ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ ಪುನಾರಚನೆ ವಿಧೇಯಕ ಮಂಡನೆ

|
Google Oneindia Kannada News

ನವದೆಹಲಿ, ಆಗಸ್ಟ್ 6: ರಾಜ್ಯಸಭೆಯಲ್ಲಿ ಆಪರೇಷನ್ ಕಾಶ್ಮೀರ ಉಲ್ಲೇಖಗಳಿಗೆ ಅನುಮೋದನೆ ದೊರೆತ ಬೆನ್ನಲ್ಲೇ ಲೋಕಸಭೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಧೇಯಕ ಮಂಡಿಸಲಿದ್ದಾರೆ.

ರಾಜ್ಯಕ್ಕೆ ವಿಶೇಷ ರದ್ದತಿ , ಎರಡು ಕೇಂದ್ರಾಡಳಿತ ಪ್ರದೇಶವಾಗಿ ರಚನೆ ಹಾಗೂ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆ ಸೋಮವಾರ ಸಮ್ಮತಿ ನೀಡಿತ್ತು. ಇದೇ ವಿಧೇಯಕಗಳು ಯಾವುದೇ ತಿದ್ದುಪಡಿ ಇಲ್ಲದೆ ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾಗಲಿದೆ.

ಲೋಕಸಭೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತವಿರುವುದರಿಂದ ವಿಧೇಯಕ ಹಾಗೂ ಪ್ರಸ್ತಾವನೆಗಳು ಅಂಗೀಕಾರಗೊಳ್ಳುವುದರಲ್ಲಿ ಸಂಶಯವಿಲ್ಲ ಆದರೆ ಯಾವ ಪಕ್ಷಗಳು ಸರ್ಕಾರದ ಪರ ಹಾಗೂ ವಿರುದ್ಧ ನಿಲ್ಲಲಿವೆ ಎನ್ನುವುದು ಬಹಿರಂಗವಾಗಲಿದೆ.

Operation Kashmir Resolution And Bill Will Come in LokSabha Today LIVE Updates

ರಾಜ್ಯಸಭೆಯಲ್ಲಿ ಈ ವಿಧೇಯಕ್ಕೆ ಜೆಡಿಯು ಹೊರತುಪಡಿಸಿ ಇತರೆ ಎನ್‌ಡಿಎ ಪಕ್ಷಗಳು ಸಮ್ಮತಿ ಸೂಚಿಸಿದ್ದವು. ಬಿಎಸ್‌ಪಿ, ಬಿಜೆಡಿ, ವೈಎಸ್‌ಆರ್‌ಪಿ, ಟಿಆರ್‌ಎಸ್, ಎಐಎಡಿಎಂಕೆ ಬೆಂಬಲ ಸೂಚಿಸಿದ್ದವು.

Newest FirstOldest First
2:02 PM, 6 Aug

ಫಾರೂಕ್ ಅಬ್ದುಲ್ಲಾ ಬಂಧನಕ್ಕೆ ಡಿಎಂಕೆ ನಾಯಕ ದಯಾನಿಧಿ ಮಾರನ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ, ಸಂಸತ್ತಿನ ಸದಸ್ಯರನ್ನು ರಕ್ಷಿಸುವ ಜವಾಬ್ದಾರಿ ಸ್ಪೀಕರದ್ದು ಎಂದು ಹೇಳಿದ್ದಾರೆ.
11:59 AM, 6 Aug

ಪುನಾರಚನೆ ವಿಧೇಯಕ ಮಂಡನೆ ನಾವು ಯಾವ ನಿಯಮ ಮೀರಿದ್ದೇವೆಂದು ಹೇಳಲಿ, ಜಮ್ಮು ಕಾಶ್ಮೀರದ ಒಳಗೇ ಪಾಕ್ ಆಕ್ರಮಿತ ಪ್ರದೇಶ ಬರುತ್ತದೆ. ಪಿಓಕೆ ಭಾರತದ ಭಾಗ ಎಂದು ಒಪ್ಪಿಕೊಳ್ಳಲು ನಿಮಗೆ ಇಷ್ಟವಿಲ್ಲವೇ? ಅಮಿತ್ ಶಾ ಪ್ರಶ್ನೆ
9:13 AM, 6 Aug

ಸಂವಿಧಾನ ವಿಧಿ 370 ಹಾಗೂ 35 ಎ ರದ್ದುಪಡಿಸುತ್ತಿದ್ದಂತೆ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ. ಈ ನೆಲೆಯು ಪಾಕಿಸ್ತಾನದ ಆಕ್ರೋಶಕ್ಕೆ ಕಾರಣವಾಗಿದೆ.
9:06 AM, 6 Aug

-ಈಗಾಗಲೇ ಪಾಕಿಸ್ತಾನ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಮೊರೆ ಹೋಗಲು ನಿರ್ಧರಿಸಿದೆ. ಹಾಗೆಯೇ ಸೇನಾ ಮುಖ್ಯಸ್ಥರು ತುರ್ತು ಭದ್ರತಾ ಸಭೆಯನ್ನು ನಡೆಸಿದ್ದಾರೆ.
8:58 AM, 6 Aug

-ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು,ಭಾರತದ ನಿರ್ಧಾರವು ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹಾಳುಮಾಡಲಿದೆ. ಈ ನಿರ್ಧಾರ ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿರುದ್ಧ ಹಾಗೂ ಕಾನೂನು ಬಾಹಿರ ಎಂದು ಹೇಳಿದ್ದಾರೆ.
8:25 AM, 6 Aug

-ರಾಜ್ಯಕ್ಕೆ ವಿಶೇಷ ರದ್ದತಿ , ಎರಡು ಕೇಂದ್ರಾಡಳಿತ ಪ್ರದೇಶವಾಗಿ ರಚನೆ ಹಾಗೂ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆ ಸೋಮವಾರ ಸಮ್ಮತಿ ನೀಡಿತ್ತು. ಇದೇ ವಿಧೇಯಕಗಳು ಯಾವುದೇ ತಿದ್ದುಪಡಿ ಇಲ್ಲದೆ ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾಗಲಿದೆ.
8:09 AM, 6 Aug

-ರಾಜ್ಯಸಭೆಯಲ್ಲಿ ಆಪರೇಷನ್ ಕಾಶ್ಮೀರ ಉಲ್ಲೇಖಗಳಿಗೆ ಅನುಮೋದನೆ ದೊರೆತ ಬೆನ್ನಲ್ಲೇ ಲೋಕಸಭೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಧೇಯಕ ಮಂಡಿಸಲಿದ್ದಾರೆ.
Advertisement
8:04 AM, 6 Aug

-ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವ ಭಾರತ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನದ ಆಕ್ರೋಶ ಮುಂದುವರೆದಿದೆ.

English summary
Kashmir crisis: Operation Kashmir And Bill Will Come in LokSabha, Home minister Amit Shah will present the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X