ಜಾರಿ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕರಾಗಿ ಸಂಜಯ್ ಮಿಶ್ರಾ ನೇಮಕ

ನವದೆಹಲಿ, ಅಕ್ಟೋಬರ್ 27: ದೆಹಲಿಯ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಾಗಿದ್ದ ಸಂಜಯ್ ಮಿಶ್ರಾ ಅವರನ್ನು ಜಾರಿ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಸಂಪುಟದ ನೇಮಕಾತಿ ಸಮಿತಿಯು ನೂತನ ಹಂಗಾಮಿ ನಿರ್ದೇಶಕರನ್ನು ನೇಮಿಸಿದ್ದು, ಹಾಲಿ ನಿರ್ದೇಶಕ ಕರ್ನಲ್ ಸಿಂಗ್ ಅವರು ಇಂದು ನಿವೃತ್ತರಾಗುತ್ತಿರುವುದರಿಂದ ಮಿಶ್ರಾ ಅವರನ್ನು ನೇಮಿಸಲಾಗಿದೆ.

2015 ರಲ್ಲಿ ಜಾರಿ ನಿರ್ದೇಶನಾಲಯ( Enforcement Directorate, ED)ದ ನಿರ್ದೇಶಕರಾಗಿ ನೇಮಕಗೊಂಡಿದ್ದ ಕರ್ನಲ್ ಸಿಂಗ್, 40 ವರ್ಷದ ಬಳಿಕ EDಯ ನಿರ್ದೇಶಕರಾದ ಮೊದಲ ಐಪಿಎಸ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

new Enforcement Directorate Director

ಇದೀಗ ದೆಹಲಿ ಆದಾಯ ತೆರಿಗೆ ವಿಭಾಗದ ಮುಖ್ಯ ಆಯುಕ್ತ ಮಿಶ್ರಾ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು, ಪೂರ್ಣಾವಧಿ ನಿರ್ದೇಶಕರನ್ನು ಆರಿಸುವವರೆಗೆ ಅಂದರೆ ಮೂರು ತಿಂಗಳ ಕಾಲ ಅವರು ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಎನ್ ಡಿಟಿವಿ ಪ್ರಕರಣ ಮತ್ತು ನ್ಯಾಶ್ನಲ್ ಹೆರಾಲ್ಡ್ ಪ್ರಕರಣಗಳ ತನಿಖೆಯಲ್ಲಿ ಮಿಶ್ರಾ ಅವರು ಬಹು ಮಹತ್ವದ ಪಾತ್ರ ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+