ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿ ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಟ್ವಿಟ್ಟಿಗರ ಆಜ್ಞೆ

ನಿರ್ಭಯಾ ಪ್ರಕರಣದ ತೀರ್ಪು ಇಂದು ಹೊರಬೀಳಲಿದ್ದು, ಆರೋಪಿಗಳಿಗೆ ಗಲ್ಲುಶಿಕ್ಷೆಯೇ ಸೂಕ್ತ ಎಂದು ಟ್ವೀಟರ್ ನಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

|
Google Oneindia Kannada News

ನವದೆಹಲಿ, ಮೇ 05: ರಾಜ್ಯ ರಾಜಧಾನಿ ದೆಹಲಿ ವಿಶ್ವ ಮಟ್ಟದಲ್ಲಿ ರೇಪ್ ಕ್ಯಾಪಿಟಲ್ ಅನ್ನಿಸಿಕೊಂಡಿದ್ದು ಡಿಸೆಂಬರ್ 16, 2012 ರ ನಿರ್ಭಯಾ ಘಟನೆಯ ನಂತರ. ಇಡೀ ದೇಶವನ್ನೂ ಒಂದು ಕ್ಷಣ ಸ್ತಬ್ಧಗೊಳಿಸಿದ್ದ ಆ ವಿಕೃತ ಘಟನೆ ಘಟಿಸಿ ನಾಲ್ಕು ವರ್ಷಗಳೇ ಸಂದಿವೆ. ಇಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೋ, ಜೀವಾವಧಿ ಶಿಕ್ಷೆ ನೀಡಬೇಕೋ ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪು ಹೊರಬೀಳಲಿದೆ.

ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಇಂದು ನಿರ್ಭಯಾಗೆ ನ್ಯಾಯ ಕೊಡಿ ಎಂಬ ಕೂಗು ಕೇಳಿಬರುತ್ತಿದೆ. ತಾನು ಸತ್ತು, ದೇಶದಲ್ಲಿ ಮಹಿಳಾ ರಕ್ಷಣೆಯ ಜರೂರತ್ತನ್ನು ತೋರಿಸಿಕೊಟ್ಟು ಹೋದ ಆಕೆಯ ನಿಜವಾದ ಹೆಸರು ಜ್ಯೋತಿ ಸಿಂಗ್. ನನ್ನ ಮಗಳನ್ನು ಜ್ಯೋತಿ ಸಿಂಗ್ ಎಂದೇ ಕರೆಯಿರಿ. ಆಕೆಯ ಹೆಸರನ್ನು ಹೇಳಲು ನಮಗೆ ನಾಚಿಕೆಯಿಲ್ಲ. ಏಕೆಂದರೆ ಅವಳು ಯಾವ ತಪ್ಪನ್ನೂ ಮಾಡಿಲ್ಲ ಎಂದು ನಿರ್ಭಯಾ ತಾಯಿ ಆಶಾ ಹಲವು ಬಾರಿ ಹೇಳಿದ್ದರು. ಭಾರತದಲ್ಲಿ ಹೋರಾಟದ ಕಿಚ್ಚನ್ನು ಹೊತ್ತಿಸಿದ ಆಕೆ ನಿಜಕ್ಕೂ ಅಮರ 'ಜ್ಯೋತಿ'ಯಾದರು.[ನಿರ್ಭಯಾ ಪ್ರಕರಣ: ಆರೋಪಿಗಳಿಗೆ ಗಲ್ಲೋ ಜೀವಾವಧಿಯೋ ಇಂದು ತೀರ್ಪು]

ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲಿ, ನಿರ್ಭಯಾಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯಾಲಯ ಈ ಮೂಲಕ ನ್ಯಾಯ ನೀಡಲಿ, ಅಕಸ್ಮಾತ್ ಈ ಪ್ರಕರಣದಲ್ಲಿ ಅಪರಾಧಿಗಳು ಗಲ್ಲುಶಿಕ್ಷೆಯಿಂದ ಪಾರಾದದ್ದೇ ಆದರೆ ಅದು ಅಪರಾಧಿಗಳಿಗೆ ಜೀವ ನೀಡೀದಂತೆ ಮಾತ್ರವಲ್ಲ, ನ್ಯಾಯವನ್ನು ಕೊಲೆಮಾಡಿದಂತೆ ... ಎಂಬಿತ್ಯಾದಿ ಟ್ವೀಟ್ ಗಳು ಹರಿದಾಡುತ್ತಿವೆ.

ಕ್ಷಮಾದಾನಕ್ಕೆ ಸಿದ್ಧರಾಗುವ ಮಾನವ ಹಕ್ಕು ಸಂಘಟನೆಗಳು!

ನಿರ್ಭಯಾ ಅತ್ಯಾಚಾರಿಗಳು ಗಲ್ಲುಶಿಕ್ಷೆಗೆ ಮಾತ್ರ ಯೋಗ್ಯರು. ಆದರೆ ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾದರೆ ಕೆಲವು ಮಾನವ ಹಕ್ಕು ಸಂಘಟನೆಗಳು ಅದನ್ನು ವಿರೋಧಿಸಿ, ಕ್ಷಮಾದಾನ ಅರ್ಜಿಯನ್ನು ಸಿದ್ಧಪಡಿಸುವುದಂತೂ ಖಂಡಿತ ಎಂದು ಶೇಫಾಲಿ ವೈದ್ಯ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಗಲ್ಲಿಗೇರಿಸುವ ಮೊದಲು ಅವರನ್ನು ಚಚ್ಚಬೇಕು!

