ಪ್ಯಾನ್ ಕಾರ್ಡ್ ಉಪಯೋಗಿಸುವವರು ಈ ನಿಯಮ ಓದಿಕೊಳ್ಳಿ

Posted By:
Subscribe to Oneindia Kannada

ನವದೆಹಲಿ, ಜನವರಿ, 02: ಪ್ಯಾನ್ ಕಾರ್ಡ್ ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕೆಲವು ಹೊಸ ನಿಯಮಾವಳಿಗಳನ್ನು ಜನವರಿ 1 ರಿಂದ ಜಾರಿಗೆ ತಂದಿದ್ದು, 50,000ಕ್ಕಿಂತ ಹೆಚ್ಚು ವ್ಯವಹಾರ, ವ್ಯಾಪಾರ ವಹಿವಾಟಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿದೆ.

ಪ್ಯಾನ್ ಕಾರ್ಡ್ ಹೊಂದಿರದವರು ನಿರ್ದಿಷ್ಟ ಮಿತಿಗಿಂತ (50,000) ಹೆಚ್ಚಿನ ಹಣಕಾಸು ವರ್ಗಾವಣೆ ಮಾಡಬೇಕಾದಾಗ ಸತ್ಯವಾದ ಅಂಶಗಳನ್ನು ನಮೂದಿಸಬೇಕು, ಇಲ್ಲವಾದಲ್ಲಿ ಏಳು ವರ್ಷಗಳ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್]

Pan card

ಪ್ಯಾನ್ ಕಾರ್ಡ್ ಹೊಂದಿರದವರು ಅನುಸರಿಸಬೇಕಾದ ನಿಯಮಗಳು?

* ಹಣಕಾಸು ವರ್ಗಾವಣೆ ವೇಳೆ ಫಾರ್ಮ್ ಸಂಖ್ಯೆ 60ನ್ನು ಭರ್ತಿ ಮಾಡಬೇಕು

* ಅರ್ಜಿಯಲ್ಲಿ ವ್ಯಕ್ತಿ ಗುರುತು ಮತ್ತು ವಿಳಾಸದ ದೃಢೀಕರಣ ಮತ್ತು ಇತರ ವಿವರಗಳನ್ನು ಒದಗಿಸಬೇಕು

* 60ನೇ ಫಾರ್ಮ್ ನಲ್ಲಿ ವ್ಯಕ್ತಿ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಹಣ ಕಳುಹಿಸುವ ವಿಧಾನ, ವ್ಯಕ್ತಿಯ ಒಟ್ಟು ಆದಾಯ, ಕೃಷಿ ಮತ್ತು ಕೃಷಿಯೇತರ ಅಂದಾಜು ಆದಾಯದ ವಿವರ ಕೊಡಬೇಕು.

* ತೆರಿಗೆ ವಂಚಿಸುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿದ್ದಲ್ಲಿ 277ನೇ ಸೆಕ್ಷನ್ ಪ್ರಕಾರ 6 ತಿಂಗಳಿನಿಂದ 7 ವರ್ಷ ಜೈಲುವಾಸ[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಯಾವುದಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯವಾಗಲಿದೆ?

* 2 ಲಕ್ಷಕ್ಕಿಂತ ಹೆಚ್ಚು ನಗದು ವರ್ಗಾವಣೆ

* 50,000 ರೂಗಿಂತ ಹೆಚ್ಚಿನ ಹೋಟೆಲ್ ಬಿಲ್

* 50,000 ರೂಗಿಂತ ಹೆಚ್ಚಿನ ಮೊತ್ತದ ವಿದೇಶ ಪ್ರಯಾಣದ ದರ

* 10 ಲಕ್ಷ ರೂ ಗಿಂತ ಹೆಚ್ಚಿನ ಬೆಲೆಯ ಸ್ಥಿರಾಸ್ಥಿ ಖರೀದಿ [ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]

* ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್-ಧನ್ ಹೊರತು ಪಡಿಸಿ ಉಳಿದೆಲ್ಲಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು

* ಬ್ಯಾಂಕ್, ಪೋಸ್ಟ್ ಆಫೀಸ್ ನಲ್ಲಿ 50,000 ದಿಂದ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಣ ಡೆಪಾಸಿಂಟ್ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi lead NDA government has made furnishing of PAN card mandatory from January 01, 2016 for cash transactions such as hotel or foreign travels bill exceeding Rs. 50,000. PAN will also be furnished mandatory on purchase of immovable property of Rs. 10lakh.
Please Wait while comments are loading...