ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಇಲಾಖೆ ನೋಟಿಸ್: ಸೋನಿಯಾ, ರಾಹುಲ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10 : ಆದಾಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈ ಕೋರ್ಟ್ ತಿರಸ್ಕರಿಸಿದೆ.

2011-12ನೇ ಸಾಲಿನ ತೆರಿಗೆ ಮಾಹಿತಿಯ ಮರುಪರಿಶೀಲನೆಗಾಗಿ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ವಿರುದ್ಧ ರಾಹುಲ್ ಹಾಗೂ ಸೋನಿಯಾ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ, ರಾಹುಲ್ ಗೆ ಸಂಕಷ್ಟನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ, ರಾಹುಲ್ ಗೆ ಸಂಕಷ್ಟ

ತೆರಿಗೆ ಸಂಬಂಧಿಸಿದ ವಿಚಾರಣೆಯನ್ನು ಮತ್ತೆ ಆರಂಭಿಸಲು ತೆರಿಗೆ ಇಲಾಖೆಗೆ ಅಧಿಕಾರ ಇದೆ. ತಮ್ಮ ಸಮಸ್ಯೆಗಳೇನಿದ್ದರೂ ಅರ್ಜಿದಾರರು ಆದಾಯ ತೆರಿಗೆ ಇಲಾಖೆ ಜತೆಗೆ ಬಗೆಹರಿಸಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.

Rahul- Sonia Gandhi

2011-12ನೇ ಸಾಲಿನಲ್ಲಿ ತಮ್ಮ ಆದಾಯ ಮಾಹಿತಿ ನೀಡುವಾಗ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಎಂಬ ಮಾಹಿತಿ ಬಹಿರಂಗ ಮಾಡಿರಲಿಲ್ಲ. ಆ ಆದಾಯವನ್ನು ತಿಳಿಸಿರಲಿಲ್ಲ ಎಂಬುದು ಆದಾಯ ತೆರಿಗೆ ಇಲಾಖೆಯ ಆರೋಪವಾಗಿದೆ.

ಇನ್ನು ಅದೇ ಯಂಗ್ ಇಂಡಿಯನ್ ನ್ಯಾಷನಲ್ ಹೆರಾಲ್ಡ್ ನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸೋನಿಯಾಗಾಂಧಿ ಅವರು ಸಲ್ಲಿಸಿದ್ದ ಆದಾಯದ ಮಾಹಿತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಪರಿಶೀಲನೆ ಮಾಡುವ ವಿಚಾರವಾಗಿ ಹೈ ಕೋರ್ಟ್ ಮೆಟ್ಟಿಲೇರಿದ್ದರು.

English summary
The Delhi High Court has rejected a plea filed by Rahul Gandhi and Sonia Gandhi in which they had challenged an income tax notice. The court rejected the plea that challenged the notice seeking tax re-assessment for the financial year 2011-2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X