ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಬಹುಮತದಿಂದ ನಡೆಯಬಹುದು, ದೇಶ ನಡೆಯುವುದು ಸಹಮತದಿಂದ: ಮೋದಿ

|
Google Oneindia Kannada News

ನವದೆಹಲಿ, ಫೆಬ್ರವರಿ 11: ಬಿಜೆಪಿಯು ಯಾವಾಗಲೂ 'ರಾಜನೀತಿ'ಗಿಂತಲೂ ಮುಖ್ಯವಾಗಿ 'ರಾಷ್ಟ್ರನೀತಿ'ಗೆ ಆದ್ಯತೆ ನೀಡುತ್ತದೆ. ತನ್ನ ರಾಜಕೀಯ ಎದುರಾಳಿಗಳಿಗೂ ಗೌರವ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೀನದಯಾಳ್ ಉಪಾಧ್ಯಾಯ್ ಅವರ 53ನೇ ಪುಣ್ಯತಿಥಿಯ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಪಕ್ಷವು ರಾಜಕೀಯ ಅಸ್ಪೃಶ್ಯತೆಯಲ್ಲಿ ನಂಬಿಕೆ ಇರಿಸಿಲ್ಲ. ಮೌಲ್ಯಯುತ ಸಹಮತದ ಮೂಲಕ ದೇಶವನ್ನು ನಡೆಸಲಾಗುತ್ತಿದೆ ಎಂದರು.

 5 ತಿಂಗಳ ಮಗುವಿನ ಜೀವ ರಕ್ಷಣೆಗೆ ಪ್ರಧಾನಿಯಿಂದ 6 ಕೋಟಿ ರೂ. ತೆರಿಗೆ ವಿನಾಯಿತಿ 5 ತಿಂಗಳ ಮಗುವಿನ ಜೀವ ರಕ್ಷಣೆಗೆ ಪ್ರಧಾನಿಯಿಂದ 6 ಕೋಟಿ ರೂ. ತೆರಿಗೆ ವಿನಾಯಿತಿ

ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಇಂದು ದೇಶದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ನಡೆಯುತ್ತಿವೆ. ಎಲ್ಲ ಭಾರತೀಯರೂ ಹೆಮ್ಮೆಪಡುತ್ತಿದ್ದಾರೆ. ನಮ್ಮ ದೇಶದ ಮಹಾನ್ ಪುರುಷರ ಕನಸುಗಳನ್ನು ನಾವು ಈಡೇರಿಸುತ್ತಿದ್ದೇವೆ ಎನ್ನುವುದಕ್ಕೆ ನಾವೂ ಹೆಮ್ಮೆಪಡುತ್ತಿದ್ದೇವೆ. ನಮ್ಮ ಸಿದ್ಧಾಂತವು ದೇಶಭಕ್ತಿಯಿಂದ ಪ್ರಭಾವಿತಗೊಂಡಿದೆ. ಅದು ರಾಷ್ಟ್ರೀಯ ಹಿತಾಸಕ್ತಿಯ ಸಲುವಾಗಿದೆ. ರಾಷ್ಟ್ರೀಯತೆಯು ನಮ್ಮ ರಾಜನೀತಿಗಿಂತ ಮೇಲಿದೆ' ಎಂದು ಹೇಳಿದರು. ಮುಂದೆ ಓದಿ.

ಕಾಂಗ್ರೆಸ್ ನಾಯಕರನ್ನೂ ಗೌರವಿಸುತ್ತಿದ್ದೇವೆ

ಕಾಂಗ್ರೆಸ್ ನಾಯಕರನ್ನೂ ಗೌರವಿಸುತ್ತಿದ್ದೇವೆ

ಈ ಸರ್ಕಾರವು ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ ರಾಜಕಾರಣಿ ಪ್ರಣವ್ ಮುಖರ್ಜಿ ಅವರನ್ನು ಭಾರತ ರತ್ನ ನೀಡಿ ಗೌರವಿಸಿದೆ. ಹಾಗೆಯೇ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಮತ್ತು ನಾಗಾಲ್ಯಾಂಡ್ ಮುಖ್ಯಮಂತ್ರಿ ಎಸ್‌ಸಿ ಜಮೀರ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದೆ. ಇವರಿಬ್ಬರೂ ಕಾಂಗ್ರೆಸ್‌ನವರು ಎಂದು ನೆನಪಿಸಿದರು.

ದೇಶ ನಡೆಯುವುದು ಸಹಮತದಿಂದ

ದೇಶ ನಡೆಯುವುದು ಸಹಮತದಿಂದ

ಸರ್ಕಾರವೊಂದು ಬಹುಮತದೊಂದಿಗೆ ನಡೆಯಬಹುದು ಆದರೆ ದೇಶವು ಸಹಮತದಿಂದ ನಡೆಯುವುದು ಎಂದು ಸಂಸತ್‌ನಲ್ಲಿ ಹೇಳಿದ್ದಾಗಿ ತಿಳಿಸಿದರು.


