ವ್ಯಾಕ್ಸಿನ್‌ಗೂ ಬಗ್ಗದೆ ವೇಗವಾಗಿ ಹರಡುತ್ತೆ ಓಮಿಕ್ರಾನ್: WHO ಎಚ್ಚರಿಕೆ
ನವದೆಹಲಿ, ಡಿಸೆಂಬರ್ 13: ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರವು ಡೆಲ್ಟಾಗಿಂತ ಹೆಚ್ಚು ಪ್ರಬಲವಾಗಿದ್ದು, ತೀವ್ರವಾಗಿ ಹರಡುತ್ತಿದೆ ಹಾಗೂ ಲಸಿಕೆ ಕೂಡ ಇದರ ಮೇಲೆ ಪರಿಣಾಮ ಬೀರುವಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.
ಓಮಿಕ್ರಾನ್ ರೂಪಾಂತರ ತೀವ್ರವಾದ ರೋಗಲಕ್ಷಣಗಳನ್ನುಂಟು ಮಾಡಲಿದೆ ಎಂದು ಹೇಳಿದ್ದು, ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಗುರುತಿಸಲಾದ ಡೆಲ್ಟಾ ರೂಪಾಂತರವು ಪ್ರಪಂಚದ ಹೆಚ್ಚಿನ ಕೊರೊನಾ ವೈರಸ್ ಸೋಂಕುಗಳಿಗೆ ಕಾರಣವಾಗಿದೆ ಎಂದು ಹೇಳಿದೆ.
ಆದರೆ, ಹೆಚ್ಚಿನ ಸಂಖ್ಯೆಯ ಓಮಿಕ್ರಾನ್ ರೂಪಾಂತರಗಳು ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಪ್ರಯಾಣ ನಿಷೇಧವನ್ನು ಹೇರಲು ಕಾರಣವಾಗಿದೆ ಮತ್ತು ಓಮಿಕ್ರಾನ್ ಹರಡುವಿಕೆಯನ್ನು ನಿಧಾನಗೊಳಿಸಲು ದೇಶೀಯ ನಿರ್ಬಂಧಗಳನ್ನು ಮರುಪರಿಚಯಿಸಲು ಪ್ರಪಂಚದಾದ್ಯಂತದ ಹಲವು ದೇಶಗಳನ್ನು ಮುಂದಾಗಿವೆ.

ಡಿಸೆಂಬರ್ 9ರ ಹೊತ್ತಿಗೆ ಓಮಿಕ್ರಾನ್ 63 ದೇಶಗಳಿಗೆ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಡೆಲ್ಟಾ ಕಡಿಮೆ ಪ್ರಚಲಿತವಿರುವ ದಕ್ಷಿಣ ಆಫ್ರಿಕಾದಲ್ಲಿ ಮತ್ತು ಡೆಲ್ಟಾ ಪ್ರಬಲವಾದ ಬ್ರಿಟನ್‌ನಲ್ಲಿ ವೇಗವಾದ ಪ್ರಸರಣವನ್ನು ಗುರುತಿಸಲಾಗಿದೆ.
ಓಮಿಕ್ರಾನ್‌ನ ಪ್ರಸರಣ ದರವು ಪ್ರತಿರಕ್ಷಣಾ ಪ್ರತಿಕ್ರಿಯೆಗಳಿಗೆ ಕಡಿಮೆ ಪ್ರದರ್ಶನವನ್ನು ಹೊಂದಿದೆ ಅದೇ ರೀತಿ ಹೆಚ್ಚು ಪ್ರಸರಣ ಇಲ್ಲವೇ ಎರಡರ ಸಂಯೋಜನೆಯಿಂದ ಕೂಡಿದೆ ಎಂದು ಹೇಳಲಾಗುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಲಸಿಕೆ ಪರಿಣಾಮಕಾರತ್ವ ಕಡಿತ ಮಾಡುವ ಓಮಿಕ್ರಾನ್
ಆರಂಭಿಕ ಪುರಾವೆಗಳು ಓಮಿಕ್ರಾನ್ ಸೋಂಕು ಮತ್ತು ಪ್ರಸರಣದ ವಿರುದ್ಧ ಲಸಿಕೆ ಪರಿಣಾಮಕಾರಿತ್ವದಲ್ಲಿ ಕಡಿತವನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ರೂಪದಲ್ಲಿ ಸಂಕ್ಷಿಪ್ತವಾಗಿ ಹೇಳಿದೆ. ಪ್ರಸ್ತುತ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಓಮಿಕ್ರಾನ್ ಡೆಲ್ಟಾ ಪ್ರಸರಣವನ್ನು ಮೀರಿ ಸಮುದಾಯದಲ್ಲಿ ಹರಡುವ ಸಾಧ್ಯತೆ ಹೆಚ್ಚಿದ್ದು, ಓಮಿಕ್ರಾನ್ ರೂಪಾಂತರ ಡೆಲ್ಟಾವನ್ನು ಮೀರಿಸುವ ಎಲ್ಲಾ ಸಾಧ್ಯತೆಗಳಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಸೌಮ್ಯ ರೋಗ ಲಕ್ಷಣಗಳು
