ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ, ಮೋದಿ, ಆರ್ ಎಸ್ ಎಸ್ ಮೇಲೆ ರಾಹುಲ್ ಗಾಂಧಿ ಟೀಕಾಸ್ತ್ರ

|
Google Oneindia Kannada News

Recommended Video

ಬಿಜೆಪಿ, ಆರ್ ಎಸ್ ಎಸ್, ಮೋದಿಯನ್ನ ಟಾರ್ಗೆಟ್ ಮಾಡಿದ ರಾಹುಲ್ ಗಾಂಧಿ | Oneindia Kannada

ನವದೆಹಲಿ, ಮಾರ್ಚ್ 19: ಭಾರತದ ಮುಂದಿನ ಪ್ರಧಾನಿ ಎಂದು ಹಲವರ ಬಳಿ ಬಣ್ಣಿಸಿಕೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಟೀಕೆ ಮಾಡುವುದೂ ಇತ್ತೀಚೆಗೆ ಹೆಚ್ಚಾಗಿದೆ.

ಕರ್ನಾಟಕದ ಚುನಾವಣೆ ಗೆಲ್ಲಲು ಕಾಂಗ್ರೆಸ್ 7 ಸೂತ್ರಗಳು!ಕರ್ನಾಟಕದ ಚುನಾವಣೆ ಗೆಲ್ಲಲು ಕಾಂಗ್ರೆಸ್ 7 ಸೂತ್ರಗಳು!

ಅದರ ಭಾಗ ಎಂಬಂತೆ ನವದೆಹಲಿಯಲ್ಲಿ ನಡೆದ ಮೂರು ದಿನಗಳ ಕಾಂಗ್ರೆಸ್ ಮಹಾಧಿವೇಶನದಲ್ಲಿ ಮಾತನಾಡಿದ ಅವರು 'ಮೋದಿ ಎಂದರೆ ಭ್ರಷ್ಟಾಚಾರವನ್ನು ಪ್ರತಿನಿಧಿಸುವವರು' ಎಂದು ಟೀಕಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

"ಮೋದಿ ಎಂಬ ಪದ ಭ್ರಷ್ಟಾಚಾರಕ್ಕೆ ಅನ್ವರ್ಥವಾಗಿದೆ" ಎಂದ ಅವರು ನೀರವ್ ಮೋದಿ ಮತ್ತು ಲಲಿತ್ ಮೋದಿ ಭಾರತವನ್ನು ಕೊಳ್ಳೆಹೊಡೆದಿದ್ದಾರೆ ಎಂದರು. "ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿ, ಕ್ರಿಕೆಟ್ ನಲ್ಲಿ ಅತ್ಯಂತ ಭ್ರಷ್ಟ ಎನ್ನಿಸಿದ ಲಲಿತ್ ಮೋದಿಯವರೊಂದಿಗೆ ಅವರದೇ ಸರ್ನೇಮ್ ಇಟ್ಟುಕೊಂಡಿರುವ ನರೇಂದ್ರ ಮೋದಿ ಎಂಥವರು ಎಂಬುದನ್ನು ನೀವೇ ಊಹಿಸಿ" ಎಂದು ಟೀಕಾಸ್ತ್ರ ಪ್ರಯೋಗಿಸಿದರು.

ನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿ

ಮೋದಿ ಅಂದ್ರೆ ಭ್ರಷ್ಟಾಚಾರ

ಮೋದಿ ಅಂದ್ರೆ ಭ್ರಷ್ಟಾಚಾರ

"ಮೋದಿ ಎಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವವರು ಎಂಬ ನಂಬಿಕೆ ಜನರಲ್ಲಿತ್ತು. ಆದರೆ ಇಂದು ಮೋದಿ ಎಂದರೆ ಭ್ರಷ್ಟಾಚಾರ ಎಂಬಂತಾಗಿದೆ" ಎಂದೂ ಅವರು ವ್ಯಂಗ್ಯವಾಗಿ ಹೇಳಿದರು. ನರೇಂದ್ರ ಮೋದಿ ನೀರವ್ ಮೋದಿಯವರಿಗೆ ನಿಮ್ಮ 30,000 ಕೋಟಿ ರೂ.ಗಳನ್ನು ಕೊಟ್ಟರು. ಅದಕ್ಕೆ ಪ್ರತಿಯಾಗಿ ನೀರವ್ ಮೋದಿ ನರೇಂದ್ರ ಮೋದಿಯವರಿಗೆ ಒಂದಷ್ಟು ಪ್ರಚಾರ, ಚುನಾವಣೆ ಸ್ಪರ್ಧಿಸಲು ಹಣ ನೀಡಿದರು ಅಷ್ಟೇ ಎಂದು ಅವರು ಕುಟುಕಿದರು. ಫೈಟರ್ ಪ್ಲೇನ್ ಖರೀದಿ ಹಾಗಿರಲಿ, ತರಕಾರಿ ಕೊಳ್ಳುವ ಸಮಯದಲ್ಲೂ ನೀವು ಅವರನ್ನು ನಂಬುವುದಕ್ಕೆ ಸಾಧ್ಯವಿಲ್ಲ.

ಇದು ಕುರುಕ್ಷೇತ್ರ ಯುದ್ಧವಿದ್ದ ಹಾಗೆ...

ಇದು ಕುರುಕ್ಷೇತ್ರ ಯುದ್ಧವಿದ್ದ ಹಾಗೆ...