'ನಾವು ರಾಜಕೀಯದಲ್ಲಿ ಸಹಮತಕ್ಕೆ ಮೌಲ್ಯ ನೀಡುತ್ತೇವೆ. ಬಹುಮತವು ಸರ್ಕಾರವನ್ನು ನಡೆಸುತ್ತದೆ, ಆದರೆ ದೇಶವು ಸಹಮತದೊಂದಿಗೆ ನಡೆಯುತ್ತದೆ. ನಾವು ಕೇವಲ ಸರ್ಕಾರವನ್ನು ನಡೆಸಲು ಬಂದಿಲ್ಲ. ನಾವು ದೇಶವನ್ನು ಮುಂಚೂಣಿಗೆ ಕೊಂಡೊಯ್ಯಲು ಬಂದಿದ್ದೇವೆ. ನಾವು ಚುನಾವಣೆಯಲ್ಲಿ ಪರಸ್ಪರ ವಿರುದ್ಧವಾಗಿ ಹೋರಾಡುತ್ತೇವೆ. ಅದರ ಅರ್ಥ ನಾವು ಪರಸ್ಪರ ಗೌರವಿಸುವುದಿಲ್ಲ ಎಂದಲ್ಲ' ಎಂದರು.

ಕೃಷಿ ಸುಧಾರಣೆ ಅವಶ್ಯಕ; ಕಾಯ್ದೆಗಳು ರೈತರಿಗೆ ಆಯ್ಕೆಯಾಗಲಿವೆ; ಮೋದಿಕೃಷಿ ಸುಧಾರಣೆ ಅವಶ್ಯಕ; ಕಾಯ್ದೆಗಳು ರೈತರಿಗೆ ಆಯ್ಕೆಯಾಗಲಿವೆ; ಮೋದಿ

ಆತ್ಮನಿರ್ಭಕ್ಕೆ ಅಂತ್ಯೋದಯ ಪ್ರೇರಣೆ

ಆತ್ಮನಿರ್ಭಕ್ಕೆ ಅಂತ್ಯೋದಯ ಪ್ರೇರಣೆ

ದೀನದಯಾಳ್ ಅವರ ಅಂತ್ಯೋದಯದ ಪರಿಕಲ್ಪನೆಯು ದೇಶದ ಆರ್ಥಿಕತೆಯನ್ನು ವೃದ್ಧಿಸುವ ಸರ್ಕಾರದ ಕಲ್ಯಾಣ ಕ್ರಮಗಳು ಮತ್ತು ಆತ್ಮನಿರ್ಭರ ಕಾರ್ಯಕ್ರಮದ ಹಿಂದಿನ ಸ್ಫೂರ್ತಿಯಾಗಿದೆ. ತನ್ನ ಬಾಹ್ಯ ನೀತಿಗಳಲ್ಲಿ ಕೂಡ ಭಾರತವು ದೇಶ ಮೊದಲು ತತ್ವವನ್ನು ಅನುಸರಿಸುತ್ತಿದೆ. ಯಾವುದೇ ಒತ್ತಡದ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ತಿಳಿಸಿದರು.

ಸ್ವದೇಶಿ ಉತ್ಪನ್ನ ಬಳಸಿ

ಸ್ವದೇಶಿ ಉತ್ಪನ್ನ ಬಳಸಿ

ಸಂಸದರು ಮತ್ತು ಇತರೆ ನಾಯಕರು ತಾವು ದೈನಂದಿನ ಜೀವನಕ್ಕೆ ಬಳಸುವ ಉತ್ಪನ್ನಗಳನ್ನು ಪಟ್ಟಿಮಾಡಬೇಕು. ಅದರಲ್ಲಿನ ವಿದೇಶ ಉತ್ಪನ್ನಗಳನ್ನು ಕೈಬಿಟ್ಟು ಅದಕ್ಕೆ ಪರ್ಯಾಯವಾದ ಭಾರತೀಯ ಉತ್ಪನ್ನಗಳನ್ನು ಬಳಸಬೇಕು. 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಇರುವ ಬಿಜೆಪಿ ಘಟಕಗಳು ಸಾಮಾಜಿಕ ಕಲ್ಯಾಣಕ್ಕಾಗಿ 75 ಕೆಲಸಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು.

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಗೆ ಎದಿರೇಟು ಕೊಡಲು ಕಾಂಗ್ರೆಸ್ ಭಾರಿ ಪ್ಲಾನ್!ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಗೆ ಎದಿರೇಟು ಕೊಡಲು ಕಾಂಗ್ರೆಸ್ ಭಾರಿ ಪ್ಲಾನ್!

English summary
PM Narendra Modi in an event of 53rd death anniversary of Deendayal Upadhyay said, the government may run with majority, but the nation runs with consensus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X