ಆರ್ಥಿಕತೆಯನ್ನು ಹಾಳುಗೆಡವಿದ್ದು ಯಾರು ಗೊತ್ತೆ? ಮೋದಿ ಮಾತಲ್ಲಿ ಕೇಳಿ!
Recommended Video

ಆರ್ಥಿಕತೆಯನ್ನ ಹಾಳುಗೆಡವಿದ್ದು ಯಾರೆಂದು ಬಾಯ್ಬಿಟ್ಟ ನರೇಂದ್ರ ಮೋದಿ | Oneindia Kannada
ನವದೆಹಲಿ, ಜುಲೈ 03: ಈ ದೇಶದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿದ್ದು ಅರ್ಥಶಾಸ್ತ್ರಜ್ಞ ಮಾಜಿ ಪ್ರಧಾನಿ ಮತ್ತು 'ತನಗೇ ಎಲ್ಲ ಗೊತ್ತು' ಎಂದುಕೊಂಡಿರುವ ಮಾಜಿ ವಿತ್ತ ಸಚಿವರು ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
'ಸ್ವರಾಜ್ಯ' ನಿಯತಕಾಲಿಕಕ್ಕೆ ಅವರು ನೀಡಿದ ಸಂದರ್ಶನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಪರೋಕ್ಷವಾಗಿ ದೂರಿದ್ದಾರೆ.
'ಅರ್ಥಶಾಸ್ತ್ರಜ್ಞ ಪ್ರಧಾನಿ' ಮತ್ತು 'ತಮಗೇ ಎಲ್ಲ ಗೊತ್ತು ಎನ್ನುತ್ತಿದ್ದ ವಿತ್ತ ಸಚಿವರ' ಆಡಳಿತದ ಅವಧಿಯಲ್ಲಿ ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಸಾಕಷ್ಟು ಹೊಡೆತ ಬಿದ್ದಿದೆ.

'ಭಾರತೀಯ ಅರ್ಥವ್ಯವಸ್ಥೆಗೆ ಅವರು ಕೊಟ್ಟ ಪೆಟ್ಟನ್ನು ಸರಿಪಡಿಸಲು ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಪರಿಚಯಿಸಿದ್ದೇವೆ. ಭಾರತದಲ್ಲಿ ಉದ್ಯಮದ ಬಾಗಿಲುಗಳು ತೆರೆದುಕೊಳ್ಳುವಂತೆ ಮಾಡಿದ್ದೇವೆ' ಎಂದು ಮೋದಿ ಹೇಳಿದರು.












Click it and Unblock the Notifications