ಒಬ್ಬ ರಾಜಕಾರಣಿಗೆ ಒಂದೇ ಸೀಟು: ಸುಪ್ರೀಂ ಗೆ ಚು.ಆಯೋಗ ಮನವಿ

ನವದೆಹಲಿ, ಏಪ್ರಿಲ್ 05: "ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ರಾಜಕಾರಣಿಗಳು ಸ್ಪರ್ಧಿಸದಂತೆ ನಿರ್ಬಂಧ ಹೇರಿ" ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಅನ್ನು ಕೋರಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಸುಪ್ರೀಂ ಕೋರ್ಟಿಗೆ ಆಯೋಗ ಸಲ್ಲಿಸಿದ ಅಫಿಡವಿಟ್ ನಲ್ಲಿ ಜನಪ್ರತಿನಿಧಿ ಕಾಯ್ದೆ(Representation of People Act) ಯ ಸೆಕ್ಷನ್ 33(7)ರಲ್ಲಿ ತಿದ್ದುಪಡಿ ತಂದು, ಒಬ್ಬ ರಾಜಕಾರಣಿ ಕೇವಲ ಒಂದೇ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುವಂತೆ ನಿರ್ಬಂಧ ಹೇರುವಂತೆ ಮನವಿ ಮಾಡಿದೆ.

ಒದು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿಲ್ಲದ ರಾಜಕಾರಣಿಗಳು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಾವು ಕಂಡಿದ್ದೇವೆ. ಅಥವಾ ಆ ಪಕ್ಷದಿಂದ ನಿರ್ದಿಷ್ಟ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಇಲ್ಲವೆಂದಾದರೆ ಎರಡು ಕ್ಷೇತ್ರಗಳಿಗೆ ಒಬ್ಬರೇ ಸ್ಪರ್ಧಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್, ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮುಂತಾದ ಘಟಾನುಘಟಿಗಳೇ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ನಿಂತು ಚುನಾವಣೆ ಎದುರಿಸಿದ್ದಾರೆ.

Prevent politicians to contest from multiple seats: EC to SC

ಆದರೆ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸಿ, ಎರಡರಲ್ಲೂ ಜಯಗಳಿಸಿದ್ದೇ ಆದಲ್ಲಿ ಆತ ಕಡ್ಡಾಯವಾಗಿ ಯಾವುದಾದರೊಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ಇದರಿಂದಾಗಿ ಉಪಚುನಾವಣೆ ನಡದೆಯುವುದು ಅನಿವಾರ್ಯವಾಗುತ್ತದೆ. ಅನಗತ್ಯವಾಗಿ ಸಾರ್ವಜನಿಕ ಬೊಕ್ಕಸ ಖಾಲಿ ಮಾಡುವುದಕ್ಕಿಂತ ಕೇವಲ ಒಂದೇ ಸೀಟಿನಿಂದ ಸ್ಪರ್ಧಿಸುವಂತೆ ನಿರ್ಬಂಧ ಹೇರುವುದು ಒಳಿತು ಎಂಬುದು ಆಯೋಗದ ಅಭಿಪ್ರಾಯ. ಅಕಸ್ಮಾತ್ ಎರಡು ಕ್ಷೇತ್ರಗಳಿಂದಲೂ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಯೇ ನಂತರದ ಉಪಚುನಾವಣೆಯ ವೆಚ್ಚವನ್ನೂ ಭರಿಸಬೇಕಾಗುತ್ತದೆ ಎಂಬ ಕಾನೂನನ್ನಾದರೂ ಜಾರಿಗೆ ತರಬೇಕು ಎಂದು ಆಯೋಗ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+