ಸೋಮಾರಿಗಳಾಗಿದ್ದ 245 ಆದಾಯ ತೆರಿಗೆ ಅಧಿಕಾರಿಗಳ ಎತ್ತಂಗಡಿ
ಕರ್ತವ್ಯದಲ್ಲಿ ಶ್ರದ್ಧೆ ಇರದ ಸುಮಾರು 243 ಐಟಿ ಅಧಿಕಾರಿಗಳನ್ನು ವರ್ಗಾಯಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಆದೇಶ ಹೊರಡಿಸಿದೆ. ಎರಡು, ಮೂರು ವರ್ಷಗಳಿಂದ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ನವದೆಹಲಿ, ಜುಲೈ 17: ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ದೇಶದ ನಾನಾ ಭಾಗಗಳಲ್ಲಿ ಅಧಿಕಾರದಲ್ಲಿದ್ದ 245 ತೆರಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಆಯಕಟ್ಟಿನ ಜಾಗಗಳಲ್ಲಿ ಎರಡು ಮೂರು ವರ್ಷಗಳಿಂದ ಠಿಕಾಣಿ ಹೂಡಿದ್ದವರಿಗೆ ಹಾಗೂ ತೆರಿಗೆ ಅಧಿಕಾರಿಗಳಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸದವರಿಗೆ ಈ ವರ್ಗಾವಣೆ ನೀಡಲಾಗಿದೆ.

ಇದರ ಜತೆಯಲ್ಲೇ, ಎಲ್ಲಾ ರಾಜ್ಯಗಳ ತೆರಿಗೆ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟಾಜ್ಞೆ ವಿಧಿಸಿರುವ ಸಿಬಿಡಿಟಿ, ಆಯಾ ರಾಜ್ಯಗಳಲ್ಲಿ ತೆರಿಗೆ ವಸೂಲಿ ಹಾಗೂ ಇತರ ತೆರಿಗೆ ಸಂಬಂಧಿ ವಿಚಾರಗಳನ್ನು ಸೂಕ್ತವಾಗಿ ನಿಭಾಯಿಸುವ ಬಗ್ಗೆ ಏನು ಮಾಡಬಹುದು ಎಂಬುದರ ಬಗ್ಗೆ ಕೂಲಂಕಷ ವರದಿ ಕೊಡುವಂತೆ ಆಜ್ಞಾಪಿಸಿದೆ.
ಅಲ್ಲದೆ, ಇನ್ನು ಮುಂದೆ ಪ್ರಾಂತೀಯ ಮಟ್ಟದಲ್ಲಿನ ತೆರಿಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆಂಬುದನ್ನೂ ಸತತ ನಿಗಾ ವಹಿಸುವುದಾಗಿ ಹೇಳಿದೆ.












Click it and Unblock the Notifications