ಸಿಎಂ ಅರವಿಂದ್ ಕೇಜ್ರಿವಾಲಾ ಭಾಷಣದ ಸಂಕ್ಷಿಪ್ತ ರೂಪ

ನವದೆಹಲಿ, ಡಿ. 28- ದಿಲ್ಲಿಯ 7ನೇ ಮತ್ತು ಹಳ್ಳಿಗಾಡಿನಿಂದ ಬಂದ ನಾಲ್ಕನೆಯ ಮುಖ್ಯಮಂತ್ರಿಯಾಗಿ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲಾ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತನ್ಮೂಲಕ, ಕೇವಲ 28 ಶಾಸಕರನ್ನು ಹೊಂದಿರುವ ಅಲ್ಪಮತದ ಆಮ್‌ ಆದ್ಮಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ.

New Delhi- AAP new Chief Minister Arvind Kejriwal speech

* ದಿಲ್ಲಿ ಹೃದಯ ಭಾಗದಲ್ಲಿರುವ ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭಕ್ಕೆ ಸುಮಾರು 50 ಸಾವಿರ ಮಂದಿ AAP ಬೆಂಬಲಿಗರು ಸಾಕ್ಷಿಯಾದರು.
* 1959ರ ಪೈಗಾಮ್ ಹಿಂದಿ ಸಿನಿಮಾದಲ್ಲಿ ಮನ್ನಾಡೆ ಹಾಡಿರುವ 'ಇನ್ಸಾನ್ ಕಾ ಇನ್ಸಾನ್ ಸೆ ಹೋ ಬೈಚಾರಾ' ಎಂಬ ಮಾರ್ಮಿಕ ಹಾಡನ್ನು ಸಂಪೂರ್ಣವಾಗಿ ಹಾಡಿದರು.
* ಅದಾದ ನಂತರ ರಾಜಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
* ಭಾನುವಾರಗಳಂದೂ ಆಮ್ ಆದ್ಮಿ ಸರಕಾರ ಕೆಲಸ ಮಾಡಲಿದೆ ಎಂದು ಕೇಜ್ರಿವಾಲಾ ತಿಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲಾ ಭಾಷಣದ ವಿವರ:
* ಈ ಐತಿಹಾಸಿಕ ದಿನದಂದು ದಿಲ್ಲಿಯ ಪ್ರತಿಯೊಬ್ಬ ಜನಸಾಮಾನ್ಯರೂ ಮುಖ್ಯಮಂತ್ರಿ/ ಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
* ಇಂದು ಜನಸಾಮಾನ್ಯನ ಜಯಶಾಲಿಯಾದ ದಿನ.
* ಇದುವರೆಗೂ ಭಾರತವನ್ನು ಭ್ರಷ್ಟಾಚಾರದಿಂದ ಯಾರೂ ಪಾರು ಮಾಡಲಾರರು ಎಂಬ ಅನಿಸಿಕೆಯೇ ಮನೆ ಮಾಡಿತ್ತು. ಆದರೆ ಪ್ರಮಾಣಿಕತೆ ಮತ್ತು ಸಮಗ್ರತೆ ಇದ್ದರೆ ಸಾಕು ಚುನಾವಣೆಯನ್ನೂ ಗೆಲ್ಲಬಹುದು. ರಾಜಕೀಯವನ್ನೂ ಮಾಡಬಹುದು ಎಂಬುದು ಇಂದು ಸಾಬೀತಾಗಿದೆ.
* ದಿಲ್ಲಿ ಜನತೆಗೆ ಸಂದ ಬಹುದೊಡ್ಡ ಜಯ ಇದಾಗಿದೆ.
* ದೆಹಲಿಯಲ್ಲಿ ಇಂತಹ ಮಹತ್ತರ ಕ್ರಾಂತಿ ನಡೆಯುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಇಷ್ಟೊಂದು ವೈಭವಯುತವಾಗಿ ಸ್ವರಾಜ್ ಅನ್ನು ಸ್ಥಾಪಿಸಬಹುದು ಎಂದು ನಾವು ಎಂದಿಗೂ ಅಂದುಕೊಂಡಿರಲಿಲ್ಲ.
* ಇದನ್ನು ಸಾಧಿಸಿದ್ದು ನಾವಲ್ಲ. ಈ ಸಂದರ್ಭದಲ್ಲಿ ನಾನು ದೇವರಿಗೆ ವಂದನೆ ಸಲ್ಲಿಸಬಯಸುತ್ತೇನೆ.
* ದಿಲ್ಲಿಯ ಈ ಜಯ ನಿಜಕ್ಕೂ ಪವಾಡ ರೂಪದಲ್ಲಿದೆ.
* ನಾವು ಒಟ್ಟಾದರೆ ಯಾವುದೇ ಸಮಸ್ಯೆಯನ್ನು ಬೇಕಾದರೂ ಸುಲಭವಾಗಿ ಪರಿಹರಿಸಬಹುದು ಎಂಬುದು ಸಾಬೀತಾಗಿದೆ.
