• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈಗ ಮೋದಿಜೀ ಕಾಂಗ್ರೆಸ್ ನ ಮೂರ್ಖ ಆಲೋಚನೆಯೇ ಬಳಸಲಿದ್ದಾರೆ, ರಾಹುಲ್

|

ನವದೆಹಲಿ, ಡಿಸೆಂಬರ್ 20: ಗಬ್ಬರ್ ಸಿಂಗ್ ಟ್ಯಾಕ್ಸ್ ವಿಚಾರವಾಗಿ ದೀರ್ಘ ನಿದ್ದೆಯಲ್ಲಿದ್ದ ನರೇಂದ್ರ ಮೋದಿಯವರನ್ನು ಅಂತಿಮವಾಗಿ ಕಾಂಗ್ರೆಸ್ ಎಚ್ಚರಿಸಿದೆ. ಆದರೆ ಮುಳುಗುತ್ತಿರುವಾಗ, ಈಗ ಅವರು ಕಾಂಗ್ರೆಸ್ ನ "ಅತಿದೊಡ್ಡ ಮೂರ್ಖ ಆಲೋಚನೆ" (Grand Stupid Thought) ಎಂದಿದ್ದನ್ನು ಜಾರಿಗೆ ತರಲು ಬಯಸಿದ್ದಾರೆ. ಜಾರಿಗೆ ತರದಿರುವುದಕ್ಕಿಂತ ತಡವಾದರೂ ಪರವಾಗಿಲ್ಲ ನರೇಂದ್ರ ಜೀ! ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರಕಾರವನ್ನು ಮತ್ತೊಮ್ಮೆ ತಡವಿಕೊಂಡಿದ್ದಾರೆ. ಜಿಎಸ್ ಟಿ ಸ್ಲ್ಯಾಬ್ ಅನ್ನು ಕಡಿಮೆ ಮಾಡುವ ವಿಚಾರವನ್ನು ಮುಂದೆ ಮಾಡಿಕೊಂಡು, ಅದನ್ನು 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಲೇವಡಿ ಮಾಡಿದ್ದಾರೆ.

ಈಗ ಮೋದಿಜೀ ಕಾಂಗ್ರೆಸ್ ನ ಮೂರ್ಖ ಆಲೋಚನೆಯೇ ಬಳಸಲಿದ್ದಾರೆ, ರಾಹುಲ್

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿ, ಇಪ್ಪತ್ತೆಂಟು ಪರ್ಸೆಂಟ್ ಸ್ಲ್ಯಾಬ್ ಅನ್ನು ಕೆಲವೇ ಆಯ್ದ ವಿಲಾಸಿ ವಸ್ತುಗಳಿಗೆ ವಿಧಿಸಿ, ಉಳಿದಂತೆ ಶೇ 99ರಷ್ಟು ವಸ್ತು ಹಾಗೂ ಸೇವೆಗಳನ್ನು 18 ಪರ್ಸೆಂಟ್ ಅಥವಾ ಅದಕ್ಕಿಂತ ಕಡಿಮೆ ದರದ ಸ್ಲ್ಯಾಬ್ ಗೆ ತರುವುದಾಗಿ ಹೇಳಿದ್ದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಕ್ಕೆ ಬಂದರೆ ಜಿಎಸ್ ಟಿಯ ರಚನೆಯಲ್ಲಿ ಬದಲಾವಣೆ ಮಾಡುವುದಾಗಿ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ.

English summary
Congress president Rahul Gandhi on Thursday took a fresh swipe at the Modi government over its move to tweak the Goods and Services Tax (GST) slabs, once again calling it the ‘Gabbar Singh Tax’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X