10 ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ: ಆರೋಗ್ಯ ಸಚಿವ
ದೆಹಲಿ, ಮೇ 11: ಕಳೆದ 24 ಗಂಟೆಯ ಅವಧಿಯಲ್ಲಿ ಕೇಂದ್ರಡಾಳಿತ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
''ರಾಜ್ಯ ಮತ್ತು ಕೇಂದ್ರಡಾಳಿತ ಪ್ರದೇಶ ಒಳಗೊಂಡಂತೆ ಕಳೆದ 24 ಗಂಟೆಯಲ್ಲಿ ಹೊಸ ಕೊವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. 72 ಲಕ್ಷ ಎನ್96 ಮಾಸ್ಕ್ ಹಾಗೂ 36 ಲಕ್ಷ ಪಿಪಿಇ ಕಿಟ್‌ಗಳನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ'' ಎಂದು ಆರೋಗ್ಯ ಸಚಿವ ತಿಳಿಸಿದರು.
ಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆ
ದೇಶಾದ್ಯಂತ 4362 ಕೊವಿಡ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈವರೆಗೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 62 ಸಾವಿರ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯ ಹೇಳುವಂತೆ, ಭಾರತದಲ್ಲಿ ಇದುವರೆಗೆ 62,939 ಕೇಸ್‌ಗಳು ವರದಿಯಾಗಿದೆ, ಅದರಲ್ಲಿ 19,358 ಗುಣಮುಖರಾಗಿದ್ದಾರೆ ಹಾಗೂ 2,109 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಇಂದು ಎಲ್ಲಾ ರಾಜ್ಯಗಳ ಸಿಎಂ ಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಸಭೆ ಬಳಿಕ ಮುಂದಿನ ರೂಪುರೇಷೆಗಳ ಬಗ್ಗೆ ಮಾಹಿತಿ ದೊರೆಯಲಿದೆ.