ಶತಮಾನಗಳ ನಂತರ ಮತ್ತೆ ಕುರುಕ್ಷೇತ್ರ ಯುದ್ಧಕ್ಕೆ ಅಖಾಡ ಸಿದ್ಧವಾಗುತ್ತಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಕೌರವರ ಹಾಗೇ. ಅಧಿಕಾರಕ್ಕಾಗಿ ಹೋರಾಡುತ್ತಿವೆ. ತಮ್ಮ ಬಳಿ ಅಧಿಕಾರವಿದೆ ಎಂದು ದುರಹಂಕಾರದಿಂದ ವರ್ತಿಸುತ್ತಿದೆ. ಆದರೆ ನಾವು ಕಾಂಗ್ರೆಸ್ಸಿಗರು ಪಾಂಡವರ ಹಾಗೆ. ಸತ್ಯಕ್ಕಾಗಿ ಹೋರಾಡುತ್ತೇವೆ. ನಾವು ಎಂದಿಗೂ ಜನರಿಗೆ ವಿಧೇಯವಾಗಿರುತ್ತೇವೆ" ಎಂದು ರಾಹುಲ್ ಗಾಂಧಿ ಹೇಳಿದರು. ಸುಮಾರು 52 ನಿಮಿಷಗಳ ಕಾಲದ ತಮ್ಮ ಭಾಷಣದ ಬಹು ಸಮಯವನ್ನು ರಾಹುಲ್ ಗಾಂಧಿಯವರು ಎಂದಿನಂತೆ ಮೋದಿ ನಾಮಸ್ಮರಣೆಗಾಗಿ ಬಳಸಿಕೊಂಡರು!

ಮೋದಿ ತಮ್ಮನ್ನು ಮನುಷ್ಯ ಎಂದುಕೊಂಡಿಲ್ಲ!

ಮೋದಿ ತಮ್ಮನ್ನು ಮನುಷ್ಯ ಎಂದುಕೊಂಡಿಲ್ಲ!

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಮನುಷ್ಯ ಎಂದುಕೊಂಡಿಲ್ಲ. ಅವರು ತಮ್ಮನ್ನು ತಾವು ದೇವರ ಅವತಾರ ಎಂದುಕೊಂಡಿದ್ದಾರೆ! ಎಂದು ರಾಹುಲ್ ಗಾಂಧಿ ಮೋದಿಯವರನ್ನು ಮೂದಲಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು "ಕೊಲೆ ಆರೋಪಿ" ಎಂದು ದೂರಿದ ರಾಹುಲ್ ಗಾಂಧಿ, ಅವರ ಮೇಲೂ ಟೀಕಾಸ್ತ್ರ ಪ್ರಯೋಗಿಸಲು ಮರೆಯಲಿಲ್ಲ. ಬಿಜೆಪಿ ಜನರಲ್ಲಿ ಭಯ ಮೂಡಿಸಲು ಪ್ರಯತ್ನಿಸುತ್ತಿದೆ ಎಂದ ರಾಹುಲ್ ಗಾಂಧಿ, ಈ ಸಂದರ್ಭದಲ್ಲಿ ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸ್ಮರಿಸಿಸದರು. ಆದರೆ ಗೌರಿ ಲಂಕೇಶ್ ಹತ್ಯೆಯ ಕುರಿತಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದರೂ, ಆರೋಪ ಇನ್ನೂ ಸಾಬೀತಾಗದಿರುವಾಗ ಬಿಜೆಪಿ ಭಯ ಹುಟ್ಟಿಸುತ್ತದೆ ಎಂಬ ಮಾತಿನ ಮಧ್ಯೆ ಗೌರಿ ಲಂಕೇಶ್ ಹತ್ಯೆಯನ್ನು ಎಳೆದು ತಂದಿದ್ದು ಏಕೆ ಎಂಬುದು ಅರ್ಥವಾಗದ ವಿಷಯ.

ಆರ್ ಎಸ್ ಎಸ್ ಕುರಿತೂ ವ್ಯಂಗ್ಯ

ಆರ್ ಎಸ್ ಎಸ್ ಕುರಿತೂ ವ್ಯಂಗ್ಯ

ಬಿಜೆಪಿ ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸುತ್ತಿದೆ. ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಕ್ಕಾಗಿ ಸಾರ್ವಜನಿಕವಾಗಿ ಮಾತನಾಡುವಂತಾಯ್ತು. ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವೆ ಸಾಕಷ್ಟು ಅಂತರವಿದೆ. ನಾವು ದೇಶದ ಸಂಸ್ಥೆಗಳನ್ನು ಗೌರವಿಸುತ್ತೇವೆ. ಆದರೆ ಅವರು ಅದನ್ನು ಮುಗಿಸಲು ನೋಡುತ್ತಾರೆ. ಈದೇಶದಾದ್ಯಂತ ಕೇವಲ ಆರ್ ಎಸ್ ಎಸ್ ಎಂಬ ಸಂಘಟನೆ ಮಾತ್ರ ಇರಬೇಕು ಎಂಬುದು ಅವರ ಇಂಗಿತ ಎಂದು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧವೂ ಹರಿಹಾಯ್ದರು.

English summary
Congress president Rahul Gandhi on Sunday continued his tirade against Prime Minister Narendra Modi and compared him with businessmen accused of committing fraud - Nirav Modi and Lalit Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X