ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್ ಬೆಲೆ, ವಾಹನ ಮಾಲೀಕರಿಗೆ ಆತಂಕ
ನವದೆಹಲಿ, ಸೆಪ್ಟೆಂಬರ್ 3: ಆಗಸ್ಟ್ ಎರಡನೇ ವಾರದಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ ಕೂಡ ಏರಿಕೆ ಕಂಡಿದ್ದು ಬೆಂಗಳೂರಿನಲ್ಲಿ 81.82ರೂ.ಗಳಾಗಿವೆ.
ದೆಹಲಿಯಲ್ಲಿ ಸೋಮವಾರ ಪ್ರತಿಲೀಟರ್ ಗೆ 79.15ರೂಗಳಾಗಿದ್ದು, ಡೀಸೆಲ್ ದರ 71.15ರೂ.ಗಳಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ 72.51ರೂ,ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಮತೆಣಿಕೆಯಾಗುವವರೆಗೆ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಫಲಿತಾಂಶ ಬಂದಿದ್ದೇ ತಡ ಪುನಃ ಪೆಟ್ರೋಲ್, ಡೀಸೆಲ್ ದರ ಏರಿಕೆ ಆರಂಭವಾಯಿತು.
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ86.56ರೂ.ಗಳಾಗಿದ್ದು, ಡೀಸೆಲ್ ದರ 75.54ರೂ,ಗಳಾಗಿವೆ. ಆದರೆ ಬೆಂಗಳೂರಿನಲ್ಲಿ ಭಾನುವಾರ ಹಾಗೂ ಸೋಮವಾರದ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.ಆಗಸ್ಟ್ 16ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಡಾಲರ್ ಎದುರು ಭಾರತದ ರೂಪಾಯಿ ಅಪಮೌಲ್ಯವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಇನ್ನೂ ಎಷ್ಟು ದಿನ ಇದೇ ರೀತಿ ಬೆಲೆ ಏರಿಕೆ ಮಾಡಿ ಪೆಟ್ರೋಲ್ ದರ 100ರ ಗಡಿ ದಾಟುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೆನಿಸುತ್ತಿದೆ.












Click it and Unblock the Notifications