ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಆ ಎರಡು ನಿಗೂಢ ಪತ್ರಗಳು

|
Google Oneindia Kannada News

ನವದೆಹಲಿ, ಆಗಸ್ಟ್ 29: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವ ಮಾಹಿತಿಯನ್ನು ಒಳಗೊಂಡ ಎರಡು ಪತ್ರಗಳು ಪೊಲೀಸರ ಕೈ ಸೇರಿರುವ ಆಘಾತಕಾರಿ ವಿಷಯ ಹೊರಬಿದ್ದಿದೆ.

ಈ ಪತ್ರದ ಕುರಿತು ಇದಕ್ಕೂ ಮುನ್ನವೂ ಒಮ್ಮೆ ಚರ್ಚೆಯಾಗಿತ್ತು. ಆದರೆ ವಿಚಾರವಾದಿಗಳ ಬಂಧನದ ನಂತರ ಈ ಪತ್ರಗಳು ಇದೀಗ ಮತ್ತಷ್ಟು ಮಹತ್ವ ಪಡೆದಿದೆ.

ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ? ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?

ಒಂದು ಪತ್ರ 2016 ರಲ್ಲೇ ಬರೆದಿದ್ದಾಗಿದ್ದರೆ, ಇನ್ನೊಂದು 2017 ರದ್ದು. 2016 ರ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಗೃಹಮಂತ್ರಿ ರಾಜನಾಥ್ ಸಿಂಗ್ ಅವರ ಹತ್ಯೆಯ ಕುರಿತು ಉಲ್ಲೇಖಿಸಲಾಗಿದೆ. ಅದಕ್ಕಾಗಿ ಮಾವೋವಾದಿಗಳಲು ಸಂಚು ರೂಪಿಸುತ್ತಿರುವದೂ ಈ ಪತ್ರದ ಮೂಲಕ ತಿಳಿದುಬಂದಿದೆ.

Police recieves 2 letters quotes PM Modi assassination

2017 ರ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿಯೇ ನರೇಂದ್ರ ಮೋದಿ ಅವರನ್ನೂ ಹತ್ಯೆಗೈಯ್ಯುವ ಬಗ್ಗೆ ಚರ್ಚೆ ನಡೆದಿದೆ! ಎರಡನೇ ಪತ್ರದ ಆರಂಭದಲ್ಲಿ 'ಕಾಮ್ರೆಡ್ ಪ್ರಕಾಶ್' ಎಂದು ಸಂಬೋಧನೆ ಮಾಡಿದ್ದು ಸಹ ವಿವಾದ ಸೃಷ್ಟಿಸಿತ್ತು.

'ಕಾಮ್ರೆಡ್ ಪ್ರಕಾಶ್' ಎಂದು ಸಂಬೋಧಿಸಿದ ಪತ್ರದ ಕುರಿತು ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶ

ಮೋದಿ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿರುವುದು ಪತ್ರದ ಮೂಲಕ ತಿಳಿದಿರುವುದು ಮತ್ತು ಮಹಾರಾಷ್ಟ್ರದಲ್ಲಿ ಕಳೆದ ಜನವರಿಯಲ್ಲಿ ನಡೆದ ಭೀಮಾ ಕೊರೆಗಾಂವ್ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ವಿಚಾರವಾದಿಗಳನ್ನು ಬಂಧಿಸಲಾಗಿದ್ದು, ವಿಚಾರವಾದಿಗಳ ಬಂಧನವನ್ನು ದೇಶದಾದ್ಯಂತ ಹಲವರು ಖಂಡಿಸಿದ್ದಾರೆ.

English summary
2 letters which quotes plan of Prime minister Narendra Modi's assassination become a matter of debate now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X