• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಟ್ಸಾಪ್ ಗೂಢಚರ್ಯೆಯಲ್ಲಿ ಪ್ರಿಯಾಂಕಾ ಗಾಂಧಿ ಫೋನ್ ಹ್ಯಾಕ್: ಕಾಂಗ್ರೆಸ್

|
Google Oneindia Kannada News

ನವದೆಹಲಿ, ನವೆಂಬರ್ 3: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಫೋನ್ ಕೂಡ ಹ್ಯಾಕ್ ಆಗಿದೆ. ಈಗಾಗಲೇ ಯಾರ ಫೋನ್ ಗಳಿಗೆ ಹ್ಯಾಕ್ ಮಾಡುವ ಮುನ್ನ ಸಂದೇಶಗಳು ಬಂದಿವೆಯೋ ಅದೇ ರೀತಿ ಸಂದೇಶ ಪ್ರಿಯಾಂಕಾ ಗಾಂಧಿ ಅವರಿಗೂ ಬಂದಿದೆ ಎಂದು ಕಾಂಗ್ರೆಸ್ ವಕ್ತಾರರಾದ ರಣ್ ದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಹಾಗೂ ಮಾಜಿ ಸಂಸದರಾದ ಸಂತೋಷ್ ಭಾರತೀಯ ಅವರ ಫೋನ್ ಕೂಡ ಹ್ಯಾಕ್ ಆಗಿದೆ. ವಾಟ್ಸಾಪ್ ಆರೋಪ ಮಾಡಿದಂತೆ, ವಾಟ್ಸಾಪ್ ಅಪ್ಲಿಕೇಷನ್ ಬಳಸಿಕೊಂಡಿರುವ ಇಸ್ರೇಲಿನ ಸಂಸ್ಥೆಯೊಂದು ಜಗತ್ತಿನಾದ್ಯಂತ ಸಾವಿರದ ನಾನೂರು ಮಂದಿ ಮೇಲೆ ಗೂಢಚರ್ಯೆ ಮಾಡಿದೆ.

ಭಾರತದ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಇಸ್ರೇಲಿ ಗೂಢಚಾರಿಕೆ ಏನು? ಏಕೆ?ಭಾರತದ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಇಸ್ರೇಲಿ ಗೂಢಚಾರಿಕೆ ಏನು? ಏಕೆ?

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಶನಿವಾರ ಮಾತನಾಡಿ, ನನ್ನ ಫೋನ್ ಕದ್ದಾಲಿಕೆ ಆಗಿದೆ. ಅದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ ಎಂದಿದ್ದಾರೆ. ಸುರ್ಜೇವಾಲಾ ಮಾತನಾಡಿ, ಇದೊಂದು ಗಂಭೀರ ವಿಚಾರ. ಇಬ್ಬರು ರಾಜಕೀಯ ನಾಯಕರು ತಮ್ಮ ಫೋನ್ ಕದ್ದಾಲಿಕೆ ಆದ ಹಾಗೂ ಹ್ಯಾಕ್ ಆದ ಬಗ್ಗೆ ಆರೋಪ ಮಾಡಿದ್ದಾರೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥರಾದ ಅಮಿತ್ ಮಾಲವೀಯ, ಇಲ್ಲದನ್ನು ಕಾಂಗ್ರೆಸ್ ಊಹಿಸಿಕೊಳ್ಳುತ್ತಿದೆ. ಮಾಧ್ಯಮಗೋಷ್ಠಿ ವೇಳೆ ರಾಹುಲ್ ಗಾಂಧಿ ಮುಖದ ಮೇಲೆ ಹಸಿರು ಬಣ್ಣದ ದೀಪ ಕಂಡಿತ್ತು. ಅದಕ್ಕೆ ರಾಹುಲ್ ಜೀವ ಅಪಾಯದಲ್ಲಿ ಇದೆ ಎಂದು ಹೇಳಿತ್ತು. ಇದು ಕಾಂಗ್ರೆಸ್ ನಾಯಕರ ಸಾರ್ವಜನಿಕ ಜೀವನದ ವಿಶ್ವಾಸಾರ್ಹತೆಯ ಮಟ್ಟ ಎಂದು ಟ್ವೀಟ್ ಮಾಡಿದ್ದಾರೆ.

English summary
Congress alleged that, party general secretary Priyanka Gandhi's phone hacked in whats app snooping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X