ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ಮಗಳು ರಾಜಕೀಯ ರಂಗ ಪ್ರವೇಶಿಸಲ್ಲ'

By Mahesh
|
Google Oneindia Kannada News

ನವದೆಹಲಿ, ಸೆ.30: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಕೇಜ್ರಿವಾಲ್ ಅವರ ಪುತ್ರಿ ರಾಜಕೀಯ ರಂಗ ಪ್ರವೇಶಿಸುತ್ತಾರೆ ಎಂಬ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕುಟುಂಬದಿಂದ ಯಾರೊಬ್ಬರೂ ರಾಜಕೀಯ ಪ್ರವೇಶ ಮಾಡುತ್ತಿಲ್ಲ ಎಂದಿದ್ದಾರೆ. ನನ್ನ ಮಗಳು ರಾಜಕೀಯ ಪ್ರವೇಶ ಬಯಸಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳೆಲ್ಲವೂ ಸುಳ್ಳು. ಆಕೆಗೆ ತನ್ನ ವೃತ್ತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಎಂದಿದ್ದಾರೆ.

My daughter has no intentions of joining politics: AAP chief Arvind Kejriwa

ನನ್ನ ಮಗಳು ಇತ್ತೀಚೆಗೆ ದೆಹಲಿ ಐಐಟಿ ಸೇರಿದ್ದಾಳೆ. ಅಕೆ ಸ್ಟೂಡೆಂಟ್ ಪೋಗ್ರಾಂನಲ್ಲಿ ಭಾಗವಹಿಸುತ್ತಿದ್ದಾಳೆ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ರಾಜಕೀಯದ ಬಗ್ಗೆ ಆಕೆ ಮುಂದೆ ಪ್ರಸ್ತಾಪಿಸಬೇಡಿ. ಇಷ್ಟಕ್ಕೂ ಎಎಪಿ ಎಂದಿಗೂ ಕುಟುಂಬ ರಾಜಕೀಯವನ್ನು ಬೆಂಬಲಿಸುವುದಿಲ್ಲ. ಅರ್ಹತೆ ಇದ್ದವರು ಮಾತ್ರ ರಾಜಕೀಯ ರಂಗ ಪ್ರವೇಶಿಸಿ ಉಳಿಯಲು ಸಾಧ್ಯ ಎಂದಿದ್ದಾರೆ.


ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಸಂಘಟನೆ 'ಛಾತ್ರ ಯುವ ಸಂಘರ್ಷ ಸಮಿತಿ(ಸಿವೈಎಸ್ಎಸ್) ಸೇರಲಿರುವ ಹರ್ಷಿತಾ ಅವರು ರಾಜಕೀಯ ಸೇರಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮ ದಿನೋತ್ಸವದ ಅಂಗವಾಗಿ ವಿದ್ಯಾರ್ಥಿ ಸಂಘಟನೆಯನ್ನು ಎಎಪಿ ಆರಂಭಿಸಿದೆ.

ಗಾಲಿಬ್ ಆಡಿಟೋರಿಯಂನಲ್ಲಿ ನಡೆದ ಸಿವೈಎಸ್ಎಸ್ ನ ಸಮಾರಂಭದಲ್ಲಿ ಹರ್ಷಿಯಾ ಪಾಲ್ಗೊಂಡಿದ್ದರು. ಅದರೆ, ಇದು ರಾಜಕೀಯ ಪ್ರವೇಶಕ್ಕೆ ಮೆಟ್ಟಿಲಲ್ಲ. ಐಐಟಿ ದೆಹಲಿಯ ವಿದ್ಯಾರ್ಥಿ ಸಮೂಹದ ಸಂಘಟನೆಗಾಗಿ ಹರ್ಷಿತಾ ಶ್ರಮಿಸಲಿದ್ದಾರೆ ಎಂದು ಅರವಿಂದ್ ಸ್ಪಷ್ಟನೆ ನೀಡಿದ್ದಾರೆ.

ಜೆಇಇ ಪರೀಕ್ಷೆಯಲ್ಲಿ ಶೇ 96ರಷ್ಟು ಅಂಕಗಳಿಸಿರುವ ಹರ್ಷಿತಾ ಅವರು ದೆಹಲಿ ಐಐಟಿಯ ವಿದ್ಯಾರ್ಥಿನಿಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕೂಡಾ ಐಐಟಿಯಯೊಂದರ ಹಳೆ ವಿದ್ಯಾರ್ಥಿಯಾಗಿದ್ದು, ಖರಗ್ ಪುರದ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
Aam Aadmi Party (AAP) chief Arvind Kejriwal on Saturday put all the rumours to the rest, regarding her daughter making foray into politics. Kejriwal took to the micro-blogging site Twitter to clarify the speculations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X