ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ನಿರ್ಭಯಾ ತಾಯಿ, ನ್ಯಾಯಮೂರ್ತಿಗಳ ಮನಕಲಕಿದ ಘಟನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ನಿರ್ಭಯಾ ಅತ್ಯಾಚಾರಿಗಳ ಮರಣದಂಡನೆ ಮುಂದೂಡಲಾಗಿದೆ ಎಂದು ಪಟಿಯಾಲಾ ಕೋರ್ಟ್‌ ಹೇಳಿದ ಕೂಡಲೇ ಕೋರ್ಟ್‌ ಹಾಲ್‌ನಲ್ಲಿಯೇ ನಿರ್ಭಯಾ ತಾಯಿ ಅಳುತ್ತಾ ಕುಸಿದು ಬಿದ್ದರು.

ಏಳು ವರ್ಷವಾದರೂ ಇನ್ನೂ ನ್ಯಾಯ ದೊರಕುತ್ತಿಲ್ಲ ಎಂದು ಗೋಳಾಡಿದರು. ಅತ್ಯಾಚಾರಿಗಳ ಹಕ್ಕುಗಳ ರಕ್ಷಣೆ ಬಗ್ಗೆ ಮಾತನಾಡಲಾಗುತ್ತದೆ. ನಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸುವವರು ಯಾರೂ ಇಲ್ಲ' ಎಂದು ಅವರು ನ್ಯಾಯಮೂರ್ತಿಗಳಲ್ಲೇ ಪ್ರಶ್ನಿಸಿದರು.

ನ್ಯಾಯಮೂರ್ತಿಗಳು ನಿರ್ಭಯಾ ತಾಯಿಯನ್ನು ಸಮಾಧಾನ ಪಡಿಸಲು ಯತ್ನಿಸಿದರು. 'ನನಗೂ ನಿಮ್ಮ ಕಷ್ಟ ಅರ್ಥವಾಗುತ್ತದೆ. ಆದರೆ ಮರಣದಂಡನೆಗೆ ಹೊಸ ನೊಟೀಸ್‌ ಜಾರಿ ಮಾಡಲೇ ಬೇಕಾಗಿದೆ, ನಾನು ಕಾನೂನು ಪಾಲನೆ ಮಾಡಲೇ ಬೇಕಿದೆ' ಎಂದು ಹೇಳಿದರು.

Nirbhayas Mother Cried In Court Hall, Justice Become Emotional

ಹೊರ ಬಂದಾಗಲೂ ಸುದ್ದಿಗಾರರ ಮುಂದೆ ಅಳುತ್ತಲೇ ಮಾತನಾಡಿದ ನಿರ್ಭಯಾ ತಾಯಿ ಆಶಾದೇವಿ, 'ನಿರ್ಭಯಾ ತಂದೆ-ತಾಯಿಗೆ ಯಾವ ಹಕ್ಕೂ ಇಲ್ಲ' ಎಂದು ಹೇಳಿದರು.

ಆದರೆ ಸುಪ್ರೀಂಗೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ರದ್ದುಗೊಳಿಸಿದ್ದಕ್ಕೆ ನಿರ್ಭಯಾ ಸಂತಸ ವ್ಯಕ್ತಪಡಿಸಿದರು. ಮರುಪರಿಶೀಲನಾ ಅರ್ಜಿ ರದ್ದು ಗೊಳಿಸಿದ ಪಟಿಯಾಲಾ ಕೋರ್ಟ್‌, ಅಪರಾಧಿ ಅಕ್ಷಯ್‌ ಕುಮಾರ್‌ ಗೆ ಕ್ಷಮಾಧಾನ ಅರ್ಜಿ ಸಲ್ಲಿಸಲು ಸಮಯಾವಕಾಶ ನೀಡಿದೆ.

English summary
A emotional thing happen in supreme court hall. Nirbhaya's mother cried in the hall. Justice try to appease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X