ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಘಾತ: ಭಾರತದ ಪಾಲಿಗೆ 'ಮೇ' ಅತ್ಯಂತ ಕೆಟ್ಟ ತಿಂಗಳು

|
Google Oneindia Kannada News

ದೆಹಲಿ, ಜೂನ್ 10: ಭಾರತಕ್ಕೆ ಕೊರೊನಾ ವೈರಸ್ ಎಂಬ ಮಹಾಮಾರಿ ವಕ್ಕರಿಸಿ ಸುಮಾರು ನಾಲ್ಕೈದು ತಿಂಗಳು ಕಳೆಯುತ್ತಿದೆ. ಜನವರಿ 30 ರಂದು ಭಾರತದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಆರಂಭದಲ್ಲಿ ಎಲ್ಲವೂ ಓಕೆ, ಕೊರೊನಾ ನಿಯಂತ್ರಿಸುವಲ್ಲಿ ಭಾರತ ಯಶಸ್ಸು ಕಾಣಲಿದೆ ಎಂಬ ನಿರೀಕ್ಷೆ ಹೆಚ್ಚಿತ್ತು.

Recommended Video

June is going to be a menacing month in terms of Corona | Oneindia Kannada

ಆದರೆ, ದಿನಗಳು ಕಳೆದಂತೆ ತಿಂಗಳು ಉರುಳಿದಂತೆ ಜಗತ್ತಿನ ಕೊರೊನಾ ಹಾಟ್‌ಸ್ಪಾಟ್‌ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನಕ್ಕೆ ಬಂದು ನಿಂತಿದೆ. ಇದು ಮತ್ತಷ್ಟು ಮೇಲಕ್ಕೆ ಜಿಗಿಯುವ ಸಾಧ್ಯತೆಯೂ ಇದೆ.

ಜನಸಂಖ್ಯೆ ಆಧಾರದಲ್ಲಿ ಐಸಿಎಂಆರ್ ಸಮೀಕ್ಷೆ: ಕೊರೊನಾ ಕುರಿತು ಅಚ್ಚರಿ ವರದಿಜನಸಂಖ್ಯೆ ಆಧಾರದಲ್ಲಿ ಐಸಿಎಂಆರ್ ಸಮೀಕ್ಷೆ: ಕೊರೊನಾ ಕುರಿತು ಅಚ್ಚರಿ ವರದಿ

ಇಲ್ಲಿಯವರೆಗೂ ಭಾರತದ ಅಂಕಿ ಅಂಶಗಳನ್ನು ಗಮನಿಸಿದರೆ 'ಮೇ' ತಿಂಗಳ ಅತ್ಯಂತ ಕೆಟ್ಟದಾಗಿದೆ. ಮೇ ತಿಂಗಳಿಗೆ ಹೋಲಿಸಿಕೊಂಡರೆ ಜೂನ್ ತಿಂಗಳು ಅತಿ ಭೀಕರತೆ ಸೃಷ್ಟಿಸಬಹುದು ಎಂಬ ಆತಂಕವೂ ಇದೆ. ಮುಂದೆ ಓದಿ.....

ಭಾರತಕ್ಕೆ 'ಮೇ' ಕಂಟಕ

ಭಾರತಕ್ಕೆ 'ಮೇ' ಕಂಟಕ

ಜೂನ್ 9ರವರೆಗೂ ಭಾರತದಲ್ಲಿ 2.6 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ತಗುಲಿದೆ. ಆದರೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಸೋಂಕು ವರದಿಯಾಗಿದ್ದು ಮೇ ತಿಂಗಳಲ್ಲಿ. ಈ ಬಗ್ಗೆ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದ್ದು, ಮೇ ತಿಂಗಳಲ್ಲಿ 1.53 ಲಕ್ಷ ಕೇಸ್‌ಗಳು ದಾಖಲಾಗಿದೆ. ಅಂದ್ರೆ, ದೇಶದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು.