ಇಲ್ಲಿಯವರೆಗೆ ಓಮಿಕ್ರಾನ್ ರೋಗಲಕ್ಷಣಗಳು ಸೌಮ್ಯವಾಗಿದ್ದು, ಅನಾರೋಗ್ಯ ಅಥವಾ ಲಕ್ಷಣರಹಿತ ಪ್ರಕರಣಗಳನ್ನು ಉಂಟುಮಾಡಿದೆ. ಆದರೆ ರೂಪಾಂತರದ ವೈದ್ಯಕೀಯ ತೀವ್ರತೆಯನ್ನು ಸ್ಥಾಪಿಸಲು ಈಗಿರುವ ಅಂಕಿ ಅಂಶಗಳು ಸಾಕಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದಕ್ಷಿಣ ಆಫ್ರಿಕಾವು ನವೆಂಬರ್ 24ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿತ್ತು. ಫೈಜರ್/BioNTech ಲಸಿಕೆ ತಯಾರಕರು ಉಲ್ಲೇಖಿಸಿರುವಂತೆ ಲಸಿಕೆಗಳ ಮೂರು ಡೋಸ್‌ಗಳು ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ ಎಂಬುದಾಗಿ ಹೇಳಿಕೊಂಡಿದ್ದಾರೆ.
ಬ್ರಿಟನ್ ಮತ್ತು ಫ್ರಾನ್ಸ್‌ನಂತಹ ಸಾಕಷ್ಟು ಲಸಿಕೆ ಸರಬರಾಜುಗಳನ್ನು ಹೊಂದಿರುವ ದೇಶಗಳಳೂ, ಓಮಿಕ್ರಾನ್ ವಿರುದ್ಧ ಹೋರಾಡಲು ಮೂರನೇ "ಬೂಸ್ಟರ್" ಲಸಿಕೆಯನ್ನು ಸ್ವೀಕರಿಸಲು ತಮ್ಮ ಜನರನ್ನು ಪ್ರೋತ್ಸಾಹಿಸಿವೆ.
ಪರೋಕ್ಷವಾಗಿ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಓಮಿಕ್ರಾನ್ ರೂಪಾಂತರದ ಕುರಿತು ಸಂಗ್ರಹಿಸಿರುವ ಮಾಹಿತಿಗಳು ಸಾಕಷ್ಟಿಲ್ಲವಾದ್ದರಿಂದ, ಈಗಲೇ ಓಮಿಕ್ರಾನ್ ಎಷ್ಟು ಪ್ರಬಲವಾಗಿದೆ ಎಂಬುದನ್ನು ನಿರ್ಧರಿಸಲಾಗುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ಒಂದು ರೀತಿಯಲ್ಲಿ ವಿಶ್ಲೇಷಿಸುವುದಾದರೆ ಡೆಲ್ಟಾಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಶಕ್ತಿಶಾಲಿಯಾಗಿ ಓಮಿಕ್ರಾನ್ ಸಮುದಾಯದಲ್ಲಿ ಹರಡಲಿದೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದು, ವಿಶ್ವವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದೆ.
ಬೆಂಗಳೂರಿನಲ್ಲಿ ಮೂರನೇ ಪ್ರಕರಣ ಪತ್ತೆ
ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಓಮಿಕ್ರಾನ್ ವೈರಸ್ ಪ್ರಕರಣ ಪತ್ತೆಯಾಗಿರುವ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮೂರು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಮೂರನೇ ಕೇಸ್ ಕೂಡ ಬೆಂಗಳೂರಿನಲ್ಲೇ ಪತ್ತೆಯಾಗಿರುವುದು ರಾಜಧಾನಿ ಜನರಲ್ಲಿ ಆತಂಕ ಮೂಡಿಸಿದೆ. ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕನಿಗೆ ಒಮಿಕ್ರಾನ್ ಪಾಸಿಟಿವ್ ಕಂಡು ಬಂದಿದೆ.












Click it and Unblock the Notifications