'ಆಮ್ ಆದ್ಮಿ' ಕೇಜ್ರಿವಾಲಾಗೆ ವಿಪರೀತ ಜ್ವರ, ಬೇಧಿ ಬಾಧೆ
ದೆಹಲಿ, ಡಿ. 30: ದಿಲ್ಲಿಯ ನೂತನ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲಾ ಅವರಿಗೆ ವಿಪರೀತ ಜ್ವರ ಕಾಡಲಾರಂಭಿಸಿದೆ. ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಕೇಜ್ರಿವಾಲಾ ಬರೋಬ್ಬರಿ 102 ಡಿಗ್ರಿ ಜ್ವರ ಪೀಡಿತರಾಗಿದ್ದಾರೆ.
ವೈದ್ಯರು ಮುಖ್ಯಮಂತ್ರಿ ಕೇಜ್ರಿವಾಲಾಗೆ ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿದ್ದಾರೆ.(ಆಮ್ ಆದ್ಮಿ ಕೇಜ್ರಿವಾಲಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದಿನ)

ಈ ಸಂಬಂಧ ಟ್ವೀಟ್ ಸಹ ಮಾಡಿರುವ ಮುಖ್ಯಮಂತ್ರಿ ಕೇಜ್ರಿವಾಲಾ ಅವರು 'ಮುಖ್ಯಮಂತ್ರಿಯಾಗಿ ಕಚೇರಿಯಲ್ಲಿಂದು ಮಹತ್ವದ ದಿನವಾಗಿತ್ತು. ನೀರಿನ ಸಂಬಂಧ ಬಹುನಿರೀಕ್ಷಿತ ಘೋಷಣೆ ಹೊರಡಿಸಬೇಕಿತ್ತು. ಓ ದೇವರೇ! ಅತ್ಯಂತ ಅನುಚಿತ ಸಮಯದಲ್ಲಿ ಜ್ವರ ಕಾಡಲಾರಂಭಿಸಿದೆ' ಎಂದು ವಿಷಾದಪಟ್ಟಿದ್ದಾರೆ.
Running 102 fever since yesterday. Severe loose motions. Sad that i won't be able to attend office today.
— Arvind Kejriwal (@ArvindKejriwal) December 30, 2013 ಆಮ್ ಆದ್ಮಿಗೆ ವಿಪರೀತ ಜ್ವರ, ಬೇಧಿ ಬಾಧೆ:
45ವ ವರ್ಷದ ಆಮ್ ಆದ್ಮಿ ಕೇಜ್ರಿವಾಲಾ ಅವರು 'ನನಗೆ 102 ಡಿಗ್ರಿ ಜ್ವರ ಬಾಧಿಸುತ್ತಿದೆ. ಜತೆಗೆ ನಿನ್ನೆಯಿಂದ ಬೇಧಿ ಬಾಧೆಯೂ ಇದೆ. ಆದ್ದರಿಂದ ಕಚೇರಿಗೆ ಬರಕಲು ಆಗುತ್ತಿಲ್ಲ' ಎಂದು ಕಾರಣ ನೀಡಿದ್ದಾರೆ. ಆದರೂ ಪಕ್ಷದ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
It was so imp to attend office today. We had planned the water announcement. God, bahut galat time par bimaar kiya.
— Arvind Kejriwal (@ArvindKejriwal) December 30, 2013 ಈ ಮಧ್ಯೆ, Delhi Jal Board ಅಧಿಕಾರಿಗಳು ಮುಖ್ಯಮಂತ್ರಿ ಕೇಜ್ರಿವಾಲಾ ಅನುಪಸ್ಥಿತಿಯಲ್ಲಿ ಇಂದು ಸಂಜೆಯೇ ಸಭೆ ಸೇರಿ ಉಚಿತ ನೀರು ಪೂರೈಕೆ ಸಂಬಂಧ ಮಹತ್ವದ ನಿರ್ಣಯ ಕೈಗೊಳ್ಳುವ ಲಕ್ಷಣಗಳಿವೆ ಎಂದು ಮೂಲಗಳು ಹೇಳಿವೆ.












Click it and Unblock the Notifications