ಮೋದಿ ಫಿಟ್ನೆಸ್ ವಿಡಿಯೋ ನೋಡಿ ಮನಸಾರೆ ನಕ್ಕ ರಾಹುಲ್ ಗಾಂಧಿ!

Recommended Video

      ಮೋದಿ ವಿಡಿಯೋ ನೋಡಿ ಮನಸಾರೆ ನಕ್ಕ ರಾಹುಲ್ ಗಾಂಧಿ! | Oneindia Kannada

      ನವದೆಹಲಿ, ಜೂನ್ 14: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಮ್ ಫಿಟ್ ತೋ ಇಂಡಿಯಾ ಫುಟ್ ಹ್ಯಾಶ್ ಟ್ಯಾಗ್ ನಲ್ಲಿ ಪೋಸ್ಟ್ ಮಾಡಿದ್ದ ಫಿಟ್ನೆಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಹುಲ್ ಗಾಂಧಿ, ಮೋದಿ ವಿಡಿಯೋ ವಿಲಕ್ಷಣ ಮತ್ತು ಹಾಸ್ಯಾಸ್ಪದ ಎಂದು ನಕ್ಕಿದ್ದಾರೆ!

      ದೆಹಲಿಯ ಐಷಾರಾಮಿ ಹೊಟೇಲ್ ವೊಂದರಲ್ಲಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಹಲವು ಮುಖಂಡರೆದುರು ಅವರು ಮೋದಿಯವರನ್ನು ಆಡಿಕೊಂಡು ನಕ್ಕರು! ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಮೋದಿಯವರ ವಿಡಿಯೋ ಕುರಿತು ಅಪಹಾಸ್ಯ ಮಾಡಿದ ರಾಹುಲ್ ನಂತರ ಸಿಪಿಎ ಮುಖಂಡ ಸೀತಾರಾಂ ಯಚೂರಿ ಅವರತ್ತ ತಿರುಗಿ, ಮೋದಿಯವರ ಫಿಟ್ನೆಸ್ ಚಾಲೆಂಜಿಗೆ ನೀವೂ ಒಂದು ವಿಡಿಯೋ ಅಪ್ಲೋಡ್ ಮಾಡಿ ಎಂದರು. ಆ ಮಾತು ಕೇಳಿ ಜೊತೆಗಿದ್ದ ನಾಯಕರಾದ ಟಿಎಂಸಿಯ ದಿನೇಶ್ ತ್ರಿವೇದಿ, ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ, ಡಿಎಂಕೆಯ ಕನ್ನಿಮೋಳಿ ನಕ್ಕು ನಕ್ಕು ಸುಸ್ತಾದರು.

      PM Modis fitness video bizarre, ridiculous, says Rahul Gandhi

      ತಮ್ಮ ಬೆಳಗ್ಗಿನ ವ್ಯಾಯಾಮದ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ನಿನ್ನೆ ಫಿಟ್ನೆಸ್ ವಿಡಿಯೋವನು ಅಪ್ಲೋಡ್ ಮಾಡಿದ್ದರು. ನಂತರ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ತಮ್ಮ ಫಿಟ್ನೆಸ್ ಸವಾಲೆಸೆದಿದ್ದರು.

      ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ನನಗೆ ನನ್ನ ಫಿಟ್ನೆಸ್ ಗಿಂತಲೂ ಕರ್ನಾಟಕದ ಫಿಟ್ನೆಸ್ ಮುಖ್ಯ. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+