ಹುಮಾಯುನ್ ಸಮಾಧಿಗೆ ಚಿನ್ನದ ಕವಚ ಹಾಕಿದ ಮೋದಿ ಸರ್ಕಾರ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 20: ಹುಮಾಯುನ್ ಸಮಾಧಿ ಸಂರಕ್ಷಣೆ ಯತ್ನದ ಭಾಗವಾಗಿ ಹುಮಾಯನ್ ಸಮಾಧಿಯಲ್ಲಿ 18 ಅಡಿ ಎತ್ತರದ ಕವಚವನ್ನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಡಾ.ಮಹೇಶ್ ಶರ್ಮಾ ಹಾಗೂ ಟೈಟಾನ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಅವರೊಂದಿಗೆ ಲೋಕಾರ್ಪಣೆಗೊಳಿಸಿದರು.

ಹುಮಾಯುನ್ ಸಮಾಧಿ ಮೊಘಲರರಿಂದ ನಿರ್ಮಿತ ಮೊದಲ ದರ್ಗಾವಾಗಿದ್ದು, ಇದು ಮುಘಲ್ ಕುಶಲತೆಯ ಪ್ರತೀಕ ಹಾಗೂ 18 ಅಡಿ ಎತ್ತರದ ಪ್ರತಿಮೆ 2014ರಲ್ಲಿ ಹಾನಿಗೊಂಡಿತ್ತು. ಮೂಲ ಕವಚವನ್ನು ಸಣ್ಣ ಮಟ್ಟದ ದುರಸ್ಥಿಯೊಂದಿಗೆ ನಂತರ ಹುಮಾಯುನ್ ಟಾಂಬ್ ಸ್ಫೂರ್ತಿ ಕೇಂದ್ರದಲ್ಲಿ ಇಡಲಾಯಿತು. ಈಗ ಮರುಸೃಷ್ಟಿ ಮಾಡಿದ ಕವಚ 22 ಅಡಿ ಎತ್ತರದ ಮರದಿಂದ ಕೂಡಿದ್ದು 300 ಕೆಜಿ ತಾಮ್ರ, 6 ಪದರದ ಚಿನ್ನದಿಂದ ಕೂಡಿದೆ.

ದೀರ್ಘವಾದ ಅವಲೋಕನದಲ್ಲಿ ಹಾನಿಗೊಂಡ ಲೇಪವನ್ನು ಮುಘಲ್ ಕಲಾವಿದರು ತಾಮ್ರ ಮತ್ತು ಶುದ್ಧ ಚಿನ್ನದಿಂದ ತಯಾರಿಸಿದ್ದರು ಎಂದು ತಿಳಿಯಿತು. ವಿಶ್ವ ಪಾರಂಪರಿಕ ತಾಣದ ಅಧಿಕೃತತೆ ರಕ್ಷಿಸುವ ನಿಟ್ಟಿನಲ್ಲಿ ಮತ್ತು ಯುನೆಸ್ಕೊದ ಕಠಿಣವಾದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಆಗಾ ಖಾನ್ ಟ್ರಸ್ಟ್ ಫಾರ್ ಕಲ್ಚರ್, ಅಗತ್ಯವಿರುವ ಚಿನ್ನ ಮತ್ತು ಲೇಪದ ಮರು ನಿರ್ಮಾಣದಲ್ಲಿ ಟೈಟಾನ್ ಕಂಪನಿ ಲಿಮಿಟೆಡ್ ನ ಸಹಾಯ ಕೋರಿತು. ಗುಣಮಟ್ಟ ಮತ್ತು ಮರು ನಿರ್ಮಾಣದತ್ತ ದೃಷ್ಟಿ ಹಾಯಿಸಿತು.

Dr. Mahesh Sharma Unveils Gold Finial at Humayun Tomb

ತಾಮ್ರದ ಲೇಪದೊಂದಿಗೆ ಶುದ್ಧ ಚಿನ್ನದ ಪದರಗಳನ್ನು ಟೈಟಾನ್ ಕಂಪನಿ ತನ್ನ ಹೊಸೂರು ಘಟಕಕ್ಕೆ ಹೊತ್ತು ತಂದಿತು. ಇಲ್ಲಿ ಚಿನ್ನದ ಲೇಪನ, ಹೊರ ಕವಚ ಮೊದಲಾದವುಗಳನ್ನು ವಿನ್ಯಾಸಗೊಳಿಸಲಾಯಿತು. ಹಳೆಯ ಕುಶಲತೆ, ಕಲೆಯನ್ನು ಉಳಿಸುವತ್ತ ಟೈಟಾನ್ ಕಂಪನಿ ಲಿಮಿಟೆಡ್ ಶ್ರಮವಹಿಸಿತು.

ಕೇಂದ್ರ ಸಂಸ್ಕೃತಿ ಸಚಿವ ಡಾ.ಮಹೇಶ್ ಶರ್ಮಾ ಮಾತನಾಡಿ, 2 ವರ್ಷಗಳ ಕಠಿಣ ಕೆಲಸದ ನಂತರ ಹುಮಾಯುನ್ ಟಾಂಬ್‍ನ ಕಳಶ ಅಥವಾ ಶಿಖರಾಲಂಕಾರ ಪ್ರತಿಮೆಯ ಮೇಲೆ ಮರಳಿದೆ. ಈ ಪಾರಂಪರಿಕ ವಸ್ತುವನ್ನು ಶೇ.100ರಷ್ಟು ತಾಮ್ರದಿಂದ ನಿರ್ಮಿಸಿದ್ದು, ಹಿಂದು ದೇವಾಲಯದಲ್ಲಿ ಕಾಣಿಸುವ ಕಳಶದಿಂದ ಸ್ಪೂರ್ತಿಗೊಂಡಿದೆ. ಭಾರತೀಯ ಶಿಲ್ಪದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ.

