ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಪಾರ್ಟಿ ಹೇಳಿಕೆ: ಮೌನ ಮುರಿದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜುಲೈ 17: ತಮ್ಮ ಮುಸ್ಲಿಂ ಪಾರ್ಟಿ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಮೌನ ಮುರಿದಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.

ಈ ಕುರಿತು ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, "ಸಾಲಿನಲ್ಲಿ ಕೊನೆಯಲ್ಲಿ ನಿಂತಿರುವ ವ್ಯಕ್ತಿಯೊಂದಿಗೆ ನಿಲ್ಲುತ್ತೇನೆ. ದೌರ್ಜನ್ಯಕ್ಕೊಳಗಾದವರು, ಮೂಲೆಗುಂಪಾದವರು ಮತ್ತು ಹಲ್ಲೆಗೊಳಗಾದವರ ಪರ ನಾನು ನಿಲ್ಲುತ್ತೇನೆ. ನನಗೆ ಮತ, ಜಾತಿ ಮತ್ತು ನಂಬಿಕೆಗಳು ಮುಖ್ಯವಲ್ಲ. ಯಾರು ನೋವಿನಲ್ಲಿದ್ದಾರೋ ಅವರಿಗೆ ನಾನು ಸಾಂತ್ವನ ನೀಡುತ್ತೇನೆ. ದ್ವೇಷ ಮತ್ತು ಭಯವನ್ನು ನಾನು ಹೋಗಲಾಡಿಸುತ್ತೇನೆ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಕಾಂಗ್ರೆಸ್" ಎಂದಿದ್ದಾರೆ.

ಜು.11 ರಂದು ಮುಸ್ಲಿಂ ಪಂಡಿತರೊಂದಿಗೆ ಸಭೆ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಭೆಯಲ್ಲಿ 'ಕಾಂಗ್ರೆಸ್ ಮುಸ್ಲಿಂ ಪಕ್ಷ' ಎಂದಿದ್ದರು. ಇದನ್ನು ಆ ಸಭೆಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿಯೇ ತಿಳಿಸಿದ್ದಾಗಿ ಇನ್ ಕ್ವಿಲಾಬ್ ಎಂಬ ಉರ್ದು ಪತ್ರಿಕೆ ವರದಿ ಮಾಡಿತ್ತು.

ಮುಸ್ಲಿಂ ಪಾರ್ಟಿ: ರಾಹುಲ್ ಹೇಳಿಕೆಗೆ ಉರ್ದು ಪತ್ರಿಕೆ ಸಮಜಾಯಿಷಿಮುಸ್ಲಿಂ ಪಾರ್ಟಿ: ರಾಹುಲ್ ಹೇಳಿಕೆಗೆ ಉರ್ದು ಪತ್ರಿಕೆ ಸಮಜಾಯಿಷಿ

ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ಮುಖಂಡರು ಸೇರಿದಂತೆ ಹಲವರು ವಿರೋಧಿಸಿದ್ದರು. ಆದರೆ ಇದ್ಯಾವುದಕ್ಕೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿಯೇ ಇದ್ದ ರಾಹುಲ್ ಗಾಂಧಿ ಇದೀಗ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Muslim Party remark: Rahul Gandhi breaks silence

ಬಿಜೆಪಿ ಪ್ರತಿಕ್ರಿಯೆ:

ರಾಹುಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಅಮಿತ್ ಮಾಳವೀಯ, "ರಾಹುಲ್ ಗಾಂಧಿ ಅವರ ಟ್ವೀಟ್ ಅನ್ನು ಒಂದೇ ಪದದಲ್ಲಿ ಹೇಳುವುದಾದರೆ, ಅದು ಬಿಜೆಪಿಯ ಮೂಲ ಸಿದ್ಧಾಂತವಾದ 'ಅಂತ್ಯೋದಯ'ದ ವಿವರವಷ್ಟೆ! ಕೊನೆಗೂ ಕಾಂಗ್ರೆಸ್ ಅಧ್ಯಕ್ಷರಿಗೆ ಭಾರತೀಯತೆಯ ಮೌಲ್ಯವೇನೆಂಬುದು ತಿಳಿಯಿತಲ್ಲ ಎಂಬುದನ್ನು ತಿಳಿದು ನನಗೆ ಸಂತಸವಾಯಿತು" ಎಂದು ಟ್ವೀಟ್ ಮಾಡಿದ್ದಾರೆ.

ಮುಸ್ಲಿಂ ಪಾರ್ಟಿ ಹೇಳಿಕೆಗೆ ರಾಹುಲ್ ಮೌನವೇಕೆ? ಬಿಜೆಪಿ ಟೀಕೆ!ಮುಸ್ಲಿಂ ಪಾರ್ಟಿ ಹೇಳಿಕೆಗೆ ರಾಹುಲ್ ಮೌನವೇಕೆ? ಬಿಜೆಪಿ ಟೀಕೆ!

ಬೇಸರ ವ್ಯಕ್ತಪಡಿಸಿದ ಓವೈಸಿ

''ಮುಸ್ಲಿಮರು ಈ ಪಕ್ಷದ ಭಾಗವಲ್ಲ, ಆ ಪಕ್ಷದ ಭಾಗವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರಾಗಲೀ, ಪ್ರಧಾನಿಯಾಗಲೀ ಹೇಳುವುದು ನಿಜಕ್ಕೂ ದುರದೃಷ್ಟ. ನೀವು ಮುಸ್ಲಿಮರಿಗೆ ಎಂಥ ಸಂದೇಶ ನೀಡುತ್ತಿದ್ದೀರಿ? ನಿಮ್ಮ ಪ್ರಕಾರ ಮುಸ್ಲಿಂ ಎಂಬ ಪದ ಅಷ್ಟು ಸದರವೇ? ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ.

English summary
After his 'Congress is Muslim Party'' remark Congress president Rahul Gandhi finally breaks his silence. And tweeted, "I stand with the last person in the line. The exploited, marginalised and the persecuted. Their religion, caste or beliefs matter little to me".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X