ಭೋಪಾಲ್: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿಸಿದ ಮಹಿಳೆ!

Posted By:
Subscribe to Oneindia Kannada

ಭೋಪಾಲ್, ನವೆಂಬರ್ 17: ರಾಜಧಾನಿ ದೆಹಲಿ ಮತ್ತು ಮಧ್ಯಪ್ರದೇಶದ ಭೋಪಾಲ್ ಗಳಲ್ಲಿ ನಿನ್ನೆ(ನವೆಂಬರ್ 16) ನಡೆದ ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಮಹಿಳಾ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ದೇಶ ಚಿಂತಿಸಬೇಕಾದ ಅಗತ್ಯವನ್ನು ತೋರಿಸಿದೆ.

ಬೆಂಗಳೂರಿನಲ್ಲಿ ಯುವತಿ ಮೇಲೆ 10 ದಿನ ನಿರಂತರ ಅತ್ಯಾಚಾರ

ಭೋಪಾಲ್ ನಲ್ಲಿ ನಿನ್ನೆ ಅಪ್ರಾಪ್ತ ಯುವತಿಯೊಬ್ಬಳನ್ನು ತನ್ನ ಮನೆಗೆ ಕರೆಸಿಕೊಂಡ ಮಹಿಳೆಯೊಬ್ಬರು ಪರಿಚಿತ ಮೂವರು ಪುರುಷರಿಗೆ ಹೇಳಿ ಆಕೆಯ ಮೆಲೆ ಸಾಮೂಹಿಕ ಅತ್ಯಾಚಾರ ಮಾಡಿಸಿದ ಹೇಯಕೃತ್ಯ ಬೆಳಕಿಗೆ ಬಂದಿದೆ.

Minor gang-raped in Bhopal, 4 arrested

ಘಟನೆಗೆ ಸಂಬಂಧಿಸಿದಂತೆ ಮೂವರು ಅತ್ಯಾಚಾರಿಗಳನ್ನು ಮತ್ತು ಓರ್ವ ಮಹಿಳೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೆಹಲಿಯಲ್ಲೂ ಸಾಮೂಹಿಕ ಅತ್ಯಾಚಾರ
ನ.14 ರಂದು ಮಧ್ಯರಾತ್ರಿ ಟ್ಯಾಕ್ಸಿಯೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯ ಮೇಲೆ ಟ್ಯಾಕ್ಸಿ ಡ್ರೈವರ್ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಬಳಿಯಿದ್ದ ಚಿನ್ನ, ಹಣ ಮತ್ತು ಮೊಬೈಲ್ ಗಳನ್ನು ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ಪ್ರಯಾಣಿಸುತ್ತಿದ್ದ ಟ್ಯಾಕ್ಸಿಗೆ ಮಾರ್ಗಮಧ್ಯೆ ತನ್ನ ಸ್ನೇಹಿತರನ್ನೂ ಟ್ಯಾಕ್ಸಿ ಡ್ರೈವರ್ ಹತ್ತಿಸಿಕೊಂಡಿದ್ದಾನೆ. ಆ ಸಹಚರರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುವುದಕ್ಕೆ ಆರಂಭಿಸಿದ್ದಾರೆ. ಆಕೆ ತಡೆಯುವುದಕ್ಕೆ ಪ್ರಯತ್ನಿಸಿದರೆ ಆಕೆಯ ಬಾಯಿ ಕಟ್ಟಿ, ಗ್ರೇಟರ್ ನೋಯ್ಡಾ ಬಳಿ ಕರೆದುಕೊಂಡು ಹೋಗಿ, ನಿರ್ಜನ ಪ್ರದೇಶವೊಂದರಲ್ಲಿ ಅತ್ಯಾಚಾರ ಎಸಗಿದ್ದಾರೆ.

ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಅತ್ಯಾಚಾರಿಗಳ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In two different incidents, a minor girl was allegedly gang-raped in Madhya Pradesh's Bhopal on Nov 17th and a woman was allegedly gang raped and looted by taxi driver and his associate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