ಆ ವಿಕೃತ ಕಾಮಿಗಳಿಗೆ ಗಲ್ಲು ಶಿಕ್ಷೆಯೊಂದೇ ಸರಿಯಾದ ತೀರ್ಪು. ಅವರನ್ನು ಗಲ್ಲಿಗೇರಿಸುವ ಮೊದಲು ಮಾರಣಾಂತಿಕವಾಗಿ ಅವರನ್ನು ಥಳಿಸಿ, ನಂತರ ಗಲ್ಲಿಗೇರಿಸಬೇಕು ಎಂದು ವರ್ಷಿಣಿ ಚೌಧರಿ ಟ್ವೀಟ್ ಮಾಡಿದ್ದಾರೆ.[ಬಾಲಾಪರಾಧಿ ಬಿಡುಗಡೆಗೆ ತಡೆ ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ]

ವಯಸ್ಸು ಎಷ್ಟೇ ಆಗಿರಲಿ, ಅತ್ಯಾಚಾರಿಗೆ ಗಲ್ಲುಶಿಕ್ಷೆಯೇ ಆಗಲಿ

ಒಬ್ಬನ ಮೇಲೆ ಅತ್ಯಾಚಾರದ ಆರೋಪ ಸಾಬೀತಾಗುತ್ತಿದ್ದಂತೆಯೇ ಆತನಿಗೆ ಗಲ್ಲು ಶಿಕ್ಷೆಗಿಂತ ಕಡಿಮೆ ಶಿಕ್ಷೆ ನೀಡಲೇಬಾರದು. ಆರೋಪಿ 10 ವರ್ಷದವನಿರಲಿ, 80 ವರ್ಷದವನೇ ಇರಲಿ. ಆತನಿಗೆ ಗಲ್ಲುಶಿಕ್ಷೆಯೊಂದೇ ಸೂಕ್ತ ಶಿಕ್ಷೆ ಎಂಬ ಹೇಳಿಕೆ ಕೇಸರಿಯಾ ವಿಳಯತಿ ಎಂಬ ಟ್ವೀಟರ್ ಅಕೌಂಟ್ ನಿಂದ ಅಪ್ಲೋಡ್ ಆಗಿದೆ.['ನನ್ನ ಮಗಳ ಹೆಸರು ಜ್ಯೋತಿ, ನೀವೂ ಹಾಗೆಯೇ ಕರೆಯಿರಿ']

Array

ಭಾರತದ ಮಗಳಿಗೆ ನ್ಯಾಯ ಸಿಗಲಿ

ನಾವು ಭಾರತದ ಇನ್ನೊಬ್ಬ ಮಗಳು ಅತ್ಯಾಚಾರಕ್ಕೊಳಗಾಗುವುದನ್ನು ನೋಡಲು ಇಷ್ಟಪಡುವುದಿಲ್ಲ. ಸುಪ್ರೀಂ ಕೋರ್ಟ್ ಭಾರತದ ಮಗಳಿಗೆ ನ್ಯಾಯ ನೀಡುತ್ತದೆ ಎಂಬ ಭರವಸೆ ನನಗಿದೆ ಎಂದು ನೌಶೀನ್ ಖಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ[ನಿರ್ಭಯಾ ಕೇಸಿನ ಅತ್ಯಾಚಾರಿ ವಿನಯ್ ಆತ್ಮಹತ್ಯೆಗೆ ಯತ್ನ]

ಬಾಲಾಪರಾಧಿಗೂ ಶಿಕ್ಷೆಯಾಗಲಿ

ನಿರ್ಭಯಾ ದೇಹಕ್ಕೆ ಕಬ್ಬಿಣದ ರಾಡ್ ಚುಚ್ಚಿದ್ದು ತಥಾಕಥಿತ ಬಾಲಾಪರಾಧಿ ಮುಹ್ಮದ್ ಅಫ್ರೋಜ್. ಅವನು ಅತ್ಯಾಚಾರ ಮಾಡುವುದಕ್ಕೆ ವಯಸ್ಕ ಎಂದ ಮೇಲೆ, ಶಿಕ್ಷೆ ಪಡೆಯುವುದಕ್ಕೂ ಆತ ವಯಸ್ಕನಾಗಿರಲೇಬೇಕು. ಆತನಿಗೂ ಬೇರೆ ಅಪರಾಧಿಗಳಷ್ಟೇ ಶಿಕ್ಷೆಯಾಗಲಿ ಎಂಬುದು ಸೋನಂ ಮಹಾಜನ್ ಎಂಬುವವರ ಅಭಿಪ್ರಾಯ.['ಜ್ಯೋತಿ' ಆರಿಸಿದ ಬಾಲಾಪರಾಧಿ ಜೈಲಿಂದ ಹೊರಬರುವುದು ಖಚಿತ]

English summary
The much-awaited verdict in the Nirbhaya gang rape case will be pronounced by the Supreme Court today. Here are some twitter reactions on Nirbhaya verdict day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X