ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಜ್ಜಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು; 72 ಕುಟುಂಬಕ್ಕೆ ಕ್ವಾರಂಟೈನ್

|
Google Oneindia Kannada News

ನವದೆಹಲಿ, ಏಪ್ರಿಲ್ 16 : ದಕ್ಷಿಣ ದೆಹಲಿಯಲ್ಲಿ 19 ವರ್ಷದ ಫಿಜ್ಜಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತನೊಂದಿಗೆ ಸಂಪರ್ಕ ಹೊಂದಿದ್ದ 70 ಕುಟುಂಬಗಳ ಸದಸ್ಯರಿಗೆ ಹೋಂ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದೆ.

Recommended Video

ಮನೆಯಲ್ಲಿದ್ದುಕೊಂಡೇ ತೇಜಸ್ವಿ ಸೂರ್ಯ ಏನ್ ಮಾಡಿದ್ದಾರೆ ನೋಡಿ

ಡೆಲಿವರಿ ಬಾಯ್‌ನನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಪ್ರಿಲ್ 12ರ ತನಕ ಈತ ಮಾಳವೀಯ ನಗರ, ಸಾವಿತ್ರಿ ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಫಿಜ್ಜಾ ಪೂರೈಕೆ ಮಾಡಿದ್ದ ಎಂಬ ಮಾಹಿತಿ ಸಿಕ್ಕಿದೆ.

ದೆಹಲಿ ಧಾರ್ಮಿಕ ಸಭೆಯಿಂದ 2 ದಿನದಲ್ಲಿ 647 ಜನರಿಗೆ ಸೋಂಕುದೆಹಲಿ ಧಾರ್ಮಿಕ ಸಭೆಯಿಂದ 2 ದಿನದಲ್ಲಿ 647 ಜನರಿಗೆ ಸೋಂಕು

ಈತ ಫಿಜ್ಜಾ ನೀಡಿದ ಮನೆಗಳ ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಈತನ 20 ಸಹೋದ್ಯೋಗಿಗಳಿಗೂ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದೆ. ಡೆಲಿವರಿ ಹುಡುಗ ಫಿಜ್ಜಾ ಪೂರೈಕೆ ಮಾಡುವಾಗ ಕೊರೊನಾ ಸೋಂಕು ಹಬ್ಬಿರಬಹುದು ಎಂದು ಅಂದಾಜಿಸಲಾಗಿದೆ.

ಲಾಕ್ಡೌನ್ 2: ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಮಾರ್ಗಸೂಚಿ ಲಾಕ್ಡೌನ್ 2: ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಮಾರ್ಗಸೂಚಿ

Pizza Delivery Agent Tested Positive For COVID 19 72 Families Quarantined

ಆಹಾರ ಡೆಲಿವರಿ ಮಾಡುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ. ಡೆಲಿವರಿ ಹುಡುಗ ಯಾವುದೇ ವಿದೇಶ ಪ್ರವಾಸ ಮಾಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇರಲು ಎಲ್ಲರಿಗೂ ಸೂಚಿಸಲಾಗಿದೆ.

ಒನ್‌ಇಂಡಿಯಾ ಇಂಪ್ಯಾಕ್ಟ್: ಹಸಿದ 20 ಕುಟುಂಬಗಳಿಗೆ ಸಿಕ್ಕಿತು ಆಹಾರ ಒನ್‌ಇಂಡಿಯಾ ಇಂಪ್ಯಾಕ್ಟ್: ಹಸಿದ 20 ಕುಟುಂಬಗಳಿಗೆ ಸಿಕ್ಕಿತು ಆಹಾರ

ಹುಡುಗ ಝೊಮ್ಯಾಟೋ ಅಪ್ಲಿಕೇಶನ್ ಮೂಲಕ ಪಿಜ್ಜಾ ಡೆಲಿವರಿ ಮಾಡಿದ್ದ. ಕೆಲವು ದಿನಗಳಿಂದ ಹುಡುಗ ಆರ್ಡರ್‌ಗಳನ್ನು ಪೂರೈಕೆ ಮಾಡಿದ್ದ. ಇವನ ಜೊತೆ ಕೆಲಸ ಮಾಡುವ ಯಾರಿಗೂ ಸೋಂಕು ಹಬ್ಬಿಲ್ಲ. ಪಿಜ್ಜಾ ತೆಗೆದುಕೊಂಡು ಹೋದ ರೆಸ್ಟೋರೆಂಟ್‌ಗಳನ್ನು ಸಹ ಬಂದ್ ಮಾಡಲಾಗಿದೆ.

ಕೊರೊನಾ ಸೋಂಕು ಯಾರಿಗಾದರೂ ಹಬ್ಬಬಹುದು. ಇಂತಹ ಸಮಯದಲ್ಲಿ ನಾವು ಸಂಪೂರ್ಣವಾಗಿ ಐಸೋಲೇಷನ್‌ನಲ್ಲಿ ಇರಲು ಸಾಧ್ಯವಿಲ್ಲ. ಹೊರಗಡೆ ಆಹಾರ ಪದಾರ್ಥಗಳು ಸಿಗುತ್ತಿಲ್ಲ ಎಂದು ಝೊಮ್ಯಾಟೋ ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದುವರೆಗೂ 1578 ಕೊರೊನಾ ಪ್ರಕರಣದಳು ದಾಖಲಾಗಿವೆ. ದಕ್ಷಿಣ ದೆಹಲಿಯಲ್ಲಿ 26 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣ ದಕ್ಷಿಣದಲ್ಲಿಯೇ ಇದೆ.

English summary
The 19 year old pizza delivery agent has tested positive for coronavirus in South Delhi. The agent has been admitted to the RML Hospital. 70 families who he came in contact with have been home quarantined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X