* ನಮ್ಮ ಕೈಯಲ್ಲಿ ಯಾವುದೇ ಮಂತ್ರದಂಡ ಇಲ್ಲ. ಆದರೆ ದಿಲ್ಲಿಯ 1.5 ಕೋಟಿ ಮಹಾಜನತೆ ಒಗ್ಗೂಡಿದರೆ ಯಾವುದಕ್ಕೇ ಬೇಕಾದರೂ ಪರಿಹಾರ ಕಂಡುಕೊಳ್ಳಬಹುದು.
* 2 ವರ್ಷಗಳ ಹಿಂದೆ ಇಲ್ಲೇ ಇದೇ ಜಾಗದಲ್ಲಿ ನಾವು ಸಭೆ ಸೇರಿದ್ದು. ಭ್ರಷ್ಟಾಚಾರವನ್ನು ಕೊನೆಗಾಣಿಸೋಣ ಎಂದು ಗಾಂಧಿವಾದಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಿದರು.
* ಅಣ್ಣಾ ಹೇಳುತ್ತಿದ್ದರು ರಾಜಕೀಯ ಎಂಬುದು ದುರ್ಗಂಧ ಬೀರುತ್ತಿರುವ ಕ್ಷೇತ್ರವಾಗಿದೆ. ಆದರೆ ನಾವು ಅಂತಹ ಕ್ಷೇತ್ರದಲ್ಲಿಯೇ ಕಾಲೂರಬೇಕು. ಅದನ್ನು ನಾವು ಸ್ವಚ್ಛಗೊಳಿಸಬೇಕು ಎಂದು ಅಣ್ಣಾಗೆ ನಾನು ಹೇಳುತ್ತಿದ್ದೆ.
* ರಾಜಕೀಯದಲ್ಲಿ ಭ್ರಷ್ಟಾಚಾರ ತಳವೂರಿರುವುದರಿಂದ ಆಸ್ಪತ್ರೆ, ಶಾಲೆ, ನೀರು ಮತ್ತು ವಿದ್ಯುತ್ ಸೇರಿದಂತೆ ನಮ್ಮ ಮೂಲಭೂತ ವ್ಯವಸ್ಥೆಗಳು ಶಿಥಿಲಾವಸ್ಥೆಯಲ್ಲಿವೆ.
* ಸಂತೋಷ್ ಕೋಲಿ ಹುತಾತ್ಮರಾದರು. ದೇಹಕ್ಕಷ್ಟೇ ಸಾವು; ಆತ್ಮ ಅಮರ ಅನ್ನುತ್ತದೆ ನಮ್ಮ ಹಿಂದೂ ಧರ್ಮ. ಇಂದು ನಮ್ಮೀ ವಜಿಯವನ್ನು ಕಂಡು ಸಂತೋಷ್ ಕೋಲಿ ಆತ್ಮ ಪ್ರಸನ್ನಗೊಂಡಿರುತ್ತದೆ.
ಭಾಷಣ ಭಾಗ- 2:
* ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಲ್ಲ. ನಿಮ್ಮ ಸೇವಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ.
* ಇಂದು ನಾನೊಬ್ಬನೆ ಅಧಿಕಾರ ಸ್ವೀಕರಿಸಿಲ್ಲ. ದೆಹಲಿಯ ಎಲ್ಲ ಜನತೆಯೂ ಅಧಿಕಾರ ಸ್ವೀಕರಿಸಿದ್ದಾರೆ. ಎಲ್ಲರೂ ಸೇರಿ ದೆಹಲಿಯನ್ನು ಅಭಿವೃದ್ಧಿ ಮಾಡೋಣ.
* ಯಾವುದೇ ಜಾತಿ, ಮತ, ಭೇದವಿಲ್ಲದೆ ನಾವು ಜನತೆಯ ಸೇವೆ ಮಾಡುತ್ತೇವೆ. ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ ಎಂಬುದನ್ನು ತೋರಿಸುವ ಮೂಲಕ ದೆಹಲಿಯಲ್ಲಿ ಹೊಸತನ್ನು ತರುತ್ತೇವೆ.
* ಕೆಲ ದಿನಗಳಿಂದ ದಿಲ್ಲಿಯ ಕೆಲ ಸರಕಾರಿ ನೌಕರರನ್ನು ಭೇಟಿ ಮಾಡಿದ್ದೇನೆ. ಅವರಲ್ಲಿ ಬಹುತೇಕ ಮಂದಿ ರಾಷ್ಟ್ರಕ್ಕಾಗಿ ಸೇವೆ ಸಲ್ಲಸಿಲು ಸಿದ್ಧವಿರುವಾಗಿ ಭರವಸೆ ನೀಡಿದ್ದಾರೆ.
* ಬಹುದೊಡ್ಡ ಜವಾಬ್ದಾರಿ ನಮ್ಮ ಹೆಗಲೇರಿದೆ. ಆದರೆ ಕೀರ್ತಿಯ ಶನಿ ನಮ್ಮ ಬೆನ್ನೇರದಿರಲಿ ಎಂಬುದು ನನ್ನ ಸದಾಶಯ. ಜವಾಬ್ದಾರಿ ನಿಭಾಯಿಸುವಲ್ಲಿ ನಾವು ಸಫಲರಾಗುತ್ತೇವೋ ಒಲ್ಲವೋ ಎಂಬುದು ನಮ್ಮ ಕೈಯಲ್ಲಿಲ್ಲ. ಫಲಾಪೇಕ್ಷೆ ಬೇಡ. ಆದರೆ ಕಷ್ಟದ ಸಮಯದಲ್ಲಿ ಓ ದೇವರೇ ನಮ್ಮ ಕೈಹಿಡಿದು ಮುನ್ನಡೆಸು ಎಂದು ಪ್ರಾರ್ಥಿಸೋಣ.

