ಐತಿಹಾಸಿಕ ನಾಗಾ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ
ನವದೆಹಲಿ, ಆಗಸ್ಟ್, 04 : ಭಾರತ ಸರ್ಕಾರ ನಾಗಾಲ್ಯಾಂಡ್‌ನಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಅಲ್ಲಿನ ಉಗ್ರ ಸಂಘಟನೆ ಎನ್‌ಎಸ್‌ಸಿಎನ್,ಐಎಂ (ರಾಷ್ಟ್ರೀಯ ಸಮಾಜವಾದಿ ನಾಗಾ ಮಂಡಳಿ, ಐಸಾಕ್ ಮುಮಾಯ್)ಜೊತೆ ಸೋಮವಾರ ಸಂಜೆ ಐತಿಹಾಸಿಕ ಶಾಂತಿ ಒಪ್ಪಂದ ಏರ್ಪಟ್ಟಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 7, ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಹಲವಾರು ಬಿಜೆಪಿ ಗಣ್ಯರ ನೇತೃತ್ವದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಉಪಸ್ಥಿತರಿದ್ದರು.[981 ಕೋಟಿ ನೇರ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರ ]

16 ವರ್ಷಗಳ ಅವಧಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಸಮಾಲೋಚನೆಯ ಬಳಿಕ ಈ ಐತಿಹಾಸಿಕ ಒಪ್ಪಂದಕ್ಕೆ ಮುಹೂರ್ತ ಕೂಡಿಬಂದಿತು. ಐಎಂ ಪರವಾಗಿ ಥುಯಿಂಗಾಲೆಂಗ್ ಮುಯಿವಾಹ್ ಅವರು ಸಹಿ ಹಾಕಿದರು. ಎನ್‌ಎಸ್‌ಸಿಎನ್ (ಐಎಂ) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ನಾಗಾಲ್ಯಾಂಡ್‌ನಲ್ಲಿ ಬಂಡುಕೋರ ಆಂದೋಲನದ ಪ್ರಮುಖ ನೇತಾರರಲ್ಲಿ ಒಬ್ಬರು. ಈ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮುಯಿವಾಹ್ ಅವರು "ಇಂತಹ ಒಂದು ಅದ್ಭುತ ಘಳಿಗೆಗಾಗಿ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಪರಸ್ಪರ ಒಂದು ತಿಳಿವಳಿಕೆಗೆ ಬಂದಿದ್ದೇವೆ ಮತ್ತು ಉಭಯ ಪಕ್ಷಗಳೊಳಗೆ ಹೊಸ ಬಾಂಧವ್ಯವನ್ನು ಆರಂಭಿಸಿದ್ದೇವೆ. ನಾಗಾಗಳ ವಿಶ್ವಾರ್ಸಾಹತೆಯ ಬಗ್ಗೆ ನಾನು ಭರವಸೆ ಕೊಡುತ್ತೇನೆ' ಎಂದು ಮುಯಿವಾಹ್ ಹೇಳಿದರು.
ಈ ನಾಗಾಲ್ಯಾಂಡಿನ ಸಮಸ್ಯೆ 6 ದಶಕದಿಂದಲೂ ಇತ್ಯರ್ಥವಾಗದೇ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಎಲ್ಲಾ ಸಮಸ್ಯೆಗಳು ಸದ್ಯದಲ್ಲೇ ನಿವಾರಣೆಯಾಗುವ ಸಂಭವವಿದೆ. ಈ ಶಾಂತಿ ಒಪ್ಪಂದದ ಮೂಲಕ ನಾವು ಸಮಸ್ಯೆಗೆ ಪರಿಹಾರ ಮಾತ್ರ ಹುಡುಕಿಲ್ಲ, ಹೊಸ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದೇವೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಒಂದೆಡೆ ಎನ್‌ಎಸ್‌ಸಿಎನ್ ಐಎಮ್ ಕದನ ವಿರಾಮ ಒಪ್ಪಂದವನ್ನು ಪಾಲಿಸಿಕೊಂಡು ಬರುತ್ತಿದೆ. ಇನ್ನೊಂದೆಡೆ ಎನ್ಎಸ್ ಸಿಎನ್ ನೇತೃತ್ವದ ಕಪ್ಲಾಂಗ್ ಬಣ ಹಿಂಸೆ ನಡೆಸಿ ಅಶಾಂತಿ ನೆಲೆಸುವತ್ತ ತನ್ನ ಕಾರ್ಯಚಟುವಟಿಕೆಯನ್ನು ಮುಂದುವರೆಸುತ್ತಿದೆ. ಜೂನ್ ತಿಂಗಳಿನಲ್ಲಿ ಮಣಿಪುರ ಸೇನೆ ಮೇಲೆ ನಡೆದ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದು, ಈ ಸೇನೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ.












Click it and Unblock the Notifications