ಮೋದಿ ಭದ್ರತೆಗೆ ಮತ್ತಷ್ಟು ಎನ್‌ಎಸ್‌ಜಿ ಕಮಾಂಡೋಗಳು

ನವದೆಹಲಿ, ನ.11 : ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ರಕ್ಷಣೆಗೆ ಹೆಚ್ಚಿನ ಎನ್ಎಸ್ ಜಿ ಕಮಾಂಡೋಗಳನ್ನು ನೇಮಿಸಲು ಒಪ್ಪಿಗೆ ನೀಡಿದೆ. ಆದರೆ, ವಿಶೇಷ ಭದ್ರತಾ ಪಡೆಗಳ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

ದೆಹಲಿಯಲ್ಲಿ ಸೋಮವಾರ ಮಾತನಾಡಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಯ 108 ಕಮಾಂಡೋ ಪಡೆಗಳು ಭದ್ರತೆ ನೀಡುತ್ತಿವೆ. ಅದನ್ನು ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Narendra Modi

ಆದರೆ, ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಅವರಿಗೆ ವಿಶೇಷ ಭದ್ರತಾ ಪಡೆ (ಎಸ್ ಪಿಜಿ)ಪಡೆ ಮೂಲಕ ರಕ್ಷಣೆ ನೀಡುವುದು ಸಾಧ್ಯವಿಲ್ಲ. ಕಾನೂನು ಸಹ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿಂಧೆ ಹೇಳಿದರು. ಎನ್‌ಎಸ್‌ಜಿಯೊಂದಿಗೆ ಗುಜರಾತ್ ಪೊಲೀಸರು ಮೋದಿ ಅವರ ಭದ್ರತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಶಿಂಧೆ ಹೇಳಿದರು.

ಬಿಹಾರದ ಪಾಟ್ನಾದಲ್ಲಿ ನರೇಂದ್ರ ಮೋದಿ ಅವರ ಸಮಾವೇಶದ ಸಂದರ್ಭದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಮತ್ತು ಖಲಿಸ್ತಾನ ಉಗ್ರರು ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದ ನಂತರ, ಮೋದಿ ಅವರಿಗೆ ಎಸ್ ಪಿಜಿ ಭದ್ರತೆ ಒದಗಿಸಬೇಕೆಂದು ಬಿಜೆಪಿ ಒತ್ತಾಯಿಸಿತ್ತು. (ಮೋದಿ ಹತ್ಯೆಗೆ ಖಲಿಸ್ಥಾನಿ ಉಗ್ರರು)

ಈ ಬೇಡಿಕೆಯನ್ನು ನಿರಾಕರಿಸಿರುವ ಕೇಂದ್ರ ಸರ್ಕಾರ ನರೇಂದ್ರ ಮೋದಿ ಅವರಿಗೆ ಈಗಿರುವ 108 ಎನ್‌ಎಸ್‌ಜಿ ಪಡೆಗಳ ಕಮಾಂಡೋಗಳನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದರು. ಸದ್ಯ ಎನ್‌ಎಸ್‌ಜಿ ಕಮಾಂಡೋಗಳಿಂದ ಮೂರು ಹಂತದ ಭದ್ರತೆ ಪಡೆದಿರುವ ಮೋದಿ ಅವರ ಭದ್ರತೆಗೆ ಮತ್ತಷ್ಟು ಕಮಾಂಡೋಗಳು ಆಗಮಿಸಲಿದ್ದಾರೆ.

ನರೇಂದ್ರ ಮೋದಿ ನ.17ರಂದು ಬೆಂಗಳೂರಿನಲ್ಲಿ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಸಂಭವಿಸಿತ್ತು. ಆದ್ದರಿಂದ ನರೇಂದ್ರ ಮೋದಿ ಸಮಾವೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಮೋದಿ ಸಮಾವೇಶ ನಡೆಯುವ ಅರಮನೆ ಮೈದಾನವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು, ಸಮಾವೇಶಕ್ಕೆ ಒಂದು ವಾರ ಬಾಕಿ ಇರುವಂತೆಯೇ ಭದ್ರತೆಯ ಉಸ್ತುವಾರಿ ಕೈಗೊಂಡಿದ್ದಾರೆ. (ಅರಮನೆ ಮೈದಾನ ಪೊಲೀಸ್ ವಶಕ್ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+