ಬೆಂಕಿಯುಂಡೆಯಂತಹ ಕಾರ್ಮಿಕ ನಾಯಕ: ಜಾರ್ಜ್ ಅವರನ್ನು ನೆನೆದ ಮೋದಿ
ನವದೆಹಲಿ, ಜನವರಿ 29: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವ, ವಿ.ಪಿ. ಸಿಂಗ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಎಲ್ಲೆಡೆ ಶೋಕ ವ್ಯಕ್ತವಾಗಿದೆ.
ಸುದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಅವರು ಮಂಗಳವಾರ ದೆಹಲಿಯಲ್ಲಿ ನಿಧನರಾದರು.
ಮಂಗಳೂರು ಮೂಲದವರಾದ ಅವರು ತಮ್ಮ ಧೀಮಂತ ಹೋರಾಟದ ವ್ಯಕ್ತಿತ್ವದಿಂದ ಹೆಸರಾಗಿದ್ದವರು. ಅದರಲ್ಲಿಯೂ ಕಾರ್ಮಿಕ ಚಳವಳಿಯ ಹೋರಾಟಗಳಲ್ಲಿ ಜಾರ್ಜ್ ಮುಂಚೂಣಿಯಲ್ಲಿದ್ದರು.
ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಾರ್ಜ್ ಅವರ ಸೇವೆಯನ್ನು ಸ್ಮರಿಸಿ ಮೋದಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ನ್ಯಾಯದ ಪರ ಹೋರಾಟಗಾರನಾಗಿ, ತುರ್ತು ಪರಿಸ್ಥಿತಿಗೆ ಬೆದರದೆ ಎದೆಗೊಟ್ಟ ಧೈರ್ಯಶಾಲಿಯಾಗಿ ಅವರನ್ನು ಮೋದಿ ಸ್ಮರಿಸಿದ್ದಾರೆ.
|
ಪರಿಣಾಮಕಾರಿ ಧ್ವನಿಯಾಗಿದ್ದರು
ಭಾರತದ ರಾಜಕೀಯ ನಾಯಕತ್ವದ ಅತ್ಯುತ್ತಮ ಜವಾಬ್ದಾರಿಯನ್ನು ಜಾರ್ಜ್ ಸಾಹೇಬರು ಪ್ರತಿನಿಧಿಸಿದ್ದರು. ಪ್ರಾಮಾಣಿಕ ಹಾಗೂ ಭಯರಹಿತ, ನೇರ ಮತ್ತು ದೂರದೃಷ್ಟಿಯ ಅವರು ನಮ್ಮ ದೇಶಕ್ಕೆ ಮೌಲ್ಯಯುತ ಕಾಣಿಕೆಗಳನ್ನು ನೀಡಿದ್ದಾರೆ. ಬಡವರ ಪರಿಣಾಮಕಾರಿ ಧ್ವನಿಯಾಗಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
|
ಬೆಂಕಿಯ ಉಂಡೆಯಂತಹ ನಾಯಕ
ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಬಂದೊಡನೆ ನಮಗೆ ನೆನಪಾಗುವುದು ನ್ಯಾಯಕ್ಕಾಗಿ ಹೋರಾಡಿದ ಬೆಂಕಿಯ ಉಂಡೆಯಂತಹ ಕಾರ್ಮಿಕ ನಾಯಕ. ದೃಷ್ಟಿಕೋನವುಳ್ಳ ರೈಲ್ವೆ ಸಚಿವ ಮತ್ತು ಭಾರತವನ್ನು ಸುರಕ್ಷಿತ ಮತ್ತು ಪ್ರಬಲಗೊಳಿಸಿದ ಮಹಾನ್ ರಕ್ಷಣಾ ಸಚಿವ ಎಂದು ಮತ್ತೊಂದು ಟ್ವೀಟ್‌ನಲ್ಲಿ ಶ್ಲಾಘಿಸಿದ್ದಾರೆ.
|
ಸಿದ್ಧಾಂತಗಳನ್ನು ಬದಲಿಸಲಿಲ್ಲ
ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಜಾರ್ಜ್ ಸಾಹೇಬರು ಎಂದಿಗೂ ತಮ್ಮ ರಾಜಕೀಯ ಸಿದ್ಧಾಂತಗಳನ್ನು ಬದಲಿಸಿದವರಲ್ಲ. ಅವರು ತುರ್ತು ಪರಿಸ್ಥಿತಿಗೆ ತೀಕ್ಷ್ಣವಾಗಿ ಪ್ರತಿರೋಧ ನೀಡಿದವರು. ಅವರ ಸರಳತೆ ಮತ್ತು ಮಾನವೀಯ ಗುಣ ಎಂದಿಗೂ ಅನುಕರಣೀಯ ಎಂದು ಮೋದಿ ಕೊಂಡಾಡಿದ್ದಾರೆ.
|
ಸಮಾಜವಾದಿ ಚಳವಳಿಯ ನಾಯಕ
ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತದ ಸಮಾಜವಾದಿ ಚಳವಳಿಯ ಅಗ್ರಮಾನ್ಯ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಬಡವರು ಮತ್ತು ಕೆಳವರ್ಗದ ಜನರ ಏಳಿಗೆ ಹಾಗೂ ಕಲ್ಯಾಣಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಸಚಿವ ರಾಜನಾಥ್ ಸಿಂಗ್ ಸ್ಮರಿಸಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ











Click it and Unblock the Notifications