ಹಿಂದೂ ಯುವತಿ ಪ್ರೀತಿಸಿದ ಮುಸ್ಲಿಂ ಯುವಕನ ಮೇಲೆ ಕೋರ್ಟ್ ನಲ್ಲೇ ಹಲ್ಲೆ

ಗಾಜಿಯಾಬಾದ್, ಜುಲೈ 24 : ಹಿಂದೂ ಯುವತಿಯನ್ನು ಮದುವೆಯಾಗಲು ಹೋಗಿದ್ದ ಇಪ್ಪತ್ತೈದು ವರ್ಷದ ಮುಸ್ಲಿಂ ಯುವಕನನ್ನು ಬಲಪಂಥೀಯ ಗುಂಪಿನ ಕಾರ್ಯಕರ್ತರು ಗಾಜಿಯಾಬಾದ್ ಕೋರ್ಟ್ ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಬಗ್ಗೆ ವರದಿಯಾಗಿದೆ.

ನೋಯ್ಡಾದ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುವ ಯುವಕ ಸೋಮವಾರದಂದು ಮದುವೆ ನೋಂದಣಿ ಮಾಡಿಸುವ ಸಲುವಾಗಿ ಕೋರ್ಟ್ ಗೆ ತೆರಳಿದಾಗ ಗುಂಪು ದಾಳಿ ನಡೆಸಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಪಾಂಡೆ ಹೇಳಿದ್ದಾರೆ.

ಹಲ್ಲೆಯ ಫೂಟೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಕಾಣುವಂತೆ, ಜನ ನಿಬಿಡ ಬಡಾವಣೆಯಲ್ಲಿ ಯುವಕನನ್ನು ಆರೇಳು ಮಂದಿ ಎಳೆದೊಯ್ದಿದ್ದಾರೆ. ಅವರನ್ನು ಗುಂಪೊಂದು ಅನುಸರಿಸಿದೆ. ಆ ನಂತರ ಯುವಕನನ್ನು ಸುತ್ತುವರಿದ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ.

Muslim man wanted to marry Hindu woman, beaten by mob at Court

ಪೊಲೀಸರು ಬಂದು ರಕ್ಷಿಸುವ ತನಕ ಗುಂಪು ಹಲ್ಲೆ ನಡೆಸಿದೆ. ಸದ್ಯಕ್ಕೆ ದೂರು ದಾಖಲಾಗಿದೆ. ಆದರೆ ಯಾರನ್ನೂ ಬಂಧಿಸಿಲ್ಲ. "ವಿನೋದ್ ಹಾಗೂ ನವೀನ್ ಮತ್ತು ಹಲವು ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ಆದರೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ" ಎಂದು ಪೊಲೀಸ್ ಅಧಿಕಾರಿ ಪಾಂಡೆ ಹೇಳಿದ್ದಾರೆ.

ದೊಂಬಿ ಮತ್ತು ಹಲ್ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆಗೊಳಗಾದ ಯುವಕ ಭೋಪಾಲ್ ನವನು ಹಾಗೂ ಯುವತಿ ಉತ್ತರ ಪ್ರದೇಶದ ಬಿಜ್ನೋರ್ ನವಳು. ನೋಯ್ಡಾದ ಕಂಪೆನಿಯಲ್ಲಿ ಕೆಲಸ ಮಾಡುವ ಇವರಿಬ್ಬರು ಪ್ರೀತಿಸುತ್ತಿದ್ದಾರೆ. ನೋಯ್ಡಾದಲ್ಲಿ ಮದುವೆ ನೋಂದಣಿ ಮಾಡುವ ಬದಲು, ಗಾಜಿಯಾಬಾದ್ ನಲ್ಲಿ ನೋಂದಾಯಿಸಿ ಎಂದು ಸುರಕ್ಷತೆ ಕಾರಣಗಳಿಗಾಗಿ ಅವರಿಗೆ ಸಲಹೆ ನೀಡಲಾಗಿತ್ತು.

ಹಲ್ಲೆ ನಡೆಸಿದವರ ಮೇಲಿನ ಭಯದಿಂದ ಯಾವುದೇ ಪ್ರಕರಣ ದಾಖಲಿಸಲು ಯುವಕ ಮತ್ತು ಯುವತಿ ಒಪ್ಪಿಕೊಂಡಿಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+