40 ದಿನದಲ್ಲಿ ಶೇಕಡಾ 86 ರಷ್ಟು ಕೇಸ್

40 ದಿನದಲ್ಲಿ ಶೇಕಡಾ 86 ರಷ್ಟು ಕೇಸ್

ಮೇ ಮತ್ತು ಜೂನ್ ತಿಂಗಳಲ್ಲಿ ಕೊರೊನಾ ವೈರಸ್ ತೀವ್ರತೆ ಭಾರತದಲ್ಲಿ ಹೆಚ್ಚಾಗಿದೆ. ದೇಶದ ಒಟ್ಟು ಪ್ರಕರಣಗಳ ಪೈಕಿ ಕಳೆದ 40 ದಿನದಲ್ಲಿ ಶೇಕಡಾ 86ರಷ್ಟು ಸೋಂಕು ಪತ್ತೆಯಾಗಿದೆ. ಇನ್ನು ಶೇಕಡಾ 84 ರಷ್ಟು ಜನರು ಮೇ ಮತ್ತು ಜೂನ್ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿ

9 ದಿನದಲ್ಲಿ 76 ಸಾವಿರ ಕೇಸ್

9 ದಿನದಲ್ಲಿ 76 ಸಾವಿರ ಕೇಸ್

ಜೂನ್ 1ರಿಂದ ದೇಶದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಚಟುವಟಿಕೆ ಆರಂಭವಾಗಿದೆ. ಮತ್ತೊಂದೆಡೆ ಪ್ರತಿದಿನ ದಾಖಲಾಗುತ್ತಿರುವ ಸೋಂಕಿನ ಸಂಖ್ಯೆಯೇ ಭಾರಿ ಏರಿಕೆ ಕಂಡಿದೆ. ಕಳೆದ 9 ದಿನದಲ್ಲಿ 76000 ಸಾವಿರ ಜನರಿಗೆ ಕೊರೊನಾ ಅಂಟಿಕೊಂಡಿದೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಈ ಅಂಕಿ ಅಂಶ ನೋಡಿದ್ರೆ ಮೇ ತಿಂಗಳಿಗಿಂತ ಜೂನ್ ತಿಂಗಳಲ್ಲಿ ಭಾರತಕ್ಕೆ ಹೆಚ್ಚು ಸಂಕಷ್ಟ ಎದುರಾಗಲಿದೆ.

ಮಾಲ್, ಧಾರ್ಮಿಕ ಸ್ಥಳ ಆರಂಭ

ಮಾಲ್, ಧಾರ್ಮಿಕ ಸ್ಥಳ ಆರಂಭ

ಜೂನ್ 8 ರಿಂದ ದೇಶಾದ್ಯಂತ ಮಾಲ್, ಹೋಟೆಲ್. ರೆಸ್ಟೋರೆಂಟ್ ಹಾಗೂ ಧಾರ್ಮಿಕ ಸ್ಥಳಗಳು (ಚರ್ಚ್, ಮಸೀದಿ, ದೇವಸ್ಥಾನ) ತೆರೆದಿದೆ. ಸಾರ್ವಜನಿಕ ಬಸ್‌ಗಳ ಸಂಚಾರ ಆರಂಭಗೊಂಡಿದೆ. ಅಂತರರಾಜ್ಯ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಲಾಕ್‌ಡೌನ್‌ ಕಡೆಯಿಂದ ಅನ್‌ಲಾಕ್‌ ಕಡೆಗೆ ಭಾರತ ಹೆಜ್ಜೆ ಹಾಕಿದೆ. ಆದರೆ, ಕೊರೊನಾ ವೈರಸ್ ಮಾತ್ರ ಮೊದಲಿಗಿಂತ ಈಗ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದೆಲ್ಲ ಗಮನಿಸಿದರೆ ಜೂನ್ ಹಾಗೂ ಜುಲೈ ತಿಂಗಳು ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ.

ಮೂರನೇ ಸ್ಥಾನಕ್ಕೆ ಭಾರತ!

ಮೂರನೇ ಸ್ಥಾನಕ್ಕೆ ಭಾರತ!

ಅತಿ ಹೆಚ್ಚು ಸೋಂಕು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ ಮೊದಲ ಮೂರು ಸ್ಥಾನದಲ್ಲಿದೆ. ಯುಕೆ, ಸ್ಪೇನ್ ಹಿಂದಿರುವ ಭಾರತ ಈ ವಾರಾಂತ್ಯಕ್ಕೆ ಈ ಎರಡು ದೇಶಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿಯಲಿದೆ. ಪ್ರಸ್ತುತ ಅಮೆರಿಕ, ಬ್ರೆಜಿಲ್ ನಂತರ ಭಾರತದಲ್ಲಿ ಅತಿ ಹೆಚ್ಚು ಹೊಸ ಕೇಸ್‌ಗಳ ವರದಿಯಾಗುತ್ತಿದೆ.

English summary
Coronavirus update: May month was the worst for india in case of COVID 19. around 1.53 lakh people are infected coronavirus in may month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X