'ಓಂ' ಬದಲು 'ಅಲ್ಲಾಹ್' ಎಂದು ಯೋಗಭ್ಯಾಸ ಮಾಡಿ

ನವದೆಹಲಿ, ಜೂ.12: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ದಿನಕ್ಕೊಂದು ಹೊಸ ವಿವಾದಗಳು ಹುಟ್ಟಿಕೊಂಡು ಸಾಯುತ್ತಿವೆ. ಯೋಗಭ್ಯಾಸ ಮಾಡಲು ಹಿಂದೇಟುಯ ಹಾಕುತ್ತಿರುವ ಮುಸ್ಲಿಮರಿಗೆ ಸಚಿವರೊಬ್ಬ ಸಲಹೆಯೊಂದನ್ನು ನೀಡಿದ್ದಾರೆ.

ಯೋಗ ದಿನಾಚರಣೆ(ಜೂ.21) ಕಾರ್ಯಕ್ರಮ ಪಟ್ಟಿಯಲ್ಲಿ ಸೂರ್ಯ ನಮಸ್ಕಾರವನ್ನು ತೆಗೆಯಲಾಗಿದೆ. ಹೀಗಾಗಿ ಯೋಗಾಭ್ಯಾಸ ಮಾಡುವಾಗ ಶ್ಲೋಕ ಪಠಣ ಮಾಡುವುದು ಕಡ್ಡಾಯವಲ್ಲ, ಮುಸ್ಲಿಂ ಬಾಂಧವರು 'ಓಂ' ಎಂದು ಪಠಣ ಮಾಡುವ ಬದಲು 'ಅಲ್ಲಾಹ್'ನ ಹೆಸರನ್ನೇ ಪಠಣ ಮಾಡಬಹುದು. ಮಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಆಯುಷ್ ಸಚಿವ ಶ್ರೀಪಾದ ನಾಯಕ್ ತಿಳಿಸಿದ್ದಾರೆ.

Muslims Can Chant 'Allah' Instead Of 'Om' On Yoga Day: Government

ರಾಜಪಥ್ ನಲ್ಲಿ ಬೃಹತ್ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ಲೋಕಗಳು ಯೋಗಭ್ಯಾಸ ಒಂದು ಭಾಗವಾಗಿದೆ. ಯೋಗ ಎಂದರೆ 'ಚಿತ್ತ ವೃತ್ತಿ ನಿರೋಧ', ನಿಮ್ಮ ಧರ್ಮ ಆಚರಣೆಯನ್ನು ಪಾಲಿಸಿಕೊಂಡೇ ಯೋಗವನ್ನು ದಿನನಿತ್ಯದ ಅಭ್ಯಾಸಿಸಬಹುದು ಎಂದು ಸಚಿವ ನಾಯಕ್ ಹೇಳಿದ್ದಾರೆ.

ಯೋಗ ದಿನಾಚರಣೆಯಲ್ಲಿ ಸೂರ್ಯ ನಮಸ್ಕಾರ, ಶ್ಲೋಕ ಪಠಣ ಸೇರ್ಪಡೆ ಮಾಡುವವ ಅಲ್ಪಸಂಖ್ಯಾತ ಸಂಘಟನೆಗಳು ಆಕ್ಷೇಪಣೆ ಗುರುವಾರ ಕೆಲವು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಶ್ರೀಪಾದ್ ನಾಯಕ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಮತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+