• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಥಿಕ ಅಭಿವೃದ್ಧಿ: ಗುಜರಾತ್ ನಂಬರ್ 1 ಸ್ಥಾನ ಅಬಾಧಿತ

By Srinath
|

ನವದೆಹಲಿ, ಮಾರ್ಚ್ 19- ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ತನ್ನ ಪಾಡಿಗೆ ತಾನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ಗುಜರಾತಿನ ಬಗ್ಗೆ ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆ ಗುಜರಾತ್ ಆರ್ಥಿಕ ಅಭಿವೃದ್ಧಿ ನಕಲಿ/ನಗಣ್ಯ ಎಂಬ ಮಾತುಗಳು ಚಾಲ್ತಿಗೆ ಬಂದಿವೆ. ಆದರೆ ಈ ಅನುಮಾನಗಳನ್ನೆಲ್ಲಾ ದೂರ ಮಾಡುವಂತೆ ತಾಜಾ ಅಧ್ಯನ ವರದಿಯೊಂದು ಗುಜರಾತ್ ಆರ್ಥಿಕ ಅಭಿವೃದ್ಧಿ No. 1 ಸ್ಥಾನದಲ್ಲಿಯೇ ಇದೆ ಎಂದು ತಿಳಿಸಿದೆ.

Economic Freedom of the States of India report 2013 ಪ್ರಕಾರ ಗುಜರಾತ್ ಆರ್ಥಿಕ ಅಭಿವೃದ್ಧಿ No. 1 ಸ್ಥಾನದಲ್ಲಿದೆ. ಸರಕಾರದ ಆಡಳಿತ, ಬೆಳವಣಿಗೆ, ನಾಗರಿಕ ಹಕ್ಕುಗಳು, ಉದ್ಯೋಗ, ಉದ್ಯಮ ನಿಯಂತ್ರಣ ಮುಂತಾದ ಕ್ಷೇತ್ರಗಳನ್ನು ಮಾನದಂಡವಾಗಿ ಪರಿಗಣಿಸಿ ವರದಿ ಸಿದ್ಧಪಡಿಸಲಾಗಿದೆ. ದೇಶದ 20 ದೊಡ್ಡ ದೊಡ್ಡ ರಾಜ್ಯಗಳನ್ನು ವರದಿಗೆ ಪರಿಗಣಿಸಲಾಗಿತ್ತು.

ಗಮನಾರ್ಹವೆಂದರೆ ಬಿಹಾರ ರಾಜ್ಯವೂ ಸ್ವಲ್ಪ ಹೆಚ್ಚುಕಮ್ಮಿ ಗುಜರಾತ್ ಮಾದರಿಯಲ್ಲೇ ಪ್ರಗತಿ ಸಾಧಿಸಿದೆ. ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಅಂದರೆ 2005ರಿಂದೀಚೆಗೆ ಬಿಹಾರದ ಪ್ರಗತಿ ಗಮನಾರ್ಹವಾಗಿದೆ. [ಬಿರುಸಿನ ಮತಯಾಚನೆ ಚಿತ್ರಗಳು]

2013ರ ವಾರ್ಷಿಕ ಅಧ್ಯಯನ ವರದಿ ಪ್ರಕಾರ ರಾಜ್ಯಗಳ ಆರ್ಥಿಕಾಭಿವೃದ್ಧಿಯಲ್ಲಿ ಗುಜರಾತ್ ಶೇ. 65ರಷ್ಟು ಅಂಕ ಗಳಿಸಿದೆ. ತಮಿಳುನಾಡು ಶೇ. 54ರೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಜಂಟಿಯಾಗಿ ಅಮೆರಿಕ ಮತ್ತು ದೆಹಲಿಯಲ್ಲಿನ ಸಂಸ್ಥೆಗಳು ಈ ಅಧ್ಯಯನ ವರದಿ ಸಲ್ಲಿಸಿವೆ.

ಆರ್ಥಿಕಾಭಿವೃದ್ಧಿ ಸರಾಸರಿಯಲ್ಲಿ ಗುಜರಾತ್ ಶೇ. 12ರಷ್ಟು ಪ್ರಮಾಣವನ್ನು ಕಾಯ್ದುಕೊಂಡರೆ ಛತ್ತೀಸ್ ಗಡ ಶೇ. 10.6 ಸರಾಸರಿಯಲ್ಲಿದೆ. ಆದರೆ ತ್ವರಿತ ಪ್ರಗತಿ ಸಾಧಿಸುತ್ತಿರುವುದು ಗುಜರಾತ್ ಒಂದೇ ಎನ್ನುತ್ತಿದೆ ಸದರಿ ವರದಿ. Swaminathan S. Anklesaria Aiyar, Laveesh Bhandari ಮತ್ತು Bibek Debroy ಅವರಂತ ಖ್ಯಾತ ಅರ್ಥಶಾಸ್ತ್ರಜ್ಞರು ವರದಿ ಸಿದ್ಧಪಡಿಸುವಲ್ಲಿ ಶ್ರಮವಹಿಸಿದ್ದಾರೆ.

English summary
BJP PM candidate Narendra Modi-lead Gujarat continues to stay at number 1 in economic development says Economic Freedom of the States of India report 2013. This is an index that measures governance, growth, citizens' rights, and labour and business regulation among the country's 20 largest states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X