ಭಾರತದ ಶೇ. 41ಕ್ಕಿಂತ ಹೆಚ್ಚಿನ ಉದ್ಯೋಗಿಗಳಿಗೆ ಹೆಚ್ಚಿದ ಕೆಲಸದ ಒತ್ತಡ: ಮೈಕ್ರೋಸಾಫ್ಟ್
ನವದೆಹಲಿ, ಅಕ್ಟೋಬರ್ 08: ಸಾಂಕ್ರಾಮಿಕ ಕಾಲದಲ್ಲಿ ಜಾಗತಿಕವಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರ ಜೊತೆಗೆ ಕೆಲಸ ಮತ್ತು ವೈಯಕ್ತಿಕ ಜೀವನದ ಯೋಗಕೇಮದ ಮೇಲೂ ಋಣಾತ್ಮಕ ಪರಿಣಾಮ ಬೀರಿದೆ. ಇದರಿಂದಾಗಿ ಉದ್ಯೋಗಿಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಭಾರತದ ಶೇಕಡಾ 41ಕ್ಕಿಂತ ಹೆಚ್ಚಿನ ಕಾರ್ಮಿಕರು ಮನೆಯಿಂದಲೇ ಕೆಲಸವಾಗಲಿ, ಕಚೇರಿಯ ಕೆಲಸವಾಗಲಿ ಉದ್ಯೋಗದಲ್ಲಿ ತುಂಬಾ ಒತ್ತಡ ಎದುರಿಸುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಯನವೊಂದು ಬುಧವಾರ ಬಹಿರಂಗಪಡಿಸಿದೆ.
ಮೈಕ್ರೋಸಾಫ್ಟ್‌ನ ಇತ್ತೀಚಿನ 'ವರ್ಕ್ ಟ್ರೆಂಡ್ ಇಂಡೆಕ್ಸ್' ವರದಿಯ ಪ್ರಕಾರ, ಕಳೆದ ಆರು ತಿಂಗಳುಗಳಲ್ಲಿ ಭಾರತದ ಮೂರನೇ ಒಂದು ಭಾಗದಷ್ಟು ಕಾರ್ಮಿಕರಿಗೆ ಕೆಲಸದ ಒತ್ತಡದ ಹೆಚ್ಚಾಗಿದೆ ಎನ್ನಲಾಗಿದೆ.

"ವ್ಯವಹಾರಗಳು ಹೊಸ ಕೆಲಸದ ವಿಧಾನಕ್ಕೆ ಹೊಂದಿಕೊಂಡಂತೆ, ಹೊಸ ಕೆಲಸದ ಪರಿಸ್ಥಿತಿಗಳು ನೌಕರರ ಮೇಲೆ ಬೀರುತ್ತಿರುವ ಬಹುಮುಖಿ ಪರಿಣಾಮವನ್ನು ಪರೀಕ್ಷಿಸುವುದು ಬಹಳ ಮುಖ್ಯ. ಇದು ನಮ್ಮ ಎಲ್ಲ ಗ್ರಾಹಕರು ಮತ್ತು ಬಳಕೆದಾರರಿಗೆ ಸೂಕ್ತವಾದ ಮತ್ತು ಸಮಯೋಚಿತ ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ "ಎಂದು ಮೈಕ್ರೋಸಾಫ್ಟ್ ಇಂಡಿಯಾದ ಮಾಡರ್ನ್ ವರ್ಕ್‌ನ ಕಂಟ್ರಿ ಹೆಡ್ ಸಮಿಕ್ ರಾಯ್ ಹೇಳಿದರು.
ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಸಿಂಗಾಪುರ ಸೇರಿದಂತೆ ಜಾಗತಿಕವಾಗಿ ಎಂಟು ದೇಶಗಳಲ್ಲಿ 6,000 ಕ್ಕೂ ಹೆಚ್ಚು ಮಾಹಿತಿ ಮತ್ತು ಮೊದಲ ಸಾಲಿನ ಕಾರ್ಮಿಕರನ್ನು ಸಮೀಕ್ಷೆ ನಡೆಸಿದ ಅಧ್ಯಯನವು, ಏಷ್ಯಾದಲ್ಲಿ ಹೆಚ್ಚಿದ ಉದ್ಯೋಗ ಒತ್ತಡ ಎದುರಿಸುತ್ತಿರುವ ಕಾರ್ಮಿಕರಲ್ಲಿ ಭಾರತವು ಎರಡನೇ ಅತಿ ಹೆಚ್ಚು ಶೇಕಡಾ 29 ರಷ್ಟಿದೆ ಎಂದು ಹೇಳಿದೆ.
ಸಮೀಕ್ಷೆ ನಡೆಸಿದವರಲ್ಲಿ ಶೇಕಡಾ 92 ರಷ್ಟು ಜನರು ಧ್ಯಾನವು ಕೆಲಸ-ಸಂಬಂಧಿತ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications