• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಪ್ರಧಾನಿ ನೆಹರೂ ಅತಿದೊಡ್ಡ ಅತ್ಯಾಚಾರಿ ಎಂದ ಸಾಧ್ವಿ

|

ನವದೆಹಲಿ, ಡಿಸೆಂಬರ್ 09: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೇಶ ಕಂಡ ಅತಿದೊಡ್ಡ ಅತ್ಯಾಚಾರಿ ಎಂದು ವಿಶ್ವಹಿಂದೂಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

"ವಿಶ್ವದ ಅತ್ಯಾಚಾರಿಗಳ ರಾಜಧಾನಿಯಾಗಿ ಭಾರತ ಮಾರ್ಪಟ್ಟಿದೆ'' ಎಂಬ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆ ಪ್ರತಿಯಾಗಿ ಸಾಧ್ವಿ ಈ ರೀತಿ ಹೇಳಿದ್ದಾರೆ.

ಅತ್ಯಾಚಾರದ ಅಳಲು; ಸೋನಿಯಾ ಗಾಂಧಿಯ ನಿರ್ಧಾರವೇನು?

ನಮ್ಮ ದೇಶವು ರಾಮ ಹಾಗೂ ಕೃಷ್ಣರ ನಾಡು, ರಾಹುಲ್ ಗಾಂಧಿ ಹೇಳಿಕೆ ಅನುಸಾರವಾಗಿ ನೆಹರೂರನ್ನು ಅತಿದೊಡ್ಡ ರೇಪಿಸ್ಟ್ ಎನ್ನಬೇಕಾಗುತ್ತದೆ. ರಾಮ ಹಾಗೂ ಕೃಷ್ಣರ ಸಂಸ್ಕೃತಿಯನ್ನು ನಾಶಪಡಿಸಿದವರು, ಭಯೋತ್ಪಾದನೆ, ನಕ್ಸಲಿಸಂ, ಭ್ರಷ್ಟಾಚಾರ, ಅತ್ಯಾಚಾರ ಎಲ್ಲವೂ ನೆಹರೂ ಕುಟುಂಬದ ಕೊಡುಗೆ ಎಂದು ಸಾಧ್ವಿ ಹೇಳಿದರು.

ಹಿಂದೂ ಕುಟುಂಬಕ್ಕೆ ಫ್ಯಾಮಿಲಿ ಪ್ಲ್ಯಾನಿಂಗ್ ಬೇಡ: ಸಾಧ್ವಿ

ಭಾರತವು ವಿಶ್ವದ ಅತ್ಯಾಚಾರಿಗಳ ರಾಜಧಾನಿಯಾಗಿದೆ. ಭಾರತವು ಏಕೆ ತನ್ನ ಮಗಳು, ಸೋದರಿಯರನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿದೇಶಿಯರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.ಉತ್ತರಪ್ರದೇಶದ ಬಿಜೆಪಿ ಶಾಸಕರ ಮೇಲೆ ಅತ್ಯಾಚಾರ ಪ್ರಕರಣವಿದೆ ಆದರೆ, ದೇಶದ ಪ್ರಧಾನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಏಕೆ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಪ್ರಶ್ನಿಸಿದ್ದರು.

English summary
Vishwa Hindu Parishad (VHP) leader Sadhvi Prachi on Sunday said the country's first Prime Minister Jawaharlal Nehru was the "biggest rapist".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X