2 ವರ್ಷಗಳ ಕಾಲ ಕಸೂತಿಗಾಗಿ ತಜ್ಞರು ಶ್ರಮಿಸಿದ್ದನ್ನು ನಾನು ಅರ್ಥೈಸಿಕೊಂಡಿದ್ದೇನೆ. ಶತಮಾನಗಳಷ್ಟು ಹಳೆಯದಾದ ಕಲೆಗೆ, ಅದರ ಪರಿಕರಗಳಿಗೆ ಹಾಕಿದ ಶ್ರಮ ಶ್ಲಾಘನೀಯ. ಆಧುನಿಕ ತಂತ್ರಜ್ಞಾನ ಹುಮಾಯನ್ ಟಾಂಬ್ ಕಳಸದ ಮರು ಸೃಷ್ಟಿ ಸಾಧ್ಯವಾಗಿಸಿದೆ. ಇದು ನಿಜವಾಗಿಯೂ ಮೇಡ್ ಇನ್ ಇಂಡಿಯಾ ಎಂದರು.

ಟೈಟಾನ್ ಕಂಪನಿ ಲಿಮಿಟೆಡ್ ನ ಎಂಡಿ ಭಾಸ್ಕರ್ ಭಟ್ ಮಾತನಾಡಿ, ನಮ್ಮ ಆಭರಣ ಉತ್ಪಾದಕ ತಜ್ಞರು ಮತ್ತು ಅವ ಸಾಮಥ್ರ್ಯದಿಂದಾಗಿ ಹಾಗೂ ನಮ್ಮ ದೇಶದ ಸಂಸ್ಕøತಿ ಉಳಿಸುವ ನಮ್ಮ ಮೂಲ ಧ್ಯೇಯದ ಫಲವಾಗಿ ನಾವು ಟೈಟಾನ್ ಕಂಪನಿ ಲಿಮಿಟೆಡ್‍ನಲ್ಲಿ ಈ ಯೋಜನೆಯನ್ನು ಗೌರವವೆಂದು ಸ್ವೀಕರಿಸಿದೆವು.

ಈ ಯೋಜನೆಯಲ್ಲಿ ನಾವು ಆಗ ಖಾನ್ ಟ್ರಸ್ಟ್ ಫಾರ್ ಕಲ್ಚರ್ ಮತ್ತು ಆರ್ಕಿಯೊಲಜಿಕಲ್ ಸರ್ವೆ ಆಫ್ ಇಂಡಿಯಾ ಜೊತೆ ಕೈಜೋಡಿಸಿರುವುದಕ್ಕೆ ಹೆಮ್ಮೆಯಿದೆ. ನಾವು ಈ ಯೋಜನೆಯಲ್ಲಿ ಕೇವಲ ಕವಚದ ಮೂಲ ರೂಪ ಮರುಸೃಷ್ಟಿಯನ್ನು ಮಾತ್ರ ಪರಿಗಣಿಸಿಲ್ಲ. ಜೊತೆಗೆ ಗುಣಮಟ್ಟವನ್ನು ಪರಿಗಣಿಸಿದ್ದೇವೆ ಎಂದರು.

Dr. Mahesh Sharma Unveils Gold Finial at Humayun Tomb

ಆಗ ಖಾನ್ ಟ್ರಸ್ಟ್ ಪಾರ್ ಕಲ್ಚರ್ ಸಿಇಒ ರತೀಶ್ ನಂದ ಮಾತನಾಡಿ, ಕವಚ ಹುಮಾಯುನ್ ಟಾಂಬ್‍ನ ಅತ್ಯಂತ ಕಲಾಕೃತ ಭಾಗ. ಮರು ಸೃಷ್ಟಿ ಮಾಡಿದ ಕವಚ ನಿಖರವಾಗಿ ಮೂಲದಂತೆ ಕಾಣಬೇಕಿತ್ತು. ಇದು ಟೈಟಾನ್ ಪಾಲುದಾರಿಕೆ ಜೊತೆಗಿನ ಸವಲಾಗಿತ್ತು. ಈ ಸಂರಕ್ಷಣೆ ಕೇವಲ ಮುಘಲ್ ಕಲಾಕೃತಿ ರಕ್ಷಣೆಯಲ್ಲ, ಇಡೀ ಸಂಪ್ರದಾಯದ ರಕ್ಷಣೆ. ಟೈಟಾನ್‍ನ ಪ್ರಬಲ ಸಹಾಯದಿಂದ ಇದು ಸಾಧ್ಯವಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dr. Mahesh Sharma, Minister of State for Culture and Tourism (I/C) and Civil Aviation unveiled the restored 18 feet tall Finial at Humayun’s Tomb, New Delhi today as part of the ongoing conservation effort.
Please Wait while comments are loading...