ದೆಹಲಿ ಬಿಜೆಪಿ ಅಧ್ಯಕ್ಷರಾಗಿ ಆದೇಶ್ ಕುಮಾರ್ ಗುಪ್ತಾ ನೇಮಕ
ನವದೆಹಲಿ, ಜೂನ್ 2: ದೆಹಲಿಯ ಬಿಜೆಪಿ ಅಧ್ಯಕ್ಷರಾಗಿ ಮನೋಜ್ ತಿವಾರಿ ಜಾಗಕ್ಕೆ ಆದೇಶ ಕುಮಾರ್ ಗುಪ್ತಾ ನೇಮಕಗೊಂಡಿದ್ದಾರೆ.
Recommended Video
ಕೊರೊನಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ | Oneindia Kannada
ಆದೇಶ್ ಗುಪ್ತಾ ದೆಹಲಿ ಮುನ್ಸಿಪಾಲ್ ಕಾರ್ಪೊರೇಷನ್ ಮೇಯರ್ ಆಗಿದ್ದರು. ಮನೋಜ್ ತಿವಾರಿ 2016ರಲ್ಲಿ ದೆಹಲಿಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರ ಕಾರ್ಯ ಅಷ್ಟೊಂದು ತೃಪ್ತಿದಾಯಕವಾಗಿಲ್ಲದ ಕಾರಣ ಅವರ ಜಾಗಕ್ಕೆ ಆದೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಶೀಘ್ರವೇ ಮನೋಜ್ ತಿವಾರಿಯವರಿಗೆ ರಾಜೀನಾಮೆ ನೀಡುವಂತೆ ತಿಳಿಸಲಾಗಿದೆ. ದೆಹಲಿಯಲ್ಲಿ ಚುನಾವಣೆಯಲ್ಲಿ ಸೋತ ಬಳಿಕ ಬೇರೆ ಅಭ್ಯರ್ಥಿ ಸಿಗುವವರೆಗೂ ಮುಂದುವರೆಯುವಂತೆ ಹೇಳಲಾಗಿತ್ತು.

ದೆಹಲಿಯ ಚಾಂದಿನಿಚೌಕದಿಂದ ಹರ್ಷ ವರ್ಧನ್, ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ, ಪೂರ್ವ ದೆಹಲಿಯಿಂದ ಗೌತಮ್ ಗಂಭೀರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.












Click it and Unblock the Notifications