ನರೇಂದ್ರ ಮೋದಿಯವರ 'ಮನ್ ಕಿ ಬಾತ್'ನಿಂದ ಕೇಂದ್ರಕ್ಕೆ ಬಂದ ಆದಾಯವೆಷ್ಟು?
ನವದೆಹಲಿ, ಜುಲೈ 20: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದಿದೆ. ಅದೇ ವರ್ಷ ಶುರುವಾದ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ, ಇಲ್ಲಿಯವರೆಗೆ ಸುಮಾರು 31 ಕೋಟಿ ರೂಪಾಯಿ (30,80,91,225) ಆದಾಯ ಗಳಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಮಳೆಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವ ವೇಳೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, "ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕೀ ಬಾತ್' ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದ ಹಲವು ಚಾನಲ್ಗಳಲ್ಲಿ ಪ್ರಸಾರವಾಗುತ್ತದೆ. 2014ರಿಂದ ಇಲ್ಲಿಯವರೆಗೆ ಪ್ರಸಾರ ಭಾರತಿ ತನ್ನ ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಒಟ್ಟು 78 ಆವೃತ್ತಿಗಳನ್ನು ಪ್ರಸಾರ ಮಾಡಿದೆ. ಈಗ 23 ಭಾಷೆ, 29 ಉಪ ಭಾಷೆಗಳಲ್ಲೂ 'ಮನ್ ಕೀ ಬಾತ್' ಪ್ರಸಾರವಾಗುತ್ತಿದೆ,'' ಎಂದು ತಿಳಿಸಿದರು.
"ಪ್ರಸಾರ ಭಾರತಿ ತನ್ನ ಹಿಂದಿ ಮತ್ತು ವಿವಿಧ ಭಾಷೆಗಳ ದೂರದರ್ಶನ ಚಾನೆಲ್ಗಳ ಮೂಲಕ 'ಮನ್ ಕೀ ಬಾತ್'ನ ದೃಶ್ಯೀಕೃತ ಆವೃತ್ತಿಗಳನ್ನೂ ಪ್ರಸಾರ ಮಾಡುತ್ತಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನಗಳ ಹೊರತಾಗಿಯೂ ಈ ಕಾರ್ಯಕ್ರಮವನ್ನು ದೇಶದಲ್ಲಿ ಸುಮಾರು 91 ಖಾಸಗಿ ಸ್ಯಾಟಲೈಟ್ ಟಿವಿ ಚಾನಲ್ಗಳು, ಕೇಬಲ್, ಡಿಟಿಎಚ್ ಪ್ಲ್ಯಾಟ್ಫಾರಂಗಳು ಪ್ರಸಾರ ಮಾಡುತ್ತಿವೆ.''

"ಅದರೊಂದಿಗೆ iOS, ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ನ್ಯೂಸ್ ಆನ್ ಏರ್ ಮೂಲಕ ಅಥವಾ ಪ್ರಸಾರ ಭಾರತಿಯ ಯೂಟ್ಯೂಬ್ ಚಾನಲ್ಗಳ ಮೂಲಕ ಮನ್ ಕೀ ಬಾತ್ ಕೇಳುತ್ತಿದ್ದಾರೆ,'' ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದರು.
ಟಿವಿ ಚಾನೆಲ್ಗಳ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC-ಬಾರ್ಕ್)ಯ ಡಾಟಾ ಅನ್ವಯ, ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ 2018-2020ರ ಅವಧಿಯಲ್ಲಿ ಅಂದಾಜು 6 ಕೋಟಿಯಿಂದ 14.35 ಕೋಟಿಗೆ ಏರಿಕೆಯಾಗಿದೆ.
ಈ ಕುರಿತು ಪ್ರತಿವರ್ಷದ ಅಂಕಿ- ಅಂಶ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, "2014-15ರಲ್ಲಿ 1.16 ಕೋಟಿ, 2015-16ರಲ್ಲಿ 2.18 ಕೋಟಿ, 2016-17ರಲ್ಲಿ 5.14, 2017-18ರಲ್ಲಿ 10.64 ಕೋಟಿ, 2018-19ರಲ್ಲಿ 7.47 ಕೋಟಿ, 2019-20ರಲ್ಲಿ 1.56 ಕೋಟಿ, 2020-21ರಲ್ಲಿ 1.02 ಕೋಟಿ ಆದಾಯ ಸೇರಿ ಒಟ್ಟು 30.80 ಕೋಟಿ ರೂಪಾಯಿ ಆದಾಯ ಬಂದಿದೆ,'' ಎಂದು ಹೇಳಿದ್ದಾರೆ.
"ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ 2018ರಲ್ಲಿ ಆರು ಕೋಟಿಯಿದ್ದ ಪ್ರೇಕ್ಷಕರ ಸಂಖ್ಯೆ, 2020ರ ವೇಳೆಗೆ 14.35 ಕೋಟಿಗೆ ಹೆಚ್ಚಾಗಿದೆ,'' ಎಂದು ತಿಳಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications