• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

|

ನವ ದೆಹಲಿ, ಏಪ್ರಿಲ್‌ 29: ಭಾರತ ಚಿತ್ರರಂಗದ ಪ್ರತಿಭಾವಂತ ನಟ ಇರ್ಫಾನ್ ಖಾನ್ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ''ಇರ್ಫಾನ್ ಖಾನ್ ಅವರ ನಿಧನದಿಂದ ಸಿನಿಮಾ ಮತ್ತು ರಂಗಭೂಮಿಯ ಜಗತ್ತಿಗೆ ನಷ್ಟವಾಗಿದೆ. ವಿವಿಧ ಮಾಧ್ಯಮಗಳಲ್ಲಿ ಅವರ ಬಹುಮುಖ ಪ್ರತಿಭೆಯಿಂದ ಅವರನ್ನು ಎಂದಿಗೂ ಸ್ಮರಿಸಲಾಗುವುದು. ಅವರ ಆತ್ಮಕೆ ಶಾಂತಿ ಸಿಗಲಿ'' ಎಂದು ಮೋದಿ ಬರೆದುಕೊಂಡಿದ್ದಾರೆ.

ನಟ ಇರ್ಫಾನ್ ಖಾನ್ ವಿಧಿವಶ: ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆ

ಅದ್ಭುತ ನಟ ಇರ್ಫಾನ್ ಖಾನ್‌ ಅವರಿಗೆ ನಮನ ಸಲ್ಲಿಸಿರುವ ಮೋದಿ, ಅವರ ಕುಟುಂಬ, ಸ್ನೇಹಿತರಿಗೆ ಧೈರ್ಯ ತುಂಬಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ನಟ ಇರ್ಫಾನ್ ಖಾನ್ 54 ವರ್ಷಕ್ಕೆ ಬದುಕು ಮುಗಿಸಿ ಹೋಗಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆ ಇರ್ಫಾನ್ ತಮಗೆ ಅಪರೂಪದ ಕಾಯಿಲೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಅದರ ಚಿಕಿತ್ಸೆಗಾಗಿ ಸುಮಾರು ಒಂದು ವರ್ಷ ಚಿತ್ರರಂಗದಿಂದ ದೂರವಿದ್ದರು.

ಇರ್ಫಾನ್ ಅವರ ಆರೋಗ್ಯದಲ್ಲಿ ತೀವ್ರ ಏರಿಳಿತ ಉಂಟಾಗಿದ್ದು, ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಅವರ ತಾಯಿ ನಿಧನರಾಗಿದ್ದು, ಅದರ ಹಿಂದೆ ತಾವು ಪ್ರಯಾಣ ಮಾಡಿದ್ದಾರೆ.

English summary
PM Narendra Modi condolences for actor Irrfan Khan death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X