನಿರ್ಲಕ್ಷ್ಯ ತೋರಿದರು. ಮಹಿಳೆಯ ಭದ್ರತೆ ಬಗ್ಗೆ ಉತ್ತರ ಪ್ರದೇಶ ಸರ್ಕಾರದ ಉದ್ದೇಶಗಳಲ್ಲಿ ದೋಷವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹತ್ರಾಸ್ ವಿವಾದ ತಣ್ಣಗಾಗುವ ಮೊದಲೇ ದೆಹಲಿಯ ನಿರ್ಭಯಾ ಪ್ರಕರಣವನ್ನು ನೆನಪಿಸುವ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ದೇಗುಲಕ್ಕೆ ತೆರಳಿದ್ದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ಮರ್ಮಾಂಗಕ್ಕೆ ರಾಡ್ ತೂರಿಸಿ ಹತ್ಯೆ ಮಾಡಲಾಗಿದೆ.

ಈ ವಿಚಾರ ಉತ್ತರ ಪ್ರದೇಶದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಕಿಡಿಕಾರಿದ್ದು, ಯೋಗಿ ಸರ್ಕಾರದ ನಡವಳಿಕೆಯಲ್ಲೇ ಏನೋ ತಪ್ಪಿದೆ ಎಂದು ಹೇಳಿದ್ದಾರೆ.

English summary
Congress leader Priyanka Gandhi Vadra hit out at the Adityanath government on Wednesday over the gang rape and murder in Budaun district, alleging that there was something wrong in the intentions of the Uttar Pradesh administration on the issue of women's security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X