ದೆಹಲಿಯಲ್ಲಿ ಇಂದು ಪ್ರತಿಪಕ್ಷ ನಾಯಕರ ಜೊತೆ ಚಂದ್ರಬಾಬು ನಾಯ್ಡು ಸಭೆ

ನವದೆಹಲಿ, ಮೇ 21: ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂ ಚಂದ್ರಬಾಬು ನಾಯ್ಡು ಅವರು ಇಂದು ದೆಹಲಿಯಲ್ಲಿ ಪ್ರತಿಪಕ್ಷ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಪ್ರತಿಪಕ್ಷ ಮುಖಂಡರಾದ ಮಾಯಾವತಿ, ಅಖಿಲೇಶ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್, ಶರದ್ ಯಾದವ್ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ನಾಯ್ಡು ಚರ್ಚಿಸಿದ್ದರು.

ಆದರೆ ಇಂದು ಎಲ್ಲಾ ಪ್ರತಿಪಕ್ಷಗಳು ಪ್ರತಿಪಕ್ಷ ನಾಯಕರ ಜಂಟಿ ಸಭೆಯನ್ನು ನಡೆಸಲು ನಾಯ್ಡು ಮುಂದಾಗಿದ್ದಾರೆ. ಆದರೆ ಮತದಾನೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಎಷ್ಟು ಪ್ರತಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.

Naidu hold meeting with opposition party leaders Today in Delhi

ಮೂಲಗಳ ಪ್ರಕಾರ ಈಗಾಗಲೇ ಪ್ರತಪಕ್ಷಗಳ ಸಭೆ ನಡೆಸುವ ಜವಾಬ್ದಾರಿಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿಪಕ್ಷ ನಾಯಕರಿಗೆ ಸೋನಿಯಾ ಗಾಂಧಿ ಬರೆದ ಪತ್ರದಂತೆ ಮೇ 23ರಂದು ಸಭೆ ನಡೆಯಬೇಕಿತ್ತು. ಆದರೆ ಆ ಸಭೆ ರದ್ದಾಗಿದೆ ಎಂದು ತಿಳಿದುಬಂದಿದೆ.

ಮೇ 23ರಂದು ನೈಜ ಫಲಿತಾಶದ ಬಳಿಕ ಪ್ರತಿಪಕ್ಷಗಳು ಏನು ಮಾಡಬೇಕು, ಚುನಾವಣಾ ಆಯೋಗದ ಎದುರು ಪ್ರತಿಭಟನೆ, ರಾಷ್ಟ್ರಪತಿಗೆ ವಿಶೇಷ ಮನವಿ, ಈ ವಿಚಾರಗಳು ಇಂದಿನ ಸಭೆಯ ಪ್ರಮುಖ ಅಜೆಂಡಾವಾಗಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+