* ನಾವು ಯಾವುದೇ ತಪ್ಪು ಮಾಡುವುದು ಬೇಡ. ಸನ್ಮಾರ್ಗದಲ್ಲಿ ಸತ್ಯ ಮಾರ್ಗದಲ್ಲಿ ಹೆಜ್ಜೆ ಹಾಕೋಣ.
* ನಾವು ವಿಶ್ವಾಸಮತದಲ್ಲಿ ಗೆಲ್ಲದೇ ಹೋದರೆ ಮರು ಚುನಾವಣೆಯನ್ನು ಎದುರಿಸೋಣ. ಜನ ನಮ್ಮ ಬೆಂಬಲಕ್ಕೆ ಇದ್ದೇ ಇರುತ್ತಾರೆ.
* ನಾವು ದುಡ್ಡು ಮಾಡಬೇಕೆಂದು ಅಧಿಕಾರಕ್ಕೆ ಬಂದವರಲ್ಲ. ಶುದ್ಧ/ ಸ್ವಚ್ಛ ಆಡಳಿತ ನೀಡೋಣವೆಂದು ನಮ್ಮ ನಮ್ಮ ಕೆಸಲಗಳನ್ನು ಬಿಟ್ಟುಬಂದು ಆಡಳಿತ ನಡೆಸಲು ಬಂದಿದ್ದೇವೆ.
* ವಿಶ್ವಾಸಮತದ ಸೋಲು/ ಗೆಲುವು ಬಗ್ಗೆ ನಾವು ಚಿಂತಿಸುತ್ತಿಲ್ಲ. ಅದರ ಬಗ್ಗೆ ಇತರೆ ಪಕ್ಷಗಳು ಚಿಂತೆಗೀಡಾಗಿವೆ.

ಕೊನೆಯ ಮಾತು ಆದರೆ ಸದಾ ನೀವು ನೆನಪಲ್ಲಿಟ್ಟುಕೊಳ್ಳಬೇಕಾದ ಮಾತು ಅಂದರೆ ನಿಮ್ಮನ್ನು ಯಾರಾದರೂ ಲಂಚ ಕೇಳಿದರೆ ಸ್ಪಷ್ಟವಾಗಿ ಅದನ್ನು ನಿರಾಕರಿಸಿ. ನಮ್ಮ ಫೋನ್ ಸಂಖ್ಯೆಗಳು ಸಾರ್ವಜನಿಕವಾಗಿ ಲಭ್ಯವಿವೆ. ಜಸ್ಟ್ ಒಂದು ಕರೆ ಮಾಡಿ. ಆ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಹಾಕೋಣ.
* ದಯವಿಟ್ಟು ನನ್ ಜತೆಜತೆಗೆ ಪ್ರಮಾಣ ಸ್ವೀಕರಿಸಿ: ನಾನೆಂದಿಗೂ ಲಂಚ ಸ್ವೀಕರಿಸುವುದಿಲ್ಲ; ಜತೆಗೆ ಲಂಚ ನೀಡುವುದೂ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+