• search

ಕೆಂಪುಕೋಟೆಯ ಮೋದಿ ಭಾಷಣ ಗೂಗಲ್ ಹೋಂಪೇಜ್ ನಲ್ಲಿ ಲೈವ್!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಆಗಸ್ಟ್ 14: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಲೈವ್ ಪ್ರಸಾರಕ್ಕಾಗಿ ಪ್ರಸಾರ ಭಾರತೀಯು ಗೂಗಲ್ ಮತ್ತು ಯೂಟ್ಯೂಬ್ ಜೊತೆ ಕೈಜೋಡಿಸಿದೆ. ಡಿಜಿಟಲ್ ಪೀಳಿಗೆಯನ್ನೂ ತಲುಪುವ ಉದ್ದೇಶದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೋದಿಯವರ ಭಾಷಣವನ್ನು ಆಗಸ್ಟ್ 15 ರಂದು ಲೈವ್ ಪ್ರಸಾರ ಮಾಡಲಾಗುತ್ತಿದೆ.

  ಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿ

  ಆಗಸ್ಟ್ 15 ರಂದು ಗೂಗಲ್ ನಲ್ಲಿ 'Independence day' ಎಂದು ಸರ್ಚ್ ಮಾಡಿದರೆ ಗೂಗಲ್ ಹೋಂ ಪೇಜ್ ನಲ್ಲಿಯೇ ಮೋದಿಯವರ ಭಾಷಣದ ಲೈವ್ ವಿಡಿಯೋ ಸಿಕ್ಕಲಿದೆ! ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಎದುರು ತ್ರಿವರ್ಣ ಧ್ವಜ ಹಾರಿಸಿ, ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಮೋದಿಯವರ ಈ ಅವಧಿಯ ಕೊನೆಯ ಸ್ವಾತಂತ್ರ್ಯೋತ್ಸವ ಭಾಷಣ ಇದಾಗಿರುವುದರಿಂದ ಕುತೂಹಲ ಕೆರಳಿಸಿದೆ.

  PM Modi’s Independence Day speech to be live-streamed on YouTube

  ಈ ಬಾರಿ ದೂರದರ್ಶನದ ಯೂ ಟ್ಯೂಬ್ ಪೇಜ್ ಗೆ ಹೋಗಿ ಪ್ರಧಾನಿ ಭಾಷಣವನ್ನು ಹುಡುಕುವ ಪ್ರಮೇಯವಿಲ್ಲ. ಒಂದು ಗೂಗಲ್ ಸರ್ಚ್ ನಿಂದಲೇ ಭಾಷಣದ ನೇರ ಪ್ರಸಾರ ದೊರೆಯಲಿದ್ದು, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಪದಗ್ರಹಣದ ಸಮಯದಲ್ಲೂ ಕಾರ್ಯಕ್ರಮವನ್ನು ಹೀಗೆಯೇ ಲೈವ್ ಪ್ರಸಾರ ಮಾಡಲಾಗಿತ್ತು.

  72ನೇ ಸ್ವಾತಂತ್ರ್ಯ ದಿನಾಚರಣೆ 2018

  ಈ ವರ್ಷ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರ ಬಳಿಯೇ ಮೋದಿಯವರು ವಿಶಶಯಗಳನ್ನು ಕೇಳಿದ್ದು ವಿಶೇಷವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Public broadcaster, Prasad Bharti has tied up with Google and video sharing site, YouTube to live stream the speech of Prime Minister Narendra Modi on Independence Day. The move is aimed at reaching out to the digital generation.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more