ದೆಹಲಿ, ಹರ್ಯಾಣದಲ್ಲಿ ಸ್ಲೀಪರ್ ಸೆಲ್ಸ್: FIF ವಿರುದ್ಧ ಚಾರ್ಜ್ ಶೀಟ್
ನವದೆಹಲಿ, ಮಾರ್ಚ್ 25: ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯ್ಯದ್ ನ ಫಲಾಹ್ ಇ ಇನ್ಸಾನಿಯತ್ ಫೌಂಡೇಶನ್ (ಎಫ್ ಐಎಫ್) ಧಾರ್ಮಿಕ ಕಾರ್ಯದ ಹೆಸರಿನಲ್ಲಿ ಸ್ಲೀಫರ್ ಸೆಲ್ ಗಳನ್ನು ತಯಾರಿಸುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಅದರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ.
ದೆಹಲಿ ಮತ್ತು ಹರ್ಯಾಣದಲ್ಲಿ ಸ್ಲೀಪರ್ ಸೆಲ್ ಗಳನ್ನು ತಯಾರಿಸಲು ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಸಲಿಮ್ ಮತ್ತು ಮೊಹಮ್ಮದ್ ಕಮ್ರಾನ್ ಎಂಬ ಉಗ್ರರೂ ಇದರಲ್ಲಿ ಭಾಗಿಯಾಗಿದ್ದರು ಎಂದಿರುವ ರಾಷ್ಟ್ರೀಯ ತನಿಖಾ ದಳ 2014 ರಿಂದ ಸ್ಲೀಪರ್ ಸೆಲ್ ತಯಾರಿಸುವ ಕೆಲಸ ನಡೆಸುತ್ತಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಲಷ್ಕರ್ ಇ ತಯಿಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಮತ್ತು ಜಮ್ಮತ್ ಉದ್ ದಾವಾ ಉಗ್ರಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿದೆ.

ಸ್ಲೀಪರ್ ಸೆಲ್ಸ್ ಎಂದರೆ ಭಯೋತ್ಪಾದಕ ಚಟುವಟಿಕೆ ನಡೆಸಲು ಉಗ್ರ ಸಂಘಟನೆ ತರಬೇತಿ ನೀಡಿ, ನೇಮಿಸಿಕೊಂಡ ಗುಪ್ತ ತಂಡ. ಅವರು ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆ ಕಂಡುಬಂದರೂ, ಗೌಪ್ಯವಾಗಿಯೇ ತರಬೇತಿ ಪಡೆದು, ಉಗ್ರ ಚಟುವಟಿಕೆ ನಡೆಸುತ್ತಾರೆ.












Click it and Unblock the Notifications