ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಯನ್ನು 'ಗಪ್ಪು' ಎಂದು ಲೇವಡಿ ಮಾಡಿದ ನಕ್ವಿ

|
Google Oneindia Kannada News

ನವದೆಹಲಿ, ಆಗಸ್ಟ್ 31: ರಫೇಲ್ ಒಪ್ಪಂದ ಮತ್ತು ಅಪನಗದೀಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕುರಿತು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ವಾಗ್ದಾಳಿ ನಡೆಸಿದ್ದಾರೆ.

ಪಪ್ಪುವಿನಿಂದ ಗಪ್ಪುವಿನೆಡೆಗೆ (ಕಟ್ಟುಕಥೆ ಹೇಳುವ ವ್ಯಕ್ತಿ) ಸಾಗಿರುವ ರಾಹುಲ್ ಗಾಂಧಿ ಅವರ ರಾಜಕೀಯ ಜೀವನವು ಸುಳ್ಳುಗಳಿಂದ ತುಂಬಿದೆ. ಸರ್ಕಾರದ ವಿರುದ್ಧ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಖ್ವಿ ಟೀಕಾಪ್ರಹಾರ ನಡೆಸಿದರು.

ನೀವು ರಾಹುಲ್ ಗಾಂಧಿ, ಚೀನೀಸ್ ಗಾಂಧಿಯಲ್ಲ: ಬಿಜೆಪಿ ವ್ಯಂಗ್ಯನೀವು ರಾಹುಲ್ ಗಾಂಧಿ, ಚೀನೀಸ್ ಗಾಂಧಿಯಲ್ಲ: ಬಿಜೆಪಿ ವ್ಯಂಗ್ಯ

ಕಾಂಗ್ರೆಸ್‌ಅನ್ನು ಮುಳುಗಿಸಲು ರಾಹುಲ್ ಗಾಂಧಿ ಒಬ್ಬರೇ ಸಾಕು ಎಂದು ನಖ್ವಿ ಈ ಹಿಂದೆ ಲೇವಡಿ ಮಾಡಿದ್ದರು.

Mukhtar Abbas Naqvi calls Rahul Gandhi gappu

ರಾಹುಲ್ ಗಾಂಧಿಗೆ ಒಳ್ಳೆಯ ರಾಜಕಾರಣಿಯಾಗಲು ಸಾಧ್ಯವಿಲ್ಲ. ಆದರೆ, ಅವರು ಉತ್ತಮ ಮಿಮಿಕ್ರಿ ಕಲಾವಿರಾಗಬಲ್ಲರು ಎಂದು ವ್ಯಂಗ್ಯವಾಡಿದ್ದರು.

ಕಾಂಗ್ರೆಸ್‌ಗೆ ಶಿಸ್ತು, ನಿಯಮ ಮತ್ತು ನೀತಿಗಳಿಲ್ಲ. ಇನ್ನೊಂದೆಡೆ ಮಿಮಿಕ್ರಿ ಕಲಾವಿದ ಜನರಿಗೆ ನಗುವಿನ ಲಾಲಿಪಾಪ್ ತೋರಿಸಿ ಮತ ಕೇಳುತ್ತಿದ್ದಾರೆ ಎಂದಿದ್ದರು.

ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ?ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ?

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, ಫ್ರಾನ್ಸ್‌ನಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ಅಂಬಾನಿಗೆ ಮೋದಿ ತಿಳಿಸಬೇಕು ಎಂಬುದಾಗಿ ಲೇವಡಿ ಮಾಡಿದ್ದರು.

'ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ!''ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ!'

ಭಾರತವು 2016ರಲ್ಲಿ ಪ್ರಾನ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಎರಡು ದಿನಗಳ ಮೊದಲಷ್ಟೇ ಅನಿಲ್ ಅಂಬಾನಿ ತಮ್ಮ ಕಂಪೆನಿಯ ಮೂಲಕ ಫ್ರಾನ್ಸ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಹಣ ಹೂಡಲು ಒಪ್ಪಂದ ಮಾಡಿಕೊಂಡಿದ್ದರು ಎಂದು ವೆಬ್‌ಸೈಟ್‌ ಒಂದು ಬಹಿರಂಗಪಡಿಸಿತ್ತು.

English summary
Union Minister Mukhtar Abbas Naqvi slammed Rahul Gandhi, his political journey from Pappu to Gappu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X