ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಮೋರಿಗೆ ಉರುಳಿದ ಬಸ್; 29 ಮಂದಿ ಸಾವು

ನವದೆಹಲಿ, ಜುಲೈ 8: ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ, ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.

ಸ್ಲೀಪರ್ ಕೋಚ್ ಬಸ್ ವೊಂದು ಲಖನೌದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಹದಿನೈದು ಅಡಿ ಆಳಕ್ಕೆ ಮಗುಚಿ ಬಿತ್ತು. ಈ ವರೆಗೆ ಇಪ್ಪತ್ತು ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ವರದಿ ಪ್ರಕಾರ, ಈ ಭಾರೀ ವಾಹನದ ನಿಯಂತ್ರಣ ಕಳೆದುಕೊಳ್ಳುವ ಮುನ್ನ ಚಾಲಕ ನಿದ್ರೆಗೆ ಜಾರಿದ್ದ.

Many people dead after bus fell in to the drain in Yamuna express way

ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಹಾಗೂ ಗಾಯಗೊಂಡವರ ಕುಟುಂಬದವರಿಗೆ ಎಲ್ಲ ಅಗತ್ಯ ನೆರವು ನೀಡುವಂತೆ ಅವರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+