ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ಈಸ್‌ ಆಫ್‌ ಲಿವಿಂಗ್‌ ಹೆಚ್ಚಿಸಿ: ಕಾರ್ಯದರ್ಶಿಗಳಿಗೆ ಮೋದಿ ಸೂಚನೆ

|
Google Oneindia Kannada News

ನವದೆಹಲಿ, ಜೂನ್ 11: ಮುಂದಿನ ಐದು ವರ್ಷಗಳಲ್ಲಿ ಜೀವನ ಸ್ನೇಹಿ ಆಡಳಿತ(ಈಸ್‌ ಆಫ್‌ ಲಿವಿಂಗ್‌) ನೀಡಿ ಎಂದು ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಮೋದಿ ಸೂಚಿಸಿದ್ದಾರೆ.

ಪ್ರಧಾನಿ ಕಾರ್ಯಾಲಯದಲ್ಲಿ ಎಲ್ಲ ಕಾರ್ಯದರ್ಶಿಗಳ ವಿಶೇಷ ಸಭೆ ನಡೆಸಿದ ಮೋದಿ, ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಉದ್ದೇಶ ಹಾಗೂ ಕಾರ್ಯಯೋಜನೆಯ ನೀಲನಕ್ಷೆಯನ್ನು ಕಾರ್ಯದರ್ಶಿಗಳ ಮುಂದೆ ತೆರೆದಿಟ್ಟಿದ್ದಾರೆ.

ಹೀಗಾಗಿ ಜನರ ನಿರೀಕ್ಷೆ ಹಾಗೂ ಚುನಾವಣಾ ಫಲಿತಾಂಶಕ್ಕೆ ಸಮನಾಗಿ ಕೆಲಸ ಮಾಡಬೇಕು. ಹೀಗಾಗಿ ಜನರ ಜೀವನಮಟ್ಟ ಸುಧಾರಣೆಗೆ ಪ್ರತಿಯೊಬ್ಬ ಅಧಿಕಾರಿಗಳು ಆಯಾ ಸಚಿವಾಲಯದ ವ್ಯಾಪ್ತಿಯಲ್ಲಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದ್ದಾರೆ.

Modi called for Is Of Living

ನೀರಾವರಿ, ಕುಡಿಯುವ ನೀರು, ಕೃಷಿ ಹಾಗೂ ಪಶುಸಂಗೋಪನೆ ವಲಯವು ಈ ಬಾರಿಯ ಆದ್ಯತಾ ವಲಯವಾಗಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಈ ಕ್ಷೇತ್ರದ ಅಭಿವೃದ್ಧಿಯಿಂದ ಕೃಷಿಕರ ಆದಾಯ ದ್ವಿಗುಣದ ಜತೆಗೆ ದೇಶದ ಅಭಿವೃದ್ಧಿಗೆ ಮುಂದಡಿ ಇಡಬಹುದು ಎಂದು ಮೋದಿ ತಿಳಿಸಿದ್ದಾರೆ.

ಇದರ ಜತೆಗೆ ಮೇಕ್‌ ಇನ್‌ ಇಂಡಿಯಾ, 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ, ಎಲ್ಲ ಜಿಲ್ಲೆಗಳನ್ನು ಹಿಂದುಳಿದ ಪಟ್ಟಿಗಳಿಂದ ಹೊರತೆಗೆಯುವುದು ಸೇರಿ ಇತರ ವಿಚಾರಗಳ ಬಗ್ಗೆ ಗಮನ ಕೇಂದ್ರೀಕರಿಸಲು ಮೋದಿ ಸೂಚಿಸಿದ್ದಾರೆ.

ಕಾರ್ಯದರ್ಶಿಗಳಿಗೆ ಬಿಗ್‌ ಟಾಸ್ಕ್‌: ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಎರಡು ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಪ್ರತಿ ಸಚಿವಾಲಯ ಏನು ಮಾಡಬೇಕು ಹಾಗೂ ಮೊದಲ 100 ದಿನಗಳಲ್ಲಿ ಏನು ಮಾಡಬೇಕು ಎಂಬ ಕಾರ್ಯಯೋಜನೆಯ ಪ್ರತ್ಯೇಕ ಗುರಿಯನ್ನು ಅಧಿಕಾರಿಗಳಿಗೆ ಮೋದಿ ನೀಡಿದ್ದಾರೆ.

ಹಾಗೆಯೇ 100 ದಿನಗಳ ಬಳಿಕ ಪ್ರತಿ ಸಚಿವಾಲಯವೂ ಪ್ರಧಾನಿ ಕಚೇರಿಗೆ ಕಾರ್ಯಸಾಧನೆಯ ಪ್ರತ್ಯೇಕ ವರದಿ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ನೀಡುವ ಸಲಹೆ, ಸೂಚನೆಗಳಿಗೂ ಸ್ವಾಗತವಿದೆ ಎಂದು ಮೋದಿ ತಿಳಿಸಿದ್ದಾರೆ.

ಭಾಷಣದ ಕೊನೆಗೆ ಜನರ ಮರುಆಯ್ಕೆಯ ಚುನಾವಣೆ ಫಲಿತಾಂಶಕ್ಕೆ ಅಧಿಕಾರಿಗಳ ಶ್ರಮವೂ ಕಾರಣ ಎಂದಿದ್ದಾರೆ. ಉತ್ತಮ ಆಡಳಿತಕ್ಕೆ ಜನ ಮತ್ತೆ ಮತ ನೀಡಿದ್ದಾರೆ. ಇದರ ಹಿಂದೆ ಅಧಿಕಾರಿಗಳ ಶ್ರಮವೂ ಇದೆ. ಇದೇ ರೀತಿಯ ಧನಾತ್ಮಕ ಕೆಲಸ ಮುಂದುವರಿಸಿ. ಜನರ ನಿರೀಕ್ಷೆ ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಅಧಿಕಾರಿಗಳಿಗೆ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

English summary
Prime minister Narendra had discussion with all the secretaries and calle for Is Of Living for next five years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X