ಚುನಾವಣಾ ಪ್ರಚಾರ ಸಮಿತಿಗೆ ಮೋದಿ ಗುಡ್ ಬೈ?

ನವದೆಹಲಿ, ಸೆ.17: ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೊಗಳಿದ ಬೆನ್ನಲ್ಲೇ ಕುತೂಹಲಕಾರಿ ಸುದ್ದಿಯೊಂದು ಹಬ್ಬಿದೆ. ಒಬ್ಬರಿಗೆ ಒಂದೇ ಹುದ್ದ್, ಅಧಿಕಾರ ವಿಕೇಂದ್ರಿಕರಣ ಎಂಬ ಮಾತನ್ನಾಡುವ ಬಿಜೆಪಿ ಇದೇ ನಿಯಮವನ್ನು ಮೋದಿ ಅವರ ಮೇಲೂ ಪ್ರಯೋಗಿಸುವ ಸಾಧ್ಯತೆಯಿದೆ.

ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿಯ ಅಧಿಕೃತ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಒಂದು ಹುದ್ದೆಯನ್ನು ಕೈಬಿಡಬೇಕಾಗಿದೆ. ಮಾಧ್ಯಮಗಳ ವರದಿ ಪ್ರಕಾರ 64ನೇ ಹುಟ್ಟುಹಬ್ಬದ ದಿನವಾದ ಇಂದು ಈ ಬಗ್ಗೆ ಮೋದಿ ಸುಳಿವು ನೀಡಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ತೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಮೋದಿ ಅವರು ಮುಂದುವರೆಯಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲದೆ ಮೋದಿ ಅವರೂ ಕೂಡಾ ದೆಹಲಿಗೆ ತೆರಳಿದರೂ ಗುಜರಾತ್ ನಂಟು ಕಳೆದುಕೊಳ್ಳುವುದಿಲ್ಲ ಎಂದಿದ್ದರು.

Narendra Modi to resign as BJP election campaign chief: Reports

ಬಿಜೆಪಿ ಹಿರಿಯ ನಾಯಕರು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಹಿರಿಯ ನಾಯಕರ ಜತೆ ಚರ್ಚೆ ನಡೆಸಿದ್ದು ಶೀಘ್ರದಲ್ಲೇ ಹೊಸಬರನ್ನು ನೇಮಿಸಲು ಸಿದ್ಧತೆ ನಡೆದಿದೆ. ಮೋದಿ ಅವರು ಗುಜರಾತ್ ಬಿಡುವುದಿಲ್ಲ ಅಲ್ಲದೆ ಗುಜರಾತಿನಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಯಾರನ್ನು ನೇಮಿಸುವುದಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸತತ ನಾಲ್ಕು ಬಾರಿ ಗುಜರಾತಿನಲ್ಲಿ ಬಿಜೆಪಿ ಬಾವುಟ ಹಾರಿಸಿರುವ ಮೋದಿ ಅವರು ರಾಜ್ಯಕ್ಕಾಗಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಎಲ್ಲವೂ ಪೂರೈಸುವ ತನಕ ರಾಜ್ಯದಲ್ಲಿ ಇರುವಿಕೆ ಅವಶ್ಯ ಎನ್ನಲಾಗಿದೆ.

ಈಗ ಮೋದಿ ಅವರು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ತೊರೆದರೆ ಆ ಸ್ಥಾನಕ್ಕೆ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅನಂತಕುಮಾರ್ ಅವರ ಹೆಸರುಗಳು ಓಡಾಡುತ್ತಿವೆ. ಆದರೆ, ಇನ್ನೂ ಯಾವುದೋ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಎಲ್ಲರೂ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+