ದೆಹಲಿಯಲ್ಲಿ ನಾಲ್ಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು
ನವದೆಹಲಿ, ಜುಲೈ 21: ಭಾರತದ ರಾಜಧಾನಿ ದೆಹಲಿಯಲ್ಲಿ ನಾಲ್ವರಲ್ಲಿ ಒಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ವರದಿಯೊಂದು ಸಾಬೀತುಪಡಿಸಿದೆ.
Recommended Video
21,387 ಮಂದಿಯ ರಕ್ತದ ಮಾದರಿ ಪರೀಕ್ಷಿಸಿದಾಗ ಅದರಲ್ಲಿ ಶೇ. 23.48 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಸರ್ಕಾರದ ಸಮೀಕ್ಷೆಯೊಂದು ತಿಳಿಸಿದೆ.
ಸರ್ಕಾರ ಸೂಚಿಸಿರುವುದಕ್ಕಿಂತ ನಗರದಲ್ಲಿ ಸೋಂಕು ವ್ಯಾಪಕವಾಗಿ ಹರಡಿದೆ ಎಂಬುದು ತಿಳಿದುಬಂದಿದೆ.ದೆಹಲಿಯಲ್ಲಿ ಇದುವರೆಗೆ 123,747 ಪ್ರಕರಣಗಳು ದಾಖಲಾಗಿವೆ. ಇದು 19.8 ಮಿಲಿಯನ್ ಜನಸಂಖ್ಯೆಯ ಶೇ. 1ರಷ್ಟಿದೆ.

ಹೆಚ್ಚಿನ ಕೊರೊನಾ ಸೋಂಕಿತರಲ್ಲಿ ಲಕ್ಷಣಗಳೇ ಇಲ್ಲ. ದೆಹಲಿಯಲ್ಲಿ ದಟ್ಟವಾದ ಜನಸಂಖ್ಯೆಯಿರುವುದರಿಂದ ಸೋಂಕಿತರ ಪ್ರಮಾಣ ಶೇ.23.48ರಷ್ಟು ಇರಲು ಸಾಧ್ಯವೇ ಇಲ್ಲ. ಎಲ್ಲಾ ಸುರಕ್ಷತಾ ಕ್ರಮವನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಈ ಅಧ್ಯಯನವು ಭಾರತದಲ್ಲಿ ಕೊರೊನಾ ಸೋಂಕು ಯಾವ ಹಂತದಲ್ಲಿದೆ ಎಂಬುದನ್ನು ಆಡಳಿತ ತಿಳಿಯಲು ಸಹಕಾರಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಕಂಟೈನ್ಮೆಂಟ್ ಪಾಲಿಸಿಗಳು, ಪರೀಕ್ಷೆಯ ಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.
ಇಡೀ ದೇಶದಲ್ಲೇ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಜೂನ್ ಮೊದಲೆರೆಡು ವಾರಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲದೆ ಪರದಾಡುವಂತಾಗಿತ್ತು.
ನಿತ್ಯ ಕೊರೊನಾ ಸೋಂಕಿತರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.
ಕಳೆದ ಎರಡು ವಾರಗಳಿಂದ 1200 ರಿಂದ 1600ರವರೆಗೆ ನಿತ್ಯ ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಸೋಮವಾರ 954 ಪ್ರಕರಣಗಳು ದೃಢಪಟ್ಟಿತ್ತು. ಹಾಗೆಯೇ ಮರಣ ಪ್ರಮಾಣವೂ ಕೂಡ ಕಡಿಮೆಯಾಗಿದೆ.












Click it and Unblock the Notifications