ಮ್ಯಾಗಿಗಿಂತ ಬೇರೆ ಬ್ರಾಂಡ್‌ಗಳೇ ಹೆಚ್ಚಿನ ವಿಷಕಾರಿ
ನವದೆಹಲಿ, ಜೂ, 25 : ಅದೆಕೋ ಆಹಾರದಲ್ಲಿ ವಿಷಕಾರಿ ಅಂಶಗಳಿವೆ ಎಂಬ ವಿವಾದ ಕಡಿಮೆಯಾಗುವ ಸಾಧ್ಯತೆಗಳೇ ಕಾಣುತ್ತಿಲ್ಲ. ಮ್ಯಾಗಿ ವಿವಾದ ಇನ್ನು ಹಸಿಯಾಗಿರುವಾಗಲೇ ಇನ್ನೊಂದು ಹೊಸ ಅಂಶ ಪತ್ತೆಯಾಗಿದೆ.
ವಿಷಕಾರಿ ಸೀಸದ ಅಂಶಗಳು ಅಪಾಯಕಾರಿ ಮಟ್ಟದಲ್ಲಿದೆ ಎಂದು ನೆಸ್ಲೆ ಕಂಪನಿಯ ಮ್ಯಾಗಿ ದೇಶದಾದ್ಯಂತ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಮ್ಯಾಗಿ ಸೇವಿಸುವುದು ಬೇಡವೆಂದು ಕೆಲವರು ನಿರ್ಧಾರ ತೆಗೆದುಕೊಂಡಾಗಿತ್ತು. ಆದರೆ ಮ್ಯಾಗಿಗಿಂತ ಇದರ ಬೇರೆ ಬೇರೆ ಬ್ರ್ಯಾಂಡ್ ಗಳಾದ ಐಟಿಸಿ ಸನ್ ಫೀಸ್ಟ್ , ಇಂಡೋ ನಿಸ್ಸಿನ್ಸ್ ಟಾಪ್ ರೇಮನ್ ಮತ್ತು ಭಾರತದ ಸಿಜಿ ಆಹಾರ ಕಂಪನಿಯ ವಯ್ ವಯ್ ಗಳಲ್ಲಿ ಹೆಚ್ಚು ವಿಷಕಾರಿ ಅಂಶ ಇದೆ ಎಂದು ವರದಿಯಾಗಿದೆ.[ಇಷ್ಟಕ್ಕೂ ಮ್ಯಾಗಿ ನಿಜಕ್ಕೂ ಅಷ್ಟೊಂದು ಭಯಂಕರವೇ?]

ಇದನ್ನು ಪರಿಶೀಲಿಸುವ ಸಲುವಾಗಿ ಕೆಲವು ನೂಡಲ್ಸ್ ಬ್ರಾಂಡ್ ಗಳನ್ನು ತಮಿಳುನಾಡಿನ ಹಲವು ಪ್ರದೇಶಗಳಿಂದ ಕೆಲವು ಸ್ಯಾಂಪಲ್ ಗಳನ್ನು ರುಚಿ ಇಂಟರ್ ನ್ಯಾಷನಲ್ , ಎ ಎ ನ್ಯೂಟ್ರಿಷಿನ್, ಐ ಟಿ ಸಿ ಗಳಲ್ಲಿನ ಬ್ರಾಂಡ್ ತೆಗೆದುಕೊಂಡು ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. [ಕರ್ನಾಟಕದಲ್ಲಿ ಮ್ಯಾಗಿ ಮಾರಾಟವಿಲ್ಲ]
ಪರೀಕ್ಷೆಯ ನಂತರ ಎಫ್ಎಸ್ಎಸ್ಎಐ ನ ಮಿತಿ 2,5 ಪಿಪಿಎಮ್( parts per million) ಮೀರಬಾರದು. ಆದರೆ ಬೇರೆಲ್ಲಾ ಬ್ರಾಂಡ್‌ಗಳಲ್ಲಿ 3,4 ಪಿಪಿಎಮ್ ಇದೆ. ಬೇರೆ ಬ್ರಾಂಡ್‌ಗೆ ಹೋಲಿಸಿದರೆ ಮ್ಯಾಗಿಯಲ್ಲಿ ಕೇವಲ 3,2 ಪಿಪಿಮ್ ಇದೆ. ಒಟ್ಟಿನಲ್ಲಿ ನೂಡಲ್ಸ್ ನ ಬೇರೆ ಬ್ರಾಂಡ್‌ಗಳಿಗೆ ಹೋಲಿಸಿದರೆ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಕಡಿಮೆ ಇದೆ ಎಂದು ಮಾಹಿತಿ ಮೂಲಗಳು ತಿಳಿಸಿದೆ.












Click it and Unblock